ಡಿ. 19, 20 ಕ್ಕೆ ಮರುಳಪ್ಪಜ್ಜಯ್ಯನ ಜಾತ್ರೆ

ಚಿಕ್ಕನಾಯಕನಹಳ್ಳಿ:

    ಧಾರ್ಮಿಕ ಸಮಾರಂಭ ಸಾಧಕರಿಗೆ ಪ್ರಶಸ್ತಿ ಪ್ರಧಾನ

            ತಾಲ್ಲೂಕಿನ ಶ್ರೀ ಗುರುಮರುಳಪ್ಪಜ್ಜಯ್ಯನ ಜಾತ್ರಾ ಮಹೋತ್ಸವವು ಡಿ. 19 ಮತ್ತು 20 ರಂದು ನಡೆಯಲಿದ್ದು, ಜಾತ್ರಾ ಮಹೋತ್ಸವದ ಸಮಯದಲ್ಲಿ ಕುಪ್ಪೂರು ಮರುಳಸಿದ್ಧಶ್ರೀ ಪ್ರಶಸ್ತಿ, ಧರ್ಮರತ್ನಾಕರ ಪ್ರಶಸ್ತಿ, ಧರ್ಮನಂದಿನಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕುಪ್ಪೂರು ಮಠದ ಆಡಳಿತಾಧಿಕಾರಿ ವಾಗೀಶ್ ಪಂಡಿತರಾಧ್ಯ ತಿಳಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.18 ರ ಶನಿವಾರ ಮಠದಲ್ಲಿ ಪುಣ್ಯಃ, ನಾಂದಿ, ಪಂಚಕಳಸ, ಸ್ಥಾಪನಾ ಪೂರ್ವಕ ರುದ್ರಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಮತ್ತು ಕಲಶ ಸ್ಥಾಪನೆಗಳು ಹಾಗೂ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಜಾತ್ರಾ ಮಹೋತ್ಸವ ಆರಂಭವಾಗಲಿದೆ.

ಕಲಾ ತಂಡಗಳ ಮೆರಗು :

19 ರ ಭಾನುವಾರ ಬೆಳಗ್ಗೆ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಮಹಾಲಿಂಗಕ್ಕೆ ಮಹಾ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ತ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನಡೆಯುವುದು. ಅಂದು ಬೆಳಗ್ಗೆ 10.30 ಕ್ಕೆ ಶ್ರೀ ಗುರು ಮರುಳಸಿದ್ಧೇಶ್ವರ ಸ್ವಾಮಿಯವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ, ವೃಷಭೋತ್ಸವ ಹಾಗೂ ಕೃತಿಕೋತ್ಸವ, ನಂದಿಧ್ವಜ, ವೀರಗಾಸೆ ನೃತ್ಯ, ಡೊಳ್ಳು ಕುಣಿತಗಳ ಕಲಾ ವೈಭವದೊಂದಿಗೆ ಉತ್ಸವ ನಡೆಯುತ್ತದೆ.

ಹಲವು ಮಠಾಧೀಶರ ಉಪಸ್ಥಿತಿ :

ಮಧ್ಯಾಹ್ನ 1.15 ಕ್ಕೆ ಅನ್ನದ ರಾಶಿಗೆ ಪೂಜೆ, ಶ್ರೀ ನಂದೀಶ್ವರನ ಪಾದಸ್ಪರ್ಶ ನಂತರ ಮಹಾ ದಾಸೋಹ ನೆರವೇರಲಿದೆ. ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವಕ್ಕೆ ತಿಪಟೂರು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮಿಜಿ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿರುವರು.

ರಾಜಕೀಯ ದಿಗ್ಗಜರು ಭಾಗಿ :

ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆ ಸುಮಲತಾ ಅಂಬರೀಶ್ ಉದ್ಘಾಟನೆ ನೆರವೇರಿಸುವರು. ಸಚಿವ ಬಿ.ಸಿ.ನಾಗೇಶ್ ಪುಸ್ತಕ ಬಿಡುಗಡೆ ಮಾಡಲಿದ್ದು, ಮಾಜಿ ಶಾಸಕ ಕಿರಣ್‍ಕುಮಾರ್ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಶಾಸಕ ಅರವಿಂದ್ ಬೆಲ್ಲದ್ ದಿನಚರಿ ಬಿಡುಗಡೆ ಮಾಡಲಿದ್ದು, ವೀರಶೈವ ಲಿಂಗಾಯುತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ ಕಲ್ಲೂರು ಸಿ.ಡಿ.ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಪೋಲಿಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಾಹಪೂರವಾಡ, ಸಿಇಓ ಡಾ.ವಿದ್ಯಾಕುಮಾರಿ, ಮಾಜಿ ಸಚಿವ ಶಿವಣ್ಣ, ಶಾಸಕ ಜ್ಯೋತಿಗಣೇಶ್, ಶಿವಲಿಂಗೇಗೌಡರು, ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು, ಬಿ.ಲಕ್ಕಪ್ಪ, ಬಿ.ನಂಜಾಮರಿ, ಷಡಕ್ಷರಿ ಕೆ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.

ಡಿ. 20 ರ ಸೋಮವಾರದಂದು ಶ್ರೀ ಗುರುಮರುಳಸಿದ್ಧೇಶ್ವರ ಸ್ವಾಮಿಯವರ ಮಹಾರಥೋತ್ಸವ ನಡೆಯಲಿದೆ ಎಂದು ವಾಗೀಶ್ ಪಂಡಿತರಾಧ್ಯ ತಿಳಿಸಿದರು. ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ಘಟಕದ ತಾಲ್ಲೂಕು ಅಧ್ಯಕ್ಷ ಸಿ.ಎಸ್.ಪ್ರದೀಪ್‍ಕುಮಾರ್, ಉಚ್ಚಸಂಗಪ್ಪ ಸೇವಾ ಟ್ರಸ್ಟ್, ಮಠದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.

ಸುಮಲತಾಗೆ ಧರ್ಮನಂದಿನಿ ಪ್ರಶಸ್ತಿ :

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಮಾತಾ ಬಿ ಮಂಜಮ್ಮ ಜೋಗತಿಯವರಿಗೆ ಕುಪ್ಪೂರು ಮರುಳಸಿದ್ಧಶ್ರೀ ಪ್ರಶಸ್ತಿ ಹಾಗೂ ಆಧ್ಯ್ಮಾತ್ಮ ಚಿಂತಕ, ಲೇಖಕ ವಿದ್ವಾನ್ ಕೆ.ಪಿ.ರತ್ನಾಕರಭಟ್ಟ ಅವರಿಗೆ ಧರ್ಮರತ್ನಾಕರ ಪ್ರಶಸ್ತಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಧರ್ಮನಂದಿನಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಧರ್ಮ ಸಮ್ಮೇಳನ ಆಯೋಜನೆ :

ಭಾನುವಾರ ಸಂಜೆ 4 ಕ್ಕೆ ನಡೆಯುವ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link