ಬಾಗ್ದಾದ್:
ಖಾಸಿಂ ಸೊಲೈಮಾನಿ ಹತ್ಯೆ ಬಳಿಕ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧ ತೀವ್ರವಾಗಿ ಹದಗಟ್ಟಿದ್ದು, ಎರಡು ರಾಷ್ಟ್ರಗಳು ಸದ್ಯ ಇರುವ ಪರಿಸ್ಥಿತಿಯಲ್ಲಿ 3ನೇ ಮಹಾಯುದ್ಧ ಸಂಭವಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲಿಯೇ ಇರಾಕ್ ನಲ್ಲಿನ ಅಮೆರಿಕಾ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಜನವರಿ 7ರ ಸಂಜೆ 5.30ರ ಸುಮಾರಿಗೆ ಇರಾನ್ 12ಕ್ಕೂ ಹೆಚ್ಚು ಮಿಸೈಲ್ ಗಳನ್ನು ಹಾರಿಸಿದೆ. ಇರಾಕ್ ನಲ್ಲಿರುವ ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕ್ಷಿಪಣಿಗಳು ಇರಾನ್ ನೆಲೆಯಿಂದ ಹಾರಿ ಬಂದಿರುವುದು ಬಹುತೇಕ ಖಚಿತವಾಗಿದೆ, ಇರಾಕ್ ಹಾಗೂ ಅಮೆರಿಕಾ ಜಂಟಿಯಾಗಿ ಬಳಕೆ ಮಾಡುವ ವಾಯುನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡು ಈ ಕೆಲಸ ಮಾಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ,ಹಲವಾರು ಮಂದಿ ಗಾಯಗೊಂಡಿದ್ದಾರೆ ಹಾಗೂ ಆಸ್ತಿ ನಷ್ಟದ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ