ಹಗರಿಬೊಮ್ಮನಹಳ್ಳಿ
ತಾಲೂಕಿನ ತಂಬ್ರಹಳ್ಳಿಯ ಶ್ರೀಆಂಜನೇಯಸ್ವಾಮಿ ಉತ್ಸವದ ಅಂಗವಾಗಿ 2ನೇ ದಿನ ಆಚರಿಸಲ್ಪಡುವ ಬೇಟೆ ಗಿಡ ಉತ್ಸವ ಗ್ರಾಮದ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಅಡವಿಯಲ್ಲಿ ಸಿಗುವ ಬೇಟೆ ಗಿಡವನ್ನು ತಂದು ಪೂಜಿಸಲಾಯಿತು. ಬಳಿಕ ಶ್ರೀಆಂಜನೇಯಸ್ವಾಮಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಸ್ಠಾಪಿಸಲಾಯಿತು, ವಿವಿಧ ವಾದ್ಯಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ದರು. ಇದಕ್ಕೂ ಮುನ್ನ ಬೇಟೆ ಗಿಡ ಹಿಡಿದ ಯುವಕರು ದೇವರ ಪಲ್ಲಕ್ಕಿ ಸುತ್ತಲೂ ಪ್ರದಕ್ಷಣಿ ಹಾಕುತ್ತಾ ವಾದ್ಯಗಳ ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಭಕ್ತಿ ಭಾವಪರವಶರಾಗುತ್ತಿದ್ದರು. ನೆರದ ಭಕ್ತರು ಬೇಟೆ ಗಿಡಕ್ಕೆ ಉತ್ತತ್ತಿ ಹೂ,ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.
ಟಿ.ಉದಯಭಾಸ್ಕರ, ಹೊಸಪೇಟೆ ತಾ.ಪಂ. ಇಓ ತಳವಾರ ವೆಂಕೋಬಪ್ಪ, ಸರಾಯಿ ಮಂಜುನಾಥ, ಸುಣಗಾರ ಮಂಜುನಾಥ, ಬಿ.ಲಕ್ಷ್ಮಣ, ಬಿ.ಶ್ರೀನಿವಾಸ, ಸಿಪಾಯಿ ನಾಗರಾಜ್, ಸುಣಗಾರ ರಾಮು, ಎಂ.ಪಿ ಪರಮೇಶ್ವರಪ್ಪ, ಗ್ರಂಥಪಾಲಯ ಮೆಲ್ವಿಚಾರಕ ಟಿ.ಪಾಂಡುರಂಗಪ್ಪ, ಕಟ್ಟೀಮನಿ ಪರಸಪ್ಪ, ಸೊಸೈಟಿ ರಂಗನಾಥ, ತಳವಾರ ಹಾಲೇಶ್, ಆರ್ಚಕರಾದ ಶ್ಯಾಮೇರಿ ಹನುಮಂತಪ್ಪ ಪಾಲ್ಗೊಂಡಿದ್ದರು.