ಹರಪನಹಳ್ಳಿ:
ಐದು ವರ್ಷದ ಅವಧಿಯಲ್ಲಿ ಕ್ಷೇತ್ರ 9 ಸಾವಿರ ಕೋಟಿಗೂ ರೂಪಾಯಿ ಹೆಚ್ಚು ಅನುದಾನ ತಂದು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದ ತೃಪ್ತಿ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಗುರುವಾರ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು ಪಟ್ಟಣದಲ್ಲಿ ಸಂಜೆ ರೋಡ್ ಶೋ ನಡೆಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಹಾಗೂ ಹಿಂದೂಳಿದವರ ಪರ ಸಾಕಷ್ಟು ಕೆಲಸ ಮಾಡಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಬಡವರಿಗೆ ಮನೆ, ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ, ರೈತರಿಗೆ ಫಸಲ ಭೀಮಾ, ಆಯುಷ್ಮಾನ ಭಾರತ ಮುಂತಾದ ಯೋಜನೆಗಳನ್ನು ಜಾರಿಗೆ ತಂದು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿದೆ ಎಂದರು.
ನನಗೆ ಮತದಾರರೇ ಪ್ರಭುಗಳು. ಹಿಂದಿನ ಚುನಾವಣೆಗಳಲ್ಲಿ ನನಗೆ ಬೆಂಬಲಿಸಿದ್ದಾರೆ. ಈ ಚುನಾವಣೆಯಲ್ಲಿ ಬೆಂಬಲ ನೀಡಿದರೆ ನಾನು ಹಾಗೂ ಶಾಸಕ ಜಿ.ಕರುಣಾಕರರೆಡ್ಡಿ ಜತೆಗೂಡಿ ತಾಲ್ಲೂಕು ಹಾಗೂ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಸೈನಿಕ ದೇಶದ ಗಡಿ ಕಾವಲನಾದರೆ, ದೇಶದ ರಕ್ಷಣೆಗೆ ಮೋದಿ ಜೀ ಮತ್ತೊಮ್ಮೆ ಪ್ರಧಾನಿ ಆಗಬೇಕು. ವಿಶ್ವದಲ್ಲೇ ಭಾರತಕ್ಕೆ ಕೀರ್ತಿ ತಂದ ಶ್ರೇಯಸ್ಸು ಮೋದಿ ಅವರಿಗೆ ಸಲ್ಲುತ್ತದೆ. ತಾಲ್ಲೂಕಿನಿಂದ ಅತೀ ಹೆಚ್ಚು ಲೀಡ್ ನೀಡಿ ಸಂಸದ ಸಿದ್ದೇಶ್ವರ ಗೆಲುವಿಗೆ ನಾವೇಲ್ಲರೂ ಶ್ರಮಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರ್.ಲೋಕೇಶ್, ಲಿಂಬ್ಯಾನಾಯ್ಕ, ನಿಟ್ಟೂರು ಸಣ್ಣಹಾಲಪ್ಪ, ಕೃಷ್ಣಾ, ಬಾವಿಕಟ್ಟಿ ಅಣ್ಣಪ್ಪ, ಹಳ್ಳಿಕೆರೆ ಬಸಣ್ಣ, ಶಿಂಗ್ರಹಳ್ಳಿ ನಾಗರಾಜಪ್ಪ, ರಾಘವೇಂದ್ರ ಶೆಟ್ಟಿ, ಬಿ.ವೈ.ವೆಂಕಟೇಶನಾಯ್ಕ, ಮಲ್ಲೇಶ್, ಕುರಬಗೆರೆ ಕೆಂಚಣ್ಣ, ಸುರೇಂದ್ರ ಮಾಂಚಾಲಿ, ಪ್ರಾಣೇಶ್, ರಾಮಚಂದ್ರನಾಯ್ಕ, ರಾಯದುರ್ಗದ ಗಂಗಮ್ಮ, ರೇಖಮ್ಮ ಸೇರಿದಂತೆ ಅನೇಕರಿದ್ದರು