ನವದೆಹಲಿ
ಕೊರೋನಾ ಕಾರಣದಿಂದ ಇಷ್ಟು ದಿನ ಟೋಲ್ ಸಂಗ್ರಹ ನಿಲ್ಲಿಸಿದ್ದ ಕೇಂದ್ರ ಸರ್ಕಾರ , ಏಪ್ರಿಲ್ 20ರಿಂದ ಟೋಲ್ ಸಂಗ್ರಹ ಆರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾ ನಡೆಸುತ್ತಿರುವವರಿಗೆ ಪತ್ರ ಬರೆದಿದ್ದು, ಎಂದಿನಂತೆ ವಾಹನಗಳ ಶುಲ್ಕವನ್ನು ಪಡೆಯುವಂತೆ ಹೇಳಿದೆ.ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಾದ ಬಳಿಕ ಅಗತ್ಯ ವಾಹನಗಳು ಮಾತ್ರ ಟೋಲ್ ಮೂಲಕ ಚಲಿಸುತ್ತಿದ್ದವು.
ಇದೀಗ ಲಾಕ್‌ಡೌನ್ ನಿಯಮ ಸಡಿಲಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿರುವುದರಿಂದ ಟೋಲ್ ಸಂಗ್ರಹವನ್ನು ಪುನರಾರಂಭಿಸುವುದುದಾಗಿ ಎನ್ಎಚ್‌ಎಐ ತಿಳಿಸಿದೆ.ಅಗತ್ಯ ಸೇವಾ ಸರಕು ವಾಹನಗಳು ತುರ್ತಾಗಿ ಸ್ಥಳಗಳನ್ನು ತಲುಪಬೇಕಿರುವುದರಿಂದ ಟೋಲ್‌ಗಳನ್ನು ಮುಕ್ತಗೊಳಿಸಲಾಗಿದೆ ಎಂದು ಕೇಂದ್ರ ಸಾರಿಗೆ ಮಾಹಿತಿ ನೀಡಿತ್ತು.ಆದರೆ ಟೋಲ್ ಶುಲ್ಕ ರದ್ದತಿ ತಾತ್ಕಾಲಿಕವಾಗಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದ ಮೇಲೆ ಮತ್ತೆ ಟೋಲ್ ಶುಲ್ಕ ಕೇಂದ್ರಗಳನ್ನು ಪ್ರಾರಂಭಿಸುವುದಾಗಿಯೂ ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
