ಅಕ್ಷಯ ತೃತೀಯದಂದು ಯಶ್-ರಾಧಿಕಾ ಪುತ್ರಿಯ ಫೋಟೋ ರಿವೀಲ್!!!

0
32

ಬೆಂಗಳೂರು:

      ಇನ್ನು ಎರಡು ದಿನ ಕಾದರೆ ಅಭಿಮಾನಿಗಳು ಯಶ್ ಹಾಗೂ ರಾಧಿಕಾ ಪ್ರೀತಿಯ ಪುತ್ರಿಯನ್ನು ನೋಡಬಹುದಾಗಿದೆ.

       ಸ್ಯಾಂಡಲ್ ವುಡ್ ಸ್ಟಾರ್ ಕಪಲ್ ಎಂದೇ ಖ್ಯಾತರಾಗಿರುವ ಯಶ್, ರಾಧಿಕಾ ಪಂಡಿತ್ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬಕ್ಕೆ ಮಹಾಲಕ್ಷ್ಮಿ ಕಾಲಿಟ್ಟು ಕೆಲ ತಿಂಗಳು ಕಳೆದಿವೆ. ರಾಕಿಂಗ್ ಜೋಡಿಯ ಮುದ್ದು ಮಗುವಿಗೆ ಅಭಿಮಾನಿಗಳ ಪ್ರೀತಿ ಸಿಕ್ಕಿದೆ. ಹೀಗಾಗಿ ಅಭಿಮಾನಿಗಳು ಯಶ್ ಮಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದು ಮೇ 7ರಂದು ಮಗಳ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ ಹೇಳಿದ್ದಾರೆ.

A father daughter relationship is a priceless one!! I know all of u are waiting to see our lil angel, won't disappoint…

Posted by Radhika Pandit on Sunday, May 5, 2019

       ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಯಶ್ ತಮ್ಮ ಮಗಳನ್ನು ಮುದ್ದಿಸುವ ಫೋಟೋ ಹಾಕಿರುವ ಅವರು ”ತಂದೆ ಮತ್ತು ಮಗಳ ಸಂಬಂಧ ಬೆಲೆ ಕಟ್ಟಲಾಗದು. ನೀವು ನಮ್ಮ ರಾಣಿಯನ್ನು ನೋಡಲು ಕಾಯುತ್ತಿದ್ದೀರಿ. ನಾವು ನಿಮ್ಮನ್ನು ನಿರಾಸೆ ಮಾಡುವುದಿಲ್ಲ. ಈ ಮೇ 7 ರ ಅಕ್ಷಯ ತೃತೀಯದ ದಿನ ನಾವು ನಮ್ಮ ನಿಜವಾದ ನಿಧಿಯನ್ನು ತೋರಿಸುತ್ತೇವೆ ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here