ತಿಪಟೂರು:
ತುಮಕೂರು ಹಾಲು ಒಕ್ಕೂಟದ ತಿಪಟೂರು ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರ ಜೀವನಾಡಿಯೇ ಹೈನುಗಾರಿಕೆಯಾಗಿದ್ದು, ಹೈನುಗಾರಿಕೆಯನ್ನು ಮಾಡುತ್ತಿರುವ ರೈತರು ತಮ್ಮ ರಾಸುಗಳಿಗೆ ಒಕ್ಕೂಟದಿಂದ ನೆಡೆಯುತ್ತಿರುವ ವಿಮಾ ಯೋಜನೆಯ ಫಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇಂದು ರೈತರು ಸತತ ಬರಗಾಲದಿಂದ ಬೇಸತ್ತು ಹೋಗಿದ್ದು ಜೀವನವನ್ನು ನೆಡೆಸಲು ಹೈನುಗಾರಿಕೆಯನ್ನು ಅವಲಂಬಿಸಿದ್ದು ರೈತರ ಪಾಲಿಗೆ ರಾಸುಗಳು ಕಲ್ಪವೃಕ್ಷವಾಗಿದ್ದು, ಆ ರಾಸುಗಳು ಆಕಸ್ಮಿಕವಾಗಿ, ಖಾಯಿಲೆಗಳು ಸಂಬವಿಸಿ ಮರಣ ಹೊಂದಿದರೆ ರೈತ ಮತ್ತೆ ಕಂಗಾಲು ಆಗಬಾರದು ಎಂಬ ದೂರ ದೃಷ್ಟಿಯನ್ನು ಹೊಂದಿ ಒಕ್ಕೂಟದಿಂದ ರಿಯಾಯತಿ ಧರದಲ್ಲಿ ವಿಮಾ ಯೋಜನೆಯನ್ನು ಒದಗಿಸಲಾಗುತ್ತದೆ, ಇಂತಹ ಯೋಜನೆಯನ್ನು ನಮ್ಮ ತಾಲ್ಲೂಕಿನ 129 ಹಾಲು ಉತ್ಪಾದಕರ ಸಂಘಗಳು ಹಾಗೂ 8500 ಉತ್ಪಾದಕರು ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಹಿಂದಿನ ವರ್ಷದಲ್ಲಿ 5699 ರಾಸುಗಳಿಗೆ ವಿಮಾ ಯೋಜನೆಯನ್ನು ಕಲ್ಪಿಸಿದ್ದು ಪ್ರಸ್ತತ ವರ್ಷ ಏಳು ಸಾವಿರ ರಾಸುಗಳಿಗೆ ವಿಮಾ ಯೋಜನೆಯನ್ನು ಮಾಡುವ ಗುರಿಯನ್ನು ಹೊಂದಲಾಗಿದೆ.
ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಚಂದ್ರಶೇಖರ್ ಕೆದನೂರಿ ಮಾತನಾಡಿ ದಿ ಇಂಡಿಯಾ ಅಶ್ಯೂರೆನ್ಸ್ ಲಿಮಿಟೆಡ್ ತುಮಕೂರು ಇವರುಗಳು ರಾಸುಗಳಿಗೆ ವಿಮಾಯೋಜನೆಯನ್ನು ಮಾಡುತ್ತಿದ್ದು ರೈತರು ಪ್ರೀಮಿಯಂ ಮೂಲ ಧರದಲ್ಲಿ ಒಕ್ಕೂಟದ ವಂತಿಕೆ 50% ರಷ್ಟು, ತುಮೂಲ್ ಕಲ್ಯಾಣ ಟ್ರಸ್ಟ್‍ವತಿಯಿಂದ 20%ರಷ್ಟಿದ್ದು, ಹಾಲು ಉತ್ಪಾದಕರು 30% ರಷ್ಟು ಹಣವನ್ನು ಪಾವತಿಸಬೇಕು ಆಗಿರುತ್ತದೆ, ರಾಸುಗಳ ಬೆಲೆಯ 50 ಸಾವಿರ, 40 ಸಾವಿರ, 30 ಸಾವಿರ, 20 ಸಾವಿರ ರೂಗಳಲ್ಲಿ ಉತ್ಪಾದಕರು ತಮ್ಮ ಶಕ್ತಿ ಅನುಸಾರ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಮಂಜುನಾಥ್, ಡಾ.ತೇಜಸ್ವಿನಿ, ಆಯರಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಮತ್ತಿತರರು ಭಾಗವಹಿಸಿದ್ದರು.