ಬೆಂಗಳೂರು :
ಯುಎಸ್‌ನಲ್ಲಿ ಗೂಗಲ್ ಸಂಸ್ಥೆಯು ಆಲ್ಫಾಬೆಟ್ ಇಂಕ್‌ನ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಗೂಗಲ್ ಸಂಸ್ಥೆ ನಿರ್ಧಾರದಿಂದ 50 ಕಾರ್ಮಿಕರು ಅನ್ಯಾಯವಾಗಿ ಕೆಲಸ ಕಳೆದುಕೊಂಡಿದ್ದಾರೆ. ಈ ಕುರಿತು ಯುಎಸ್ ನ್ಯಾಷನಲ್ ಲೇಬರ್ ರಿಲೇಷನ್ಸ್ ಬೋರ್ಡ್ ಗೆ ದೂರು ಸಲ್ಲಿಸಲಾಗಿದೆ. ಈ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಪ್ರತಿಕ್ರಿಯಿಸಿದ್ದಾರೆ.
ನಮ್ಮನ್ನೆಲ್ಲ ಅನ್ಯಾಯವಾಗಿ ಗೂಗಲ್ ಕೆಲಸದಿಂದ ವಜಾಗೊಳಿಸಿದೆ. ಇಸ್ರೇಲಿ ಸರ್ಕಾರದೊಂದಿಗಿನ ಕಂಪನಿಯ ಕ್ಲೌಡ್ ಒಪ್ಪಂದದ ವಿರುದ್ಧದ ಭಿನ್ನಾಭಿಪ್ರಾಯದಿಂದ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೋರ್ಡ್ ದೂರಿನಲ್ಲಿ ಉಲ್ಲೇಖಿಸಿದೆ.
ಇನ್ನೂ Google ನ ಉದ್ಯೋಗಿಗಳ ಕಡಿತದ ನಿರ್ಧಾರವು ‘ಯುಎಸ್ ಕಾರ್ಮಿಕ ಕಾನೂನು ಹಕ್ಕುಗಳ’ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿದೆ.
ಉದ್ಯೋಗಿಗಳ ವಜಾ ಬಳಿಕ ಕಚೇರಿ ಸ್ಥಳಗಳಲ್ಲಿ ಪ್ರತಿಭಟನೆ ಮೂಲಕ ದೈನಂದಿನ ಕೆಲಸಗಳಿಗೆ ಅಡ್ಡಿಪಡಿಸಿದ 28 ನೌಕರರನ್ನು ವಜಾಗೊಳಿಸುವುದಾಗಿ ಏಪ್ರಿಲ್ ಆರಂಭದಲ್ಲೇ ಗೂಗಲ್ ಘೋಷಿಸಿತ್ತು. 1.2 ಶತಕೋಟಿ ಡಾಲರ್ ಮೌಲ್ಯದಲ್ಲಿ ಒಪ್ಪಂದ ಯೋಜನೆ ಆಗಿತ್ತು. ಇದು ಹಮಾಸ್-ಇಸ್ರೇಲಿ ಯುದ್ಧದ ಮಧ್ಯೆ ಇಸ್ರೇಲ್ ಸರ್ಕಾರಕ್ಕೆ ಕ್ಲೌಡ್ ಸೇವೆ ನೀಡಲು ಗೂಗಲ್ ಮತ್ತು ಅಮೆಜಾನ್ ಜಂಟಿಯಾಗಿದ್ದವು.
ಇನ್ನೂ ಗೂಗಲ್ ಕಚೇರಿ ಆವರಣದಲ್ಲಿ ಗುತ್ತಿಗೆ ಆಧಾರದ ಉದ್ಯೋಗ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರಣ ನೀಡಿ ಸುಮಾರು 20 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಕೆಲಸದಿಂದ ವಜಾಗೊಂಡ ಉದ್ಯೋಗಿಗಳು ಬಳಿಕ ನಡೆದುಕೊಂಡ ವರ್ತನೆಯನ್ನು ಗೂಗಲ್ ಸಂಸ್ಥೆ ಖಂಡಿಸಿರುವುದಾಗಿ ತಿಳಿಸಿದೆ. ಇಂತಹ ನಡವಳಿಕೆ “ಸಂಪೂರ್ಣ ಸ್ವೀಕಾರಾರ್ಹವಲ್ಲ” ಎಂದು ತನ್ನ ಹೇಳಿಕೆಯಲ್ಲಿ ಕಂಪನಿ ತಿಳಿಸಿದೆ.
ಉದ್ಯೋಗ ಕಳೆದುಕೊಂಡ ಪ್ರತಿ ಮಾಜಿ ಉದ್ಯೋಗಿಗಳು ನೇರವಾಗಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮೂಲಕ ತೊಂದರೆ ನೀಡಿದ್ದಾರೆ. ಇದು ಸರಿಯಲ್ಲ ಎಂದು ನಾವು ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಕಂಪನಿ ಹೇಳಿದೆ.
ರಾಯಿಟರ್ಸ್ ವರದಿ ಪ್ರಕಾರ, ಗೂಗಲ್‌ನ ಕಂಪನಿಯಲ್ಲಿ ಇಂತಹ ಬೆಳವಣಿಗೆ ತಡೆಯುವಲ್ಲಿ ನಿರತವಾಗಿದೆ. ಪ್ರತಿಭಟನೆಗೆ ಪ್ರಚೋದನೆ, ಭಿನ್ನಾಭಿಪ್ರಾಯ, ಕೆಲಸಗಳಿಗೆ ಅಡ್ಡಿ ಪಡಿಸುವುದನ್ನು ಸಹಿಸುವುದಿಲ್ಲ ಎಂದು ಕಂಪನಿಯು ಸಂದೇಶ ರವಾನಿಸಿದೆ. ಈ ಮೂಲಕ ನಮ್ಮನ್ನು ಭಯಪಡಿಸಲಾಗುತ್ತಿದೆ ಎಂದು ಮಾಜಿ ಉದ್ಯೋಗಿ ಜೆಲ್ಡಾ ಮಾಂಟೆಸ್ ಮಾಹಿತಿ ಹಂಚಿಕೊಂಡರು.
ಇದೆಲ್ಲ ಬೆಳವಣಿಗೆಗಳ ಬಗ್ಗೆ ಬ್ಲಾಗ್‌ಪೋಸ್ಟ್‌ನಲ್ಲಿ ಗೂಗಲ್ ಕಂಪನಿಯು ಸಿಇಒ ಸುಂದರ್ ಪಿಚೈ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೆಲಸದ ಸ್ಥಳದಲ್ಲಿದ್ದೇವೆ. ನಮ್ಮ ನೀತಿಗಳು ಮತ್ತು ನಿರೀಕ್ಷೆಗಳು ಸ್ಪಷ್ಟವಾಗಿವೆ. ಇದು ವ್ಯವಹಾರವಾಗಿದೆ ಮತ್ತು ಸಹೋದ್ಯೋಗಿಗಳಿಗೆ ಅಡ್ಡಿಪಡಿಸುವ ಅಥವಾ ಅಸುರಕ್ಷಿತ ಭಾವನೆಯನ್ನು ಉಂಟುಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಸ್ಥಳವಲ್ಲ ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಮಾಜಿ ಉದ್ಯೋಗಿಗಳ ಅಸಮಾಧಾನ, ಪ್ರತಿಭಟನೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ