ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ ಡಾ. ಸಂಜಯ ಡಾಂಗೆ

ಹಾವೇರಿ :

             ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾ|| ಸಂಜಯ ಡಾಂಗೆಯವರು ನಗರದ ವಾರ್ಡ ನಂ. 03,04,16,18 ಮತ್ತು 30 ನೇ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. 30 ವಾರ್ಡಿನ ಸಾಮಾನ್ಯ ವರ್ಗ ಕ್ಷೇತ್ರದಿಂದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀ ರಬ್ಬನಿ ಹುಲಗೇರಿ ಅಭ್ಯರ್ಥಿ ಪರ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾ|| ಸಂಜಯ ಡಾಂಗೆಯವರು ಮಾತನಾಡಿ ನಗರದಲ್ಲಿ ಈವರಿಗೆ ಆಳಿದ ಎರಡು ರಾಷ್ಟೀಯ ಪಕ್ಷಗಳು ಅಧಿಕಾರದ ದಾಹಕ್ಕಾಗಿ ನಗರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಆಡಳಿತ ನಡಿಸಿರುವುದೇ ಇವರ ಸಾಧನೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೋಟ್ಯಾಂತರ ಅನುದಾನ ಬರುತ್ತದೆ. ಈ ಅನುದಾನವನ್ನು ಜನಪರ ಕೆಲಸಗಳಿಗೆ ಬಳಕೆ ಮಾಡದೇ ತಮಗೆ ಅನುಕೂಲವಾಗುವ ಕಾರ್ಯಗಳಿಗೆ ಹೆಚ್ಚು ಹಣವನ್ನು ಬಳಕೆಕೊಳ್ಳುವಂತಾಗಿದೆ. ನಗರದಲ್ಲಿ ಸುಸರ್ಜಿತವಾದ ಉದ್ಯಾನವನಗಳು ನಿರ್ಮಾಣವಾಗಿಲ್ಲ.

                ಜಿಲ್ಲಾ ಕೇಂದ್ರ ಸ್ಥಳವಾಗಿದ್ದರೂ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕ ಸ್ಥಾನಗಳನ್ನು ಗೆಲ್ಲವ ಮೂಲಕ ನಗರಸಭೆಯ ಚುಕ್ಕಾಣಿ ಹಿಡಿಯುವುದು ವಿಶ್ವಾಸವಿದೆ ಎಂದು ಹೇಳಿದರು. 30 ನೇ ವಾರ್ಡಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ರಬ್ಬಾನಿ ಹುಲಗೇರಿ ಮಾತನಾಡಿ 30 ನೇ ವಾರ್ಡಿನಲ್ಲಿ ನಗರದ ಆಡಳಿತ ಕಛೇರಿ ಇದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ ಬೇಸಿಗೆ ದಿನದಲ್ಲಿ ಅಂತರ ಜಲಮಟ್ಟ ಕುಸಿಯುತ್ತಿದೆ.ಜನರು ನೀರಿಗಾಗಿ ಪರಿದಾಡಬೇಕಾಗಿದೆ. ಇಲ್ಲಿನ ಸಮಸ್ಯೆಗಳಿಗೆ ಕೊಡಲೇ ಸ್ಪಂದಿಸುವ ಕಾರ್ಯ ಮಾಡಬೇಕಾಗಿದೆ. ಮೂಲಭೂತ ಸೌಕರ್ಯಗಳಿಗೆ ವಾರ್ಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ಮತಯಾಚನೆ ಸಂದರ್ಭದಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಉಮೇಶ ತಳವಾರ.ಈರಣ್ಣ ಪಟ್ಟಣ್ಣಶೆಟ್ಟಿ.ಅಮೀರಜಾನ್ ಬೇಪಾರಿ. ವಕೀಲರಾದ ಎಂಜಿ ದೇವಿಹೊಸರು.ಮಾಹಾಂತೇಶ ಬೇವಿನಹಿಂಡಿ. ಸುನೀಲ ದಂಡೆಮ್ಮನವರ.ಅಲ್ತಾಪ್ ನದಾಫ್.ಮುನ್ನಾ ಹುಲಗೇರಿ. ಎಸ್ ಜಮಾದರ.ಇರ್ಶಾದಲಿ ಮಕಾಂದಾರ.ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಭಾಗವಹಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link