ಬೆಂಗಳೂರು
ನೀವು ಬೈಕ್ ಅಥವಾ ಕಾರ್ ಓಡಿಸುವಾಗ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟುವುದನ್ನು ಮರೆತ್ತಿದ್ದೀರಾ…..! ದುಪ್ಪಟ್ಟು ದಂಡ ಬೀಳುವ ಭಯವೇ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಸರ್ಕಾರ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲು ಆದೇಶ ಹೊರಡಿಸಿದೆ.
ಹಾಗಾಗಿ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವವರು ಅದನ್ನು ಸುಲಭವಾಗಿ ಪಾವತಿಸಿ ಮುಕ್ತರಾಗಬಹುದು .ಇದೇ ಫೆಬ್ರವರಿ 11ರಂದು ರಾಷ್ಟ್ರೀಯ ಲೋಕ್ ಅದಾಲತ್ ಇರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ ಎನ್ನಲಾಗಿದೆ .
ಇನ್ನು ಈ ಯೊಚನೆ ಪಕ್ಕದ ತೆಲಂಗಾಣದಿಂದ ಪ್ರೇರಿತವಾಗಿದ್ದು, ಕೆಲ ವರ್ಷಗಳ ಹಿಂದೆ ತೆಲಂಗಣಾ ರಾಜ್ಯದಲ್ಲಿ ಇದೇ ರೀತಿ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ್ದ ದಂಡದ ಮೊತ್ತಕ್ಕೆ ವಿನಾಯ್ತಿ ನೀಡಿದ್ದರಿಂದ ಅಲ್ಲಿನ ಜನರು ಸರದಿಯಲ್ಲಿ ನಿಂತು ಬಾಕಿ ಕಟ್ಟಿದ್ದನ್ನು ಸಮಿತಿ ಗಣನೆಗೆ ತೆಗದುಕೊಂಡಂತೆ ಕಾಣುತ್ತಿದೆ.