ಹಾವೇರಿ ;
ನಗರಸಭೆ ಚುನಾವಣೆಯ ವಾರ್ಡ ನಂ. 16 ರಲ್ಲಿ ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಈರಣ್ಣ ಪಟ್ಟಣಶೆಟ್ಟಿ ತಮ್ಮ ವಾರ್ಡಿನಲ್ಲಿ ಮತಯಾಚನೆ ಮಾಡುವುದರ ಮುಖಾಂತರ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಈರಣ್ಣ ಪಟ್ಟಣ್ಣಶೆಟ್ಟಿ ವಾರ್ಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು.
ನಾನು ಇಲ್ಲಿನ ಪರಸ್ಥಿತಿಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ಜನಸಾಮಾನ್ಯರ ಕಷ್ಟ ಏನು ಎಂಬುವುದು ಗೊತ್ತಿದೆ. ಇದು ಚುನಾವಣೆ ಮಾತ್ರವಲ್ಲಾ ತಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಾನು ನಿಮಗೆ ಪ್ರತಿಕ್ಷಣವೋ ಕಾಣುವ ವ್ಯಕ್ತಿ. ಯಾವುದೋ ದೂರದಿಂದ ಬಂದವನಲ್ಲ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ದುಡಿಯುತ್ತೇವೆ. ವಾರ್ಡಿನ ಜನರು ಬೇಕು ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಅವರ ಸಮಸ್ಯೆಗಳಿಗೆ ನೇರ ಸ್ಪಂಧನೆ ನೀಡಿ ಅಗತ್ಯ ಮೂಲಭೂತ ಸೌಕರ್ಯಗಳಾದ ಬೀದಿ ದೀಪ, ರಸ್ತೆಗಳು, ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಒದಗಿಸಿಕೊಡಲು ವಾರ್ಡಿನ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಲು ಈ ಚುನಾವಣೆಯಲ್ಲಿ ತಮಗೆ ಆಯ್ಕೆ ಮಾಡುವಂತೆ ಈರಣ್ಣ ಪಟ್ಟಣಶೆಟ್ಟಿಯವರು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಗಣೇಶ ಚೂರಿ, ಅಪ್ಪು ಹಿತ್ತಲಮನಿ, ಅಮೀರಜಾನ್ ಬೇಫಾರಿ, ಮಹಾಂತೇಶ ಬೇವಿನಮರದ, ಸುನೀಲ ದಂಡೆಮ್ಮನವರು, ಎಸ್. ಎಸ್. ಜಮಾದಾರ, ಐ ಹುಬ್ಬಳ್ಳಿ, ಐ. ಮಕಾಂದರ,ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಭಾಗವಹಿಸಿದರು.