ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣ ಪ್ರಚಾರಕ್ಕೆ ಚಾಲನೆ

ಹಾವೇರಿ :

  ನಗರದ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಜೆಡಿಎಸ್ ಅಭ್ಯರ್ಥಿಗಳ ಪರ ಮಾಜಿ ಶಾಸಕರಾದ ಎ. ಎನ್. ಕೋನರಡ್ಡಿ ರವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಮಹತ್ವವನ್ನು ಪಡೆದಿವೆ. ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ವ್ಯಕ್ತಿ ಧೀರ್ಘಕಾಲ ರಾಜಕೀಯದಲ್ಲಿ ತೊಡಗಬೇಕು. ಈ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವ ಮೂಲಕ ಪಕ್ಷಕ್ಕೆ ಹೊಸ ಶಕ್ತಿ ಮತ್ತು ಚೈತನ್ಯವನ್ನು ತುಂಬುವ ಚುನಾವಣೆಯಾಗಲಿದೆ.

  ಈ ಹಿಂದೆ ಜನತಾ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಮತ್ತು ನಗರಸಭೆಯನ್ನಾಗಿ ಮಾಡಿದ್ದು, ಹಾವೇರಿ ನಗರಕ್ಕೆ ತುಂಗಾಭದ್ರಾದಿಂದ ಕುಡಿಯುವ ನೀರಿನ ಯೋಜನೆಯನ್ನು ಕಲ್ಪಸಿದ್ದು, ಈ ಜನತಾ ಪರಿವಾರದವರು. ನಂತರ ನಗರಸಭೆ ಆಡಳಿತ ಮಾಡಿದ ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಿಂದ ತುಂಬು ತುಳುಕುವಂತೆ ಮಾಡಿದೆ. ಹಾವೇರಿ ನಗರಸಭೆಯನ್ನು ಗ್ರೇಡ್ 1 ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಎಲ್ಲ ವರ್ಗದ ಜನಾಂಗದ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಇವರನ್ನು ಆಶೀರ್ವದಿಸಿ ಗೆಲ್ಲಿಸಿ ನಗರವನ್ನು ಸ್ವಚ್ಛ ಸುಂದರ ನಗರವನ್ನು ಮಾಡಲು ಆಯ್ಕೆ ಮಾಡಬೇಕೆಂದು ಕೋನರಡ್ಡಿ ಮತದಾರರಿಗೆ ವಿನಂತಿಸಿದರು.

  ನಂತರ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾ|| ಸಂಜಯ ಡಾಂಗೆ ಜೆ.ಡಿ.ಎಸ್ ಪಕ್ಷದ ಆಡಳಿತದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಕೇಳಬೇಕು. ಎಲ್ಲ ವರ್ಗದ ಜನರಿಗೂ ಸಹಾಯ ಸೌಲಭ್ಯ ಕಲ್ಪಿಸಿಕೊಟ್ಟಿದೆ. ನಗರದ ಸಮೃದ್ಧ ಸಮಗ್ರ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ಅಭಿವೃದ್ದಿಗೆ ವಿಶೇಷ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲಲು ಹಣವೇ ಮುಖ್ಯವಲ್ಲ. ಪಕ್ಷದ ಕಾರ್ಯಕರ್ತರು, ಮುಖಂಡರು ಸ್ವಯಂ ಸ್ಪೂರ್ತಿಯಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿ ನಗರಸಭೆಯ ಆಡಳಿತ ಚುಕಾಣಿಯನ್ನು ಜೆ.ಡಿ.ಎಸ್. ಪಕ್ಷ ವಹಿಸುವಂತೆ ಮಾಡಬೇಕೆಂದು ತಿಳಿಸಿದರು.

  ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಕೆ ಎಸ್ ಸಿದ್ದಬಸಪ್ಪ ಯಾದವ, ಉಮೇಶ ತಳವಾರ, ಎಂ.ಬಿ. ಸಾವಜ್ಜಿ, ಅನ್ವರ ಕಡೆಮನಿ, ಈರಣ್ಣ ಪಟ್ಟಣಶೆಟ್ಟಿ, ಅಮೀರಜಾನ ಬೇಫಾರಿ,ಪರಶುರಾಮ ಹಾವೇರಿ, ಸುಭಾಸ ಬೆಂಗಳೂರು, ಸುನೀಲ ದಂಡೆಮ್ಮನವರ, ರಬ್ಬಾನಿ ಹುಲಗೇರಿ, ಶೆರಅಲಿ ಮಕಾಂದರ, ಮಂಜುರ ಅಹ್ಮದ ಆಲೂರ, ಮೆಹಬೂಬ ಜಮಾದಾರ, ಕೆ.ಎಂ. ಸುಂಕದ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದರು.

Recent Articles

spot_img

Related Stories

Share via
Copy link