ಜ್ಞಾನವಿಕಾಸನ ಕಾರ್ಯಕ್ರಮ

ರಾಣೇಬೆನ್ನೂರ:

               ಶ್ರೀಕೃಷ್ಣ ಮತ್ತು ಕುಚೇಲ (ಸುಧಾಮ) ರ ಕಥೆಗಳನ್ನು ಹೇಳುವುದರ ಮೂಲಕ ವರ್ಷದ ಒಂದು ದಿನವನ್ನು ಶ್ರೀಕೃಷ್ಣನನ್ನು ಪೂಜಿಸಲು ನಿಗದಿಪಡಿಸಿಕೊಂಡಿದ್ದೇವೆ. ಅದನ್ನು ದೇಶದ ಉದ್ದಗಲಕ್ಕೂ ಅವನ ಉತ್ಸವನ್ನು ಆಚರಿಸುತ್ತಾರೆ. ಪ್ರಾದೇಶಿಕವಾಗಿ ಅದನ್ನೇ ಕೃಷ್ಣಜನ್ಮಾಷ್ಠಮಿ, ಶ್ರೀಕೃಷ್ಣ ಜಯಂತಿ, ಗೋಕುಲಾಷ್ಠಮಿ ಮತ್ತು ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಎಂದು ಉಪನ್ಯಾಸಕ ಹೆಚ್.ಎಂ.ದೊಡ್ಡಬಿಲ್ಲರ ಹೇಳಿದರು.
                ರವಿವಾರದಂದು ಇಲ್ಲಿನ ಮಾರುತಿ ನಗರದ ಶ್ರೀರಾಮ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನವಿಕಾಸನ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. “ಧರ್ಮೋ ರಕ್ಷತಿ ರಕ್ಷಿತಃ” ಯಾವಯಾವ ಕಾಲದಲ್ಲಿ ಧರ್ಮಕ್ಕೆ ತೊಂದರೆ ಅಪಾಯ ಎದುರಾಗುವುದೋ ಹಾಗೇ ನಾನು ಅವತರಿಸಿ ಬರುವೆ ಎಂದು ಗೀತೋಪದೇಶವನ್ನು ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದ ಕಥೆಯನ್ನೂ ಇಂದಿಗೂ ಸ್ಮರಿಸುತ್ತೇವೆ. ಕೃಷ್ಣನ ಹಲವಾರು ಪವಾಡಗಳು, ತುಂಟತನ ಎಲ್ಲವುಗಳನ್ನು ಇದೇ ಸಂದರ್ಭದಲ್ಲಿ ಮೆಲುಕು ಹಾಕಿದರು.
                  ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಈ ಹಬ್ಬಕ್ಕೆ ಜಾತಿ ಧರ್ಮದ ಭೇದಬಾವ ಎಂಬುದು ಇಲ್ಲ, ಗೋಪಾಲನಿಗೆ ಎಲ್ಲಾ ಧರ್ಮದವರು ಒಂದೇ, ಈ ದಿನದಂದು ಎಲ್ಲಾ ಧರ್ಮದವರು ಕೂಡಿ ವಿವಿಧ ಸ್ಪರ್ಧೆಗಳನ್ನು ಆಟ ಆಡುವುದರ ಮೂಲಕ ಮುಕುಂದನ ಲೀಲೆಗಳನ್ನು ಮೆಲುಕುಹಾಕುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿ, ಬಾವೈಕ್ಯತೆಯನ್ನು ಮೆರೆಯುತ್ತಿದೆ. ಈ ದಿನ ಶ್ರೀಕೃಷ್ಣನಿಗೆ ತುಂಬಾ ಸಂತೃಪ್ತದಾಯಕ ದಿನವಾಗಿದೆ ಎಂದರು.
                   ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ನೂರಾರು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮಡಿಕೆ ಒಡೆಯುವ ಸ್ಪರ್ದೆ, ಸಂಗೀತ, ಖುರ್ಚಿ, ಲಿಂಬೆ, ಚಮಚ, ಓಟ, ನದಿ ದಾಟುವ ಸ್ಪರ್ದೆ, ಸೂಪರ್‍ಮಿನಿಟ್ ಸೇರಿದಂತೆ ಮತ್ತಿತರ ಆಟಗಳನ್ನು ಆಡಿಸಲಾಯಿತು ಮತ್ತು ಮಕ್ಕಳಿಗೆ ಬಾಲ ಕೃಷ್ಣ ಮತ್ತು ಗೋಪಿಕೆಯರ ವೇಷ ಧರಿಸಿ ಸ್ಪರ್ದೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶ್ರೀರಾಮ ದೇವಸ್ಥಾನದ ವ್ಯವಸ್ಥಾಪಕ ವಿ.ಬಿ.ನೇಕಾರ, ಯೋಜನೆಯ ನಿರ್ದೇಶಕ ಮಹಾಬಲ ಕುಲಾಲ, ಯೋಜನಾಧಿಕಾರಿ ಈಶ್ವರ್.ಎಂ.ಎಸ್, ಶಿವಕುಮಾರ ಜಾಧವ್, ನವೀನ್ ಹೆಚ್.ಎಸ್. ಮಂಜುನಾಥ ಗುಗ್ಗತ್ತಿ. ವಲಯ ಒಕ್ಕೂಟದ ಅಧ್ಯಕ್ಷರಾದ ಶಕುಂತಲಾ ಬಡಿಗೇರ, ಗಿರಿಜಾ ಹಿರೇಮಠ, ಮೇಲ್ವಿಚಾರಕ ಮಂಜುನಾಥ, ಸಮನ್ವಯಾಧಿಕಾರಿ ಜಯಶ್ರೀ, ಸೇವಾಪ್ರತಿನಿಧಿಗಳಾದ ತಾರಾ, ಮಂಜುಳಾ, ಜಯಲಕ್ಷ್ಮೀ, ಶೋಭಾ, ರೇಖಾ, ಹಂಪಾವತಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link