ಡಾ.ಸರ್ವಪಲ್ಲಿ ರಾಧಾಕೃಷನ್ ರವರ 130 ನೇ ಜನ್ಮದಿನ

ಶಿಗ್ಗಾವಿ :

             ತಾಲೂಕಿನ ಬಂಕಾಪುರ ಪಟ್ಟಣದ ಕೀರ್ತಿ ಪ್ರೌಡಶಾಲೆಯಲ್ಲಿ ಗುರುವಾರದಂದು ಡಾ.ಸರ್ವಪಲ್ಲಿ ರಾಧಾಕೃಷನ್ ರವರ 130 ನೇ ಜನ್ಮದಿನದ ಅಂಗವಾಗಿ ನಿವೃತ್ತ ಶಿಕ್ಷಕ ಎ.ಕೆ.ಆದವಾನಿಮಠ ರವರನ್ನು ಸನ್ಮಾನಿಸಲಾಯಿತು.
             ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕ ವೃತ್ತಿಯಲ್ಲಿ ಸಿಗುವಂತಹ ಗೌರವ ನೆಮ್ಮದಿ ಬೆರೆಯಾವ ವೃತ್ತಿಯಲ್ಲಿಯೂ ಸಿಗಲಾರದು. ಈ ಜಗತ್ತಿನಲ್ಲಿ ಗುರು ಇಲ್ಲದೇ ಇದ್ದರೆ ಮಾನವಕುಲ ಅಂಧಕಾರದಲ್ಲಿ ಮುಳುಗಿ ಅವನತಿಯತ್ತ ಸಾಗುತ್ತಲಿದ್ದ ಎಂದು ಹೇಳಿದರು.
               ಶಾಲಾ ಮುಖ್ಯೋಪಾದ್ಯಾಯ ಎಂ.ಬಿ.ಉಂಕಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಕ ವೃತ್ತಿಯಲ್ಲಿ ದೇವರನ್ನು ಕಂಡವರಾಗಿದ್ದರು ಹಾಗಾಗಿ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಮೂಲಕ ಶಿಕ್ಷಕ ವೃತ್ತಿಗೆ ಮೇರಗು ನೀಡಿದ ಮಹಾ ಛೇತನರಾಗಿದ್ದರು ಎಂದು ಹೇಳಿದರು.
                 ಕೀರ್ತಿ ಕಾಲೇಜಿನ ಪ್ರಾಂಶುಪಾಲ ಎಂ.ಎನ್.ಮಲ್ಲಾಡದ ಮಾತನಾಡಿ ವಿದ್ಯಾರ್ಥಿಗಳು ಇಂದಿನ ದಿನಮಾನಗಳಲ್ಲಿ ವಿಧ್ಯಯಜೋತೆಗೆ ವಿನಯ ಸಂಸ್ಕøತಿ ಸಂಸ್ಕಾರವನ್ನು ಕಲೆಯುವ ಅವಸ್ಯಕತೆಯಿದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಕಾಡಿಗೆ ಋಷಿಮುನಿಗಳನ್ನು ಹುಡುಕಿಕೊಂಡು ಹೋಗಿ ಅವರ ಸೇವೆ ಮಾಡುವಮೂಲಕ ಕಠಿಣಪರಿಶ್ರಮ ಪಟ್ಟು ವಿನಯದಿಂದ ವಿಧ್ಯಯನ್ನು ಸಂಪಾದಿಸುತ್ತಿದ್ದರು. ಆದರೆ ಇಂದಿನ ಆಧುನಿಕಯುಗದಲ್ಲಿ ತಂತ್ರಜ್ಞಾನದ ಜೋತೆಗೆ ಹೆಜ್ಜೆ ಹಾಕುತ್ತಿರುವ ಸಂದರ್ಬದಲ್ಲಿ ವಿದ್ಯಾರ್ಥಿಗಳು ವಿವೇಕವನ್ನು ಮರೆತು ಅವಿವೇಕಿಗಳಾಗುತ್ತಿರುವದು ವಿಷಾದದ ಸಂಗತಿಯಾಗಿದೆ. ವಿದ್ಯಾರ್ಥಿಗಳ ಪರಿಪೂರ್ಣ ಜವಾಬ್ದಾರಿಯನ್ನು ಬರಿ ಶಿಕ್ಷಕರ ಮೇಲೆ ಹಾಕದೆ ಪಾಲಕರೂ ಕೂಡಾ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕೈ ಜೋಡಿಸಿದಾಗ ಮಕ್ಕಳ ಭದ್ರವಾದ ಭವಿಷ್ಯವನ್ನು ರೂಪಿಸಲು ಸಾದ್ಯ ಎಂದು ಹೇಳಿದರು.
ಕೀರ್ತಿ ವಿಧ್ಯಾ ಸಂಸ್ಥೆಯ ಅದ್ಯಕ್ಷ ಜಗದೀಶ ಕುರಂದವಾಡ ಮಾತನಾಡಿದರು.
ಮುಖ್ಯ ಶಿಕ್ಷಕ ಬಿ.ಎಸ್.ದುಂಡಪ್ಪನವರ, ಶ್ರೀಕಾಂತ ಬಡಿಗೇರ, ಆರ್.ಎಚ್.ರೊಡ್ಡನವರ, ಸಿ.ಟಿ.ನೆಲೋಗಲ್, ಎ.ಸಿ.ಹಿರೇಮಠ, ಎಂ.ಎನ್.ಚಿನಿವಾರ, ವೆಂಕಟೇಶ, ಪಿ.ಎಂ.ದುಗಲದ, ಲಾಲಪ್ಪ ಲಮಾಣಿ, ಬಿ.ಎಸ್.ಕಮ್ಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link