ತುಮಕೂರು : ಒಂದೇ ದಿನ ಕೊರೊನಾ ವಾರಿಯರ್ ಸೇರಿ 5 ಮಂದಿ ಸಾವು!!

 ತುಮಕೂರು :

      ಜಿಲ್ಲೆಯಲ್ಲಿ ಹೊಸದಾಗಿ 1235 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39709ಕ್ಕೆ ಏರಿಕೆಯಾಗಿದೆ. ಹೊಸದಾಗಿ 457 ಮಂದಿ ಬಿಡುಗಡೆಹೊಂದಿದ್ದಾರೆ.

      ಸೋಂಕಿತರ ಪೈಕಿ ಚಿ.ನಾ.ಹಳ್ಳಿ 13, ಗುಬ್ಬಿ 265, ಕೊರಟಗೆರೆ 52, ಕುಣಿಗಲ್ 39, ಮಧುಗಿರಿ 68, ಪಾವಗಡ 81, ಶಿರಾ 29,ತಿಪಟೂರು 124, ತುಮಕೂರು 508 ಹಾಗೂ ತುರುವೇಕೆರೆಯಲ್ಲಿ 56 ಪ್ರಕರಣಗಳು ಕಂಡುಬಂದಿವೆ. ಸೋಂಕಿತರ ಪೈಕಿ 651 ಪುರುಷರು, 584 ಮಹಿಳೆಯರಿದ್ದು, 5 ವರ್ಷದೊಳಗಿನ 8 ಮಕ್ಕಳು 60 ವರ್ಷ ಮೇಲ್ಪಟ್ಟ 194 ಹಿರಿಯ ನಾಗರಿಕರು ಸೇರಿದ್ದಾರೆ.
ಮೃತಪಟ್ಟವರ ವಿವರ: ಕೋವಿಡ್ ಮತ್ತು ಅನ್ಯ ಕಾರಣದಿಂದ ಮೃತರಾದವರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು 37 ವರ್ಷದ ಪುರುಷ, ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಗ್ರಾಮದ 62 ವರ್ಷದ ಹಿರಿಯ ನಾಗರಿಕರು, ತುಮಕೂರು ನಗರದ ಗೋಕುಲ ಬಡಾವಣೆಯ 66 ವರ್ಷದ ಹಿರಿಯ ನಾಗಿಕರು, ತುಮಕೂರು ಬಟವಾಡಿಯ 63 ವರ್ಷದ ವ್ಯಕ್ತಿ ಹಾಗೂ ತುಮಕೂರು ನಗರದ 72 ವರ್ಷದ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.
 
ಕೊರೊನಾ ವಾರಿಯರ್ ಬಲಿ :

      ತುಮಕೂರು ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಸೆಂಟರ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಕೊರೊನಾ ವಾರಿಯರ್ ಮದನ್ ಎಂಬುವರು ಸಹ ಕೋವಿಡ್‍ಗೆ ಬಲಿಯಾಗಿದ್ದು, ವರ್ಷದ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

      ಹೆಬ್ಬೂರಿನಲ್ಲಿ ಪತ್ನಿ, ತಾಯಿ, ಅಜ್ಜಿ ಹಾಗೂ ಕಿರಿಯ ಸಹೋದರರೊಂದಿಗೆ ವಾಸಿಸುತ್ತಿದ್ದ ಇವರು ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಏಜೆನ್ಸಿ ನೌಕರರಾಗಿ ಡಯಾಲಿಸಿಸ್ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇನ್ನೂ ಬಾಳಿ ಬದುಕಬೇಕಾದ ವಯಸ್ಸಲ್ಲಿ ಕೋವಿಡ್‍ಗೆ ದುರಂತ ಸಾವನ್ನಪ್ಪಿದ್ದು, ದುರಂತವೆನಿಸಿದೆ.

ಜಿಲ್ಲಾಸ್ಪತ್ರೆಯ ಕೊರೊನಾ ವಾರಿಯರ್ ಮೃತಪಟ್ಟಿದ್ದರೂ ಜಿಲ್ಲಾ ಆರೋಗ್ಯ ಇಲಾಖೆ ಸೋಮವಾರ ಸಂಜೆ ಬಿಡುಗಡೆಮಾಡಿರುವ ಬುಲೆಟಿನ್‍ನಲ್ಲಿ ಅವರ ವಿವರವೇ ಇಲ್ಲದಿರುವುದು ಬುಲೆಟಿನ್‍ನಲ್ಲಿ ನೀಡುತ್ತಿರುವ ಕೋವಿಡ್ ಮೃತರ ಖಚಿತತೆ ಬಗೆಗೆ ಅನುಮಾನಗಳಿಗೆ ಎಡೆಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap