ತಿರುವನಂತಪುರಂ:
ಕೇರಳದಿಂದ ಹೋಗಿ ಬೇರೆ ಬೇರೆ ಕಡೆ ನೆಲೆಸಿರುವ ತಮ್ಮ ರಾಜ್ಯದ ಜನರಿಗೆ ತಮ್ಮ ಒಂದು ತಿಂಗಳ ವೇತನವನ್ನು ಕೇರಳ ಪ್ರವಾಹ ಸಂತ್ರಸ್ಥ ನಿಧಿಗೆ ದೇಣಿಗೆ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿನಂತಿ ಮಾಡಿದ್ದಾರೆ. ಜಗತ್ತಿನಾದ್ಯಂತ ಇರುವ ಕೇರಳದವರು ಈ ಸಂಕಷ್ಟದ ಸಮಯದಲ್ಲಿ ಒಗ್ಗಟ್ಟಾದರೆ ಖಂಡಿತ ನಾವು ಈಗ ಾಗಿರುವ ದುರಂತದಿಂದ ಹೊರಬರಬಹುದು ಎಂದು ಪಿಣರಾಯಿ ವಿಜಯನ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಅವರು “ತಮ್ಮ ಒಂದು ತಿಂಗಳ ವೇತನವನ್ನು ಒಂದೇ ಸಲಕ್ಕೆ ನೀಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಆದ್ದರಿಂದ ಪ್ರತಿ ತಿಂಗಳೂ ಕಂತಿನಂತೆ ಎಲ್ಲರೂ ತಮ್ಮ ಸಂಬಳದ ಕೆಲ ಭಾಗವನ್ನು ನೀಡಿ, ಸಂತ್ರಸ್ಥ ಮಲಯಾಳಿಗಳಿಗೆ ಬೆಂಬಲವಾಗಿ ನಿಲ್ಲಿ” ಎಂದು ಅವರು ವಿನಂತಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








