ಬೆಂಗಳೂರು :
ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್ ರದ್ದು ಮಾಡುವಂತೆ ಕೋರಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ಗೆ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾ.7ಕ್ಕೆ ಮುಂದೂಡಿಕೆಯಾಗಿದೆ.
ಫೆ.2ರಂದು ವಿಚಾರಣೆಗೆ ಹಾಜರಾಗುವಂತೆ ಜ.17ರಂದು ಇಡಿ ಸಮನ್ಸ್ ನೀಡಿತ್ತು. ಆದರೆ, ಬಜೆಟ್ ಅಧಿವೇಶನ ಇದ್ದ ಕಾರಣ ಡಿಕೆಶಿ ಅವರು ಕಾಲಾವಕಾಶ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಫೆ.22ರಂದು ವಿಚಾರಣೆಗೆ ಹಾಜರಾಗಿ ಎಂದು ಸೂಚಿಸಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಖುದ್ದು ಸಚಿವ ಡಿ.ಕೆ. ಶಿವಕುಮಾರ್ ಬರಬೇಕು ಎಂದು ಸಮನ್ಸ್ನಲ್ಲಿ ಉಲ್ಲೇಖಿಸಲಾಗಿತ್ತು.
ಅವರ ವಿರುದ್ಧ 276 c, 277 IT act, 120ಬಿ ಐಪಿಸಿ ಅಡಿಯಲ್ಲಿ ಐಟಿ ಕೇಸ್ ದಾಖಲಿಸಿದೆ. ಸಮನ್ಸ್ ರದ್ದು ಕೋರಿ ಡಿ.ಕೆ. ಶಿವಕುಮಾರ್ ಜೊತೆಗೆ ಅವರ ನಾಲ್ವರು ಆಪ್ತರು ಅರ್ಜಿ ಸಲ್ಲಿಕೆ ಮಾಡಿದ್ದರು. ಯಾರು ಎಷ್ಟು ಹೊತ್ತು ಅವಧಿ ವಾದ ಮಾಡುತ್ತೀರಾ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. 2 ಗಂಟೆಗಳ ಕಾಲವಕಾಶ ಕೊಡಿ ಎಂದು ಡಿಕೆಶಿ ಪರ ವಕೀಲ ಕೋರಿಕೊಂಡಿದ್ದಾರೆ. ಇದಾದ ನಂತರದಲ್ಲಿ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಈ ಪ್ರಕರಣದಲ್ಲಿ ಕೋರ್ಟ್ ನೀಡುವ ತೀರ್ಪು ಬಹಳ ಮಹತ್ವ ಪಡೆದುಕೊಂಡಿದೆ. ಒಂದೊಮ್ಮೆ ಇಡಿ ನೀಡಿರುವ ಸಮನ್ಸ್ ರದ್ದು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದರೆ ಡಿಕೆಶಿ ರಿಲ್ಯಾಕ್ಸ್ ಆಗಲಿದ್ದಾರೆ. ಸಮನ್ಸ್ ರದ್ದಾಗದ ಪಕ್ಷದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಅವರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಅವರನ್ನು ವಶಕ್ಕೆ ಪಡೆದೂ ವಿಚಾರಣೆ ನಡೆಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
