ತುಂಗಭದ್ರ ಪಾತ್ರದ ಪ್ರದೇಶಗಳಿಗೆ ಹಾವೇರಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ಬೇಟಿ ಪರಿಶೀಲನೆ

 ಗುತ್ತಲ:

      ಗುತ್ತಲ ಸಮೀಪದ ತುಂಗಭದ್ರ ನದಿ ಮೈತುಂಬಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಸೂಚನೆಯಿದ್ದು, ಇದರ ಮುಂಜಾಗೃತ ಕ್ರಮಕ್ಕಾಗಿ ಹಾವೇರಿ ಉಪವಿಭಾಗಾಧಿಕಾರಿ ಪಿ.ಎನ್.ಲೊಕೇಶ ಹಾಗೂ ತಹಶೀಲ್ದಾರ ಜೆ.ಬಿ ಮಜ್ಜಗಿ ಬುಧವಾರ ಸಂಜೆ ಬೇಟಿ ನೀಡಿ ಪರಿಶೀಲಿಸಿದರು.

      ಗುತ್ತಲ ಸಮೀಪದ ಕಂಚಾರಗಟ್ಟಿ, ಹರಳಹಳ್ಳಿ ತುಂಗಭದ್ರ ನದಿ ಪಾತ್ರದಲ್ಲಿರು ಪ್ರದೇಶಗಳಾಗಿದ್ದು, ಇಲ್ಲಿ ಜನರು ಯಾವುದೇ ಕಾರಣಕ್ಕೂ ದನಕರಗಳನ್ನು ನೀರು ಕುಡಿಸಲು ಮತ್ತು ಮೈತೊಳೆಯಲು ನದಿ ಪಾತ್ರಕ್ಕೆ ತೆರಳಬಾರದೆಂದು ಸ್ಥಳಿಯ ಸಾರ್ವಜನಿಕರಿಗೆ ತಿಳಿ ಹೇಳಿದರು. ಹಳೆ ಕಂಚಾರಗಟ್ಟಿನ ಗ್ರಾಮದಲ್ಲಿ ಕೆಲವು ಮನೆಗಳಿವೆ ಅವುಗಳಲ್ಲಿ ವಾಸಿಸುವ ಸಾರ್ವಜನಿಕರೊಂದಿಗೆ ಚರ್ಚಸಿ ನದಿ ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟದಲ್ಲಿ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ಎಚ್ಚರಿಕೆಯಿಂದರಲು ಸೂಚಿಸಿದರು.

      ಮಾಧ್ಯಮದೊಂದಿಗೆ ತಹಶೀಲ್ದಾರ ಜೆ.ಬಿ ಮಜ್ಜಗಿ ಮಾತನಾಡಿ, ತುಂಗಭದ್ರ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ನದಿ ಪಾತ್ರದ ಗ್ರಾಮಗಳಿಗೆ ಯಾವುದೆ ರೀತಿಯಲ್ಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಇಲಾಖೆ ಸನ್ನದ್ದವಾಗಿದೆ. ಸ್ಥಳೀಯವಾಗಿ ಈಜುಗಾರ ಮಾಹಿತಿ ಪಡೆದುಕೊಳ್ಳಲಾಗಿ ಹಾಗೂ ಮುಂಜಾಗೃತಾ ಕ್ರಮಕ್ಕಾಗಿ ದೋಣಿ ಬುಟ್ಟಿಗಳನ್ನು ವ್ಯವಸ್ಥೆ ಮಾಡಲು ಗ್ರಾಮ ಪಂಚಾಯಿತಿ ಪಿ.ಡಿ.ಓ ಗಳಿಗೆ ಮತ್ತು ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕ ಆದೇಶಿಸಲಾಗುವುದು ಎಂದು ತಿಳಿಸಿದರು.
ಬೇಟಿಯ ಸಂದರ್ಭದಲ್ಲಿ: ಪಿ.ಎಸ್.ಐ ಸಿದ್ದಾರೂಡ ಬಡಿಗೇರ, ಉಪತಹಶೀಲ್ದಾರ ರವಿ ಕೊರವರ, ಗ್ರಾಮಲೆಕ್ಕಾಧಿಕಾರಿ ಪಕ್ಕೀರೇಶ ಬಾರ್ಕಿ, ರಿತ್ತಿಮಠ, ಮಹೇಶ ಹಾಗೂ ಸಿಬ್ಬಂದಿಗಳಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link