ತಾಲ್ಲೂಕಿನ ನಂದಿನಿ ಹಾಲಿನ ನಿರ್ದೇಶಕ ಪಟ್ಟ ಮಾಜಿ ಅಥವಾ ಹಾಲಿ ಅಧ್ಯಕ್ಷರಿಗೂ..?

 ಮಧುಗಿರಿ:

      ರಾಜೇಂದ್ರ ಎಂ.ಎನ್. ಮಧುಗಿರಿ: 360 ಕೋಟಿಯಷ್ಟು ದೇವರುಗಳನ್ನೊಳಗೊಂಡ ತದೃಪಿ ಹಸುಗಳ ಹಾಲನ್ನು ಉತ್ಪಾದಿಸುವ ತುಮಲ್ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಮಧುಗಿರಿಯ ನಿರ್ದೇಶಕ ಸ್ಥಾನವು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದ ಕ್ಷೇತ್ರವಾಗಿ ಹಾಲಿ ಮಾಜಿಗಳ ನಡುವೆ ಚುನಾವಣೆಯ ಪ್ರಚಾರವು ಬಿರುಸಿನಿಂದ ಕೂಡಿದೆ.

      ತಾಲ್ಲೂಕಿನ ತುಮುಲ್ ನಿರ್ದೇಶಕ ಸ್ಥಾನಕ್ಕಾಗಿ ಚುನಾವಣೆಯು ಇದೆ ತಿಂಗಳ ಅ.30 ರಂದು ಚುನಾವಣೆ ನಡೆಯಲಿದ್ದು ಹಾಲಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮತ್ತು ಮಾಜಿ ಅಧ್ಯಕ್ಷ ಜಿ.ನಾಗೇಶ್ ಬಾಬುರವರ ಸ್ಪರ್ಧೆಯಿಂದ ಇಬ್ಬರ ನಡುವೆ ಜಿದ್ದಾ ಜಿದ್ದಿನ ಕ್ಷೇತ್ರವಾಗಿ ತಾಲ್ಲೂಕು ಮಾರ್ಪಟ್ಟಿದ್ದು 126 ಮತಗಳಲ್ಲಿ ಮೂಕ್ಕಾಲು ಭಾಗ ಮತ ಪಡೆದವರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.

      ಕಳೆದ ಚುನಾವಣೆಯಲ್ಲಿ ಮತಕ್ಕಾಗಿ ಒಂದು ವಾಚ್ ಮತ್ತು ಒಂದು ಸಾವಿರ ಹಣವು ಮತದಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷದಿಂದ ಎರಡು ಲಕ್ಷದ ವರೆವಿಗೆ ಮತಗಳು ಮಾರಾಟವಾಗುತ್ತಿರುವ ಬಗ್ಗೆ ಗುಮಾನಿ ಸುದ್ದಿಗಳು ತಾಲ್ಲೂಕಿನಲ್ಲಿ ಹರಿದಾಡುತ್ತಿವೆ.

      ಸುಮಾರು 126 ಮತದಾನದ ಹಕ್ಕನ್ನು ಒಳಗೊಂಡ ಹಾಲಿ ಡೈರಿಯಲ್ಲಿ ತಮ್ಮ ಡೈರಿ ಪರವಾಗಿ ಒಬ್ಬರಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ ಆದರೆ ಈ ಮತದಾನದಲ್ಲಿ ಪಾಲ್ಗೂಳ್ಳುವ ಒಬ್ಬ ವ್ಯಕ್ತಿಗೆ ಸುಮಾರು ಊಡುಗೊರೆ ಹಾಗೂ ಹಣದ ಆಮಿಷವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರು ಒಡ್ಡೂತ್ತಿದ್ದಾರೆ ಆದರೆ ಮತದಾರ ಮಾತ್ರ ಯಾವ ಅಭ್ಯರ್ಥಿಯ ಭವಿಷ್ಯ ಮಾತ್ರ ಅವನ ಕೈಯಲ್ಲಿದೆ.

      ಕಳೆದ ಎರಡು ದಿನಗಳ ಹಿಂದೆ ಚುನಾವಣಾ ಕಣದಲ್ಲಿನ ಅಭ್ಯರ್ಥಿಯೊಬ್ಬರ ಬೆಂಬಗಲಿಗರು ತಮ್ಮ ಪರವಾಗಿ ಮತ ಚಲಾಯಿಸುವಂತೆ ಒತ್ತಾಯಿಸಿ ಗ್ರಾಮದಲ್ಲಿದ್ದ ಕೆಲ ಮತದಾರರನ್ನು ಅವರ ಮನೆಯ ಬಳಿಯೇ ಹೋಗಿ ಹುಟ್ಟ ಬಟ್ಟಯಲ್ಲಿಯೇ ಪ್ರವಾಸಕ್ಕೆ ಒರಬೇಕೆಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದು ವಿಷಯ ತಿಳಿದ ಮತ್ತೊಬ್ಬ ಅಭ್ಯರ್ಥಿ ಪ್ರವಾಸದಲ್ಲಿದ್ದ ಮತದಾರರನ್ನು ಮನವಿ ಮೇರೆಗೆ ಪ್ರವಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿ ವಾಪಸ್ ಕರೆಯಿಸಿದ್ದರಿಂದ ಅವರಿಗೆ ನೀಡಿದ್ದ ಹಣವನ್ನೆಲ್ಲಾ ವಾಪಸ್ಸು ಕೊನೆಗೆ ಬಸ್ ಛಾರ್ಜ್‍ಗೂ ನೀಡದೆ ಕಳುಹಿಸಿರುವ ಮಾಹಿತಿಗಳು ತಾಲ್ಲೂಕಿನಾದ್ಯಂತ ನಾಗರೀಕರ ಮಾತುಗಳಲ್ಲಿ ಹರಿದಾಡುತ್ತಿವೆ.

      ತುಮುಲ್‍ನ ಸಮಗ್ರ ಅಭಿವೃದ್ಧಿ ಕೈಗೊಂಡಿದ್ದೆನೆಂದು ಹಾಲಿ ಅಧ್ಯಕ್ಷರು ಮತದಾರರ ಬಳಿ ಮತಯಾಚನೆಯಲ್ಲಿ ತೊಡಗಿ ಹಾಲಿ ಸಂಘದ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಮತ್ತು ಸಂಘದ ಸದಸ್ಯರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಿಲ್ಲ ಹಾಗೂ ಕೇವಲ ತಮ್ಮ ಸಮೂದಾಯಕ್ಕೆ ಮಾತ್ರ ಹೆಚ್ಚು ಬೆಂಬಲ ನೀಡುತ್ತಾರೆ ಇತರರನ್ನು ಪರಿಗÀಣಿಸುವುದಿಲ್ಲ ಮತ್ತು ಈಗ ಕಾಂಗ್ರೆಸ್ ಪಕ್ಷ ಪಕ್ಷ ತೊರೆದಿದ್ದಾರೆಂಬ ಆರೋಪಗಳು ಹಾಲಿ ಅಧ್ಯಕ್ಷರ ವಿರುದ್ಧ ಇವೆ.

      ಮಾಜಿ ಅಧ್ಯಕ್ಷರು ಹಾಲು ಉತ್ಪಾದಕ ಸಂಘದ ಮತದಾನದ ಪಟ್ಟಿಯಲ್ಲಿ ಕೆಲ ಸಂಘದ ಸದಸ್ಯರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದೆನೆ ಹಾಲಿ ಅಧ್ಯಕ್ಷರು ತುಮುಲ್ ನಲ್ಲಿ ಭಾರಿ ಭ್ರಷ್ಟಚಾರ ನಡೆಸಿದ್ದಾರೆಂಬ ಆರೋಪಗಳ ನಡುವೆ ಮಾಜಿ ಅಧ್ಯಕ್ಷ ಜೆಡಿಎಸ್ ತೊರೆದು ಮತ್ತೆ ತಮ್ಮ ಮಾತ್ರೂ ಪಕ್ಷವಾದ ಕಾಂಗ್ರೆಸ್ ಪಕ್ಷ ಸೇರಿ ಹಿಂದಿನ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಸುಮಾರು ಮುಖಂಡರ ಸಹಕಾರದಿಂದ ಈ ಬಾರಿಯ ಚುನಾವಣೆಯಲ್ಲಿ ಜಯಬೇರಿ ಬಾರಿಸುತ್ತೆನೆಂಬ ಹುಮ್ಮನಿಸ್ಸಿನಲ್ಲಿದ್ದಾರೆ.

      ಮಾಜಿ ಅಧ್ಯಕ್ಷ ನಾಗೇಶ್ ಬಾಬು ಕೆ.ಎನ್.ರಾಜಣ್ಣನವರ ಬೆಂಬಲದೊಂದಿಗೆ ಅಖಾಡದಲ್ಲಿದ್ದರೆ ಹಾಲಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ರವರು ಹಾಲಿ ಶಾಸಕ ವೀರಭದ್ರಯ್ಯನವರ ಬೆಂಬಲ ನಿರೀಕ್ಷಿಸುತ್ತಿದ್ದೂ ರಾಜಣ್ಣನವರು ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಸಮೃದ್ಧ ನಂದಿನಿ ಹಾಲು ಯಾರು ಕುಡಿಯಲಿದ್ದಾರೆಂಬುದು ಕೂತೂಹಲವಾಗಿದ್ದು ದೀಪಾವಳಿಯ ಹಬ್ಬಕ್ಕೆ ಸಿಡಿಮದ್ದು ಯಾರು ಹಚ್ಚುತ್ತಾರೆಂಬುದನ್ನು ಕಾದುನೋಡ ಬೇಕಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap