ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಾವೇಶ

ಹಾವೇರಿ :

         ಆಳುವ ಸರಕಾರಗಳು ಮಹತ್ವದ ಶಿಕ್ಷಣ ಕೇತ್ರ ಕಡಿಗಣಿಸಿ, ಉಳ್ಳವರ ಪರ ಕೆಲಸ ಮಾಡುತ್ತಿರುವುದರ ಪರಿಣಾಮ ದೇಶ ಹಿಂದುಳಿದಿದೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಆರೋಪಿಸಿದರು.

          ಜಿಲ್ಲೆಯ ರಾಣ್ಣೇಬೆನ್ನೂರ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಎಸ್ಎಫ್ಐ ತಾಲ್ಲೂಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಆಳುವ ಸರಕಾರಗಳು ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿವೆ. ಶುಲ್ಕವನ್ನು ಹೆಚ್ಚಿಸುವ ಮೂಲಕ ಶೋಷಿತರನ್ನು ಶಿಕ್ಷಣದಿಂದ ದೂರ ಮಾಡುತ್ತಿವೆ.

          ವಿದೇಶಿ ಮತ್ತು ಖಾಸಗಿ ವಿ.ವಿ ತೆರೆಯುವ ಮೂಲಕ ಶಿಕ್ಷಣದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ರಾಜ್ಯ ಸರಕಾರ ಉಚಿತ ಬಸ್ ಪಾಸ್ ನೀಡದೆ ಮೋಸ ಮಾಡಿದೆ. ಮುಂಬರುವ ಶೈಕ್ಷಣಿಕ ಅವಧಿಗೆ ಉಚಿತ ಬಸ್ ನೀಡದೆ ಇದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು.

         ಕೇಂದ್ರ ಸರಕಾರ ಶಿಕ್ಷಣಕ್ಕೆ ಹಣ ಕಡಿತ ಮಾಡಿತ್ತು. ವರ್ಷಕ್ಕೆ ನಾಲ್ಕು ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಉದ್ಯೋಗ ಸೃಷ್ಟಿಸದೆ ವಂಚನೆ ಮಾಡಿದರು. ನಾವು ಜಾಗೃತರಾಗಿ ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಜಾರಿ ಮಾಡುವ ವ್ಯಕ್ತಿಗೆ ಮತ ನೀಡಬೇಕು ಎಂದು ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಕರೆ ನೀಡಿದರು.

          ಸಮಾವೇಶದ ಅಧ್ಯಕ್ಷತೆಯನ್ನು ತಾಲ್ಲೂಕ ಎಸ್ಎಫ್ಐ ಅಧ್ಯಕ್ಷ ಬಸವರಾಜ ಭೋವಿ ವಹಿಸಿದ್ದರು. ವೇಧಿಕೆಯ ಮೇಲೆ ಬರಹಗಾರರಾದ ಮಹಾಂತೇಶ ದೊಡ್ಮನಿ, ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ, ವೀರಣ್ಣ ಪಾಟೀಲ್ ಎಸ್ಎಫ್ಐ ಮುಖಂಡರಾದ ಪ್ರಮೋದ್, ಲಕ್ಷ್ಮಣ, ಪಾರ್ವತಿ, ಸಚಿನ್, ದೀಪಕ್ ಸೇರಿದಂತೆ ಅನೇರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link