ಡೆಂಗ್ಯು ಆಡಿಟ್‌ ಗೆ ಮುಂದಾಯ್ತು ಬಿಬಿಎಂಪಿ ….!

ಬೆಂಗಳೂರು:

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿಯಾಗಿದೆ. ಬಿಬಿಎಂಪಿ ಪೂರ್ವವಲಯದಲ್ಲಿ 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ.ಬಿಬಿಎಂಪಿ ಪೂರ್ವ ವಲಯ ವಿವೇಕನಗರದ ನಿವಾಸಿಯಾದ ಯುವಕ ಕುರ್ನಾಲ್ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಡೆಂಗ್ಯೂವಿನಿಂದ ಯುವಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಡೆತ್ ಆಡಿಟ್ ನಡೆಸುತ್ತಿದೆ.

   ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಸುರಳಕರ್ ವಿಕಾರ ಕಿಶೋರ್ ಮಾತನಾಡಿ, ಡೆತ್ ಆಡಿಟ್ ಮಾಡಿದ ನಂತರ ಡೆಂಗ್ಯೂ ಸಾವು ಎಂದು ಸ್ಪಷ್ಟ ಮಾಹಿತಿಗಳು ತಿಳಿದುಬರಲಿದೆ ಎಂದು ಹೇಳಿದ್ದಾರೆ.ಕಳೆದ ಜೂನ್ ತಿಂಗಳಿನಲ್ಲಿ ಇದೇ ವಲಯದಲ್ಲಿ ಡೆಂಗ್ಯೂ ಪ್ರಕರಣ ವರದಿಯಾಗಿತ್ತು. ಬಳಿಕ ಪಾಲಿಕೆ ಅಧಿಕಾರಿಗಳು ಸಿವಿ ರಾಮನ್‌ನಗರದಿಂದ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದರು.

    ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಇದೂವರೆಗೆ 2,463 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಪಾಸಿಟಿವ್ ಪ್ರಕರಣಗಳಲ್ಲಿ ಪೂರ್ವ ಮತ್ತು ಮಹದೇವಪುರ ವಲಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

   ಜುಲೈ, ಆಗಸ್ಟ್ ನಲ್ಲಿ ಮಳೆ ಹಿನ್ನೆಲೆಯಲ್ಲಿ ಸೊಳ್ಳೆಗಳು ಹೆಚ್ಚಾಗುತ್ತವೆ. ಸೆಪ್ಟೆಂಬರ್ ವೇಳೆಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಜುಲೈ 1 ರಿಂದ ಜುಲೈ 10 ರವರೆಗೆ, 1,387 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಡೆಂಗ್ಯೂ ನಿಯಂತ್ರಿಸಲು ಫಾಗಿಂಗ್ ಕಾರ್ಯಾಚರಣೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

   ಜುಲೈ 1 ರಿಂದ ಬಿಬಿಎಂಪಿಯ ಎಂಟು ವಲಯಗಳಲ್ಲಿ ಡೆಂಗ್ಯೂ ಉಲ್ಬಣಗೊಂಡಿದ್ದು ಪೂರ್ವ-325, ಮಹದೇವಪುರ-364, ದಕ್ಷಿಣ-192, ಪಶ್ಚಿಮ-166, ಬೊಮ್ಮನಹಳ್ಳಿ-128, ಆರ್.ಆರ್.ನಗರ-123, ಯಲಹಂಕ-68, ದಾಸರಹಳ್ಳಿ-21 ಪ್ರಕರಣಗಳು ವರದಿಯಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap