ತುರುವೇಕೆರೆ:
ಜೆಡಿಎಸ್-ಕಾಂಗ್ರೇಸ್ ಶಾಸಕರನ್ನು ರಾಜಿನಾಮೆ ಕೊಡಿಸಿ ಸಂಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರ್‍ಸ್ವಾಮಿಯನ್ನು ಕೆಳಗಿಳಿಸಲು ಬಿಜೆಪಿ ಮಾಡುತ್ತಿರುವ ನೀಚ ರಾಜಕಾರಣವನ್ನು ಖಂಡಿಸಿ ಜು 12 ಶುಕ್ರವಾರ ತಾಲೂಕು ಬಂದ್ ಕರೆ ನೀಡಲಾಗಿದೆ ಎಂದು ಜೆಡಿಎಸ್ ತಾಲೂಕು ಆಧ್ಯಕ್ಷ ಸ್ವಾಮಿ ತಿಳಿಸಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೈತ್ರಿ ಸರ್ಕಾರವನ್ನು ಕೆಡೆವಲು ಸುಮಾರು ದಿನಗಳಿಂದ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕಾಂಗ್ರೇಸ್ – ಜೆಡಿಎಸ್ ಶಾಸಕರುಗಳಿಗೆ ಇಲ್ಲಸಲ್ಲದ ಆಮೀಷ ಒಡ್ಡಿ ಅವರನ್ನು ರಾಜೀನಾಮೇಗೆ ಪ್ರಚೋದಿಸಿ ಪ್ರಜಾಪ್ರಬುತ್ವದ ವಿರೋದಿ ಕೃತ್ಯಗಳನ್ನು ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಅದ್ದರಿಂದ ಬಿಜೆಪಿಯ ನೆಡೆಯನ್ನು ಖಂಡಿಸಿ ತಾಲೂಕು ಜೆಡಿಎಸ್-ಕಾಂಗ್ರೇಸ್ ಮುಖಂಡರು ಕಾರ್ಯಕರ್ತರಿಂದ ಶುಕ್ರವಾರ ತಾಲೂಕು ಬಂದ್ ಕರೆ ನೀಡಲಾಗಿದೆ ಎಲ್ಲ ಕಾರ್ಯಕರ್ತರು ಆಗಮಿಸಬೇಕಾಗಿ ಹಾಗೂ ಎಲ್ಲ ಅಂಗಡಿ ಮಾಲಿಕರು ಸ್ವಯಂಪ್ರೇರಿತರಾಗಿ ಅಂಗಡಿಗಳನನು ಮುಚ್ಚಿ ಬಂದ್‍ಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ತಾ.ಪಂ. ಉಪಾಧ್ಯಕ್ಷ ನಂಜೇಗೌಡ ಮಾತನಾಡಿ ರಾಜ್ಯ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಉತ್ತಮ ಆಡಳಿತ ನೀಡುತ್ತಿದ್ದರು. ಗ್ರಾಮ ವಾಸ್ತವ್ಯದಂತಹ ಹಲವಾರು ಜನಸ್ನೇಹಿ ಕಾರ್ಯಕ್ರಮಗಳನನು ನೀಡಿ ರಾಜ್ಯದ ಜನರ ಮನಗೆದ್ದಿದ್ದಾರೆ. ಆದರೆ ಇದನ್ನು ಸಹಿಸದ ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರ ಇಡಿಯಲು ವಾಮ ಮಾರ್ಗದಲ್ಲಿ ಕಾಂಗ್ರೇಸ್ – ಜೆಡಿಎಸ್ ಶಾಸಕರನ್ನು ರಾಜೀನಾಮೇ ನೀಡುವಂತೆ ಮಾಡುತ್ತಿದೆ. ರಾಜೀನಾಮೇ ನೀಡಿದ ಶಾಸಕರ ಜೊತೆ ಮಾತನಾಡಲು ಬಾಂಬೆಗೆ ತೆರಳಿದ ಸಚಿವ ಡಿ.ಕೆ.ಶಿವಕುಮಾರ್ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಬಂದಿಸಿದೆ ಕೂಡಲೇ ಬಿಡುಗಡೆಗೊಳಿಸಿ ರಾಜೀನಾಮೆ ನೀಡಿದ ಶಾಸಕರ ಜೊತೆ ಮಾತನಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ್, ಎಪಿಎಂಸಿ ಸದಸ್ಯ ರಾಜು, ಜೆಡಿಎಸ್ ಮುಖಂಡರಾದ ಕೊಳಾಲಗಂಗಾಧರ್, ವೆಂಕಟಪುರಯೋಗಾನಂದ್, ಬಾಣಸಂದ್ರರಮೇಶ್, ಜಪ್ರುಲಖಾನ್, ಶ್ರೀನಿವಾಸ್, ತಿಮ್ಮೇಗೌಡ, ಕಿರಣ್, ಸುಂದರ, ಚೇತನ್ ಇತರರು ಇದ್ದರು.