ಭೂ ಒತ್ತುವರಿ : ಪುರಸಭೆ ಕಂದಾಯ ಇಲಾಖೆ ಜಂಟಿ ಪರಿಶೀಲನೆ

ಹರಪನಹಳ್ಳಿ:

     ಪಟ್ಟಣದ ಹಿರೆಕೆರೆ ಒತ್ತುವರಿ ಸ್ಥಳವನ್ನು ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಸಿಲ್ದಾರ್ ಸೇರಿದಂತೆ ಸರ್ವೆ ಇಲಾಕೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

     ಸರ್ಕಾರಿ ಜಮೀನುಗಳ ಭೂಗಳ್ಳತನ ವಿರೋಧಿ ವೇದಿಕೆ ಅಧ್ಯಕ್ಷ ಪಿರಂಗಿ ವಿ. ದುರುಗದಯ್ಯನವರು ಹಿರೆಕೆರೆಗೆ ಸಂಬಂಧಿಸಿದ ಜಮೀನನ್ನು ಅತಿಕ್ರಮಿಸಿದ್ದರ ವಿರುದ್ದ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೂರಿನ ಅನ್ವಯ, ಲೋಕಾಯುಕ್ತರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂದಿಸಿದಂತೆ ಬಂದ ಸೂಚನೆಯ ಮೇರೆಗೆ ಹಿರೆಕೆರೆ ಭೂಮಿ ಒತ್ತುವರಿ ಸ್ಥಳಗಳ ಪರಿಶೀಲನೆಗೆ ಜಂಟಿಯಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

    2017 ರಲ್ಲೆ ಹಿರೆಕೆರೆ ಭೂಮಿ ಒತ್ತವರಿಗೆ ಸಂಬಧಿಸಿದಂತೆ ದೂರು ದಾಖಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ ಧೋರಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯವಾದಿ ಇದ್ಲಿರಾಮಪ್ಪ ದೂರಿದ್ದಾರೆ.

     ಹಿರೆಕೆರೆಗೆ ಸಂಬಂಧಿಸಿದ ಒಟ್ಟು 179 ಎಕರೆ 65 ಸೆಂಟ್ಸ್ ಸ್ಥಳದಲ್ಲಿ 35 ರಿಂದ 40 ಎಕರೆಯಷ್ಟು ಭೂಮಿಯನ್ನು ಉಳುಮೆಗೆ ಹಾಗೂ ಮನೆ ಮತ್ತು ಬಿಲ್ಡಿಂಗ್ ನಿರ್ಮಾಣ ಮಾಡಿಕೊಂಡು ಅತಿಕ್ರಮಿಸಿದ್ದಾರೆ. ಕೂಡಲೇ ಅತಿಕ್ರಮದಾರರಿಗೆ ನೋಟೀಸ್ ನೀಡಿ ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪಿರಂಗಿ ವಿ ದುರುಗದಯ್ಯನವರ ಅಹವಲಾಗಿದೆ.

       “ಅತಿಕ್ರಮ ಕಟ್ಟಡಗಳ ಮಾಹಿತಿ ನೀಡುವಂತೆ ತಹಸಿಲ್ದಾರ್‍ರವರ ಸೂಚನೆ ಮೇರೆಗೆ ಪುರಸಭೆ ವತಿಯಿಂದ ಮಾಹಿತಿ ನೀಡಿದ್ದೇವೆ. ಅತಿಕ್ರಮದಾರರಿಗೆ ತಹಸಿಲ್ದಾರರವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.”

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap