ಬೆಂಗಳೂರು
ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಆದರೆ ಜೆಡಿಎಸ್‍ನಂತೆ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ನಾಮಾವಶೇಷವಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆ ಹೀಗೆಯೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಡ್ರೆಸ್ ಇಲ್ಲದಂತಾಗುತ್ತದೆ. ಜೆಡಿಎಸ್ ಜತೆ ಅದು ಕೂಡ ಪ್ರಪಾತಕ್ಕೆ ಬೀಳಲಿದೆ. ಕಾಂಗ್ರೆಸ್ ಇನ್ನಾದ್ರೂ ಬುದ್ಧಿ ಕಲಿತು ಹೊರಗೆ ಬರಲಿ ಎಂದರು.
ಬಿಜೆಪಿ ಮುಗಿಸಲು ರಾಷ್ಟ್ರದಲ್ಲೇ ಒಂದಾಗಲು ಹೊರಟಿದ್ದಾರೆ. ಆದರೆ ಮಹಾಮೈತ್ರಿ ಅಂತಾ ವಿಧಾನಸೌಧದ ಮುಂದೆ ಬಂದ ಮಾಯಾವತಿ ಹೊರಗೆ ಹೋದರು. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಏನೂ ಹಾನಿ ಆಗಲ್ಲ ಎಂದರು.
ನನಗೆ ಸೆ.28ರಂದು ಎರಡು ಬಾರಿ ಬೆದರಿಕೆ ಕರೆ ಬಂದಿದೆ. ಟ್ರೂ ಕಾಲರ್‍ನಲ್ಲಿ ರಷ್ಯಾ ಅಂತಾ ತೋರಿಸ್ತಿದೆ. ಮಂಗಳೂರು ಭಾಷೆಯಲ್ಲಿ ಆ ವ್ಯಕ್ತಿ ಮಾತನಾಡಿದ. ಹಿಂದೂ ಪರ ಬಹಳ ಮಾತನಾಡ್ತಿದಿಯಾ ಎಂದು ಏಕ ವಚನದಲ್ಲಿ ಮಾತನಾಡಿದ. ಈ ಬಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ನನಗೆ ಇಬ್ಬರು ಗನ್ ಮ್ಯಾನ್ ಕೊಟ್ಟಿದ್ದಾರೆ ಎಂದರು.
ಹಿಂದೂಪರ ಮಾತನಾಡುವ ಧ್ವನಿ ಅಡಗಿಸುವ ಹುನ್ನಾರ ಇದಾಗಿದೆ. ಇದಕ್ಕೆ ನಾನು ಹೆದರುವ ವ್ಯಕ್ತಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ದಲೈಲಾಮ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ. ನನಗೆ ಬೆದರಿಕೆ ಕರೆ ಬಂದಿದೆ. ಗುಪ್ತಚರ ಇಲಾಖೆ ಈ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
