ಹೊಸಪೇಟೆ :
ತೋಟಗಾರಿಕೆ ವಿಶ್ವವಿದ್ಯಾಲಯ ತಜ್ಞರ ತಂಡ ಈರುಳ್ಳಿ ಬೆಳೆ ಸರಿಯಾಗಿ ಮೊಳಕೆ ಬಾರದ ಹಿನ್ನಲೆಯಲ್ಲಿ ತಾಲೂಕಿನ ಕಾಕುಬಾಳು ಗ್ರಾಮದಲ್ಲಿ ಬೆಳೆಯಲಾದ ಈರುಳ್ಳಿ ಬೆಳೆಯನ್ನು ಪರಿಶೀಲನೆ ನಡೆಸಿತು.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಬೀಜ ಘಟಕದ ಸಹಾಯಕ ಪ್ರಾಧ್ಯಾಪಕ ಡಾ.ಶಿವಯೋಗಿ, ಮುನಿರಾಬಾದ್‍ನ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಸ್ಯ ರೋಗ ಶಾಸ್ತ್ರ ಮುಖ್ಯಸ್ಥರು ಆದ ಡಾ.ಎಂ.ಎಸ್.ಲೋಕೇಶ್ ಹಾಗೂ ತರಕಾರಿ ವಿಭಾಗದ ಸಹ ಪ್ರಾಧ್ಯಾಪಕ ಕೆ.ಆರ್.ಲಿಂಗಮೂರ್ತಿ, ಮತ್ತು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೆಚ್.ರಾಜೇಂದ್ರ ನೇತೃತ್ವದ ತಂಡ ಕಾಕುಬಾಳು ಗ್ರಾಮದ ರೈತ ಹೊಳ್ಯಾಚೆ ಮಲ್ಲಿಕಾರ್ಜುನ ಹಾಗೂ ಮತ್ತಿತರ ರೈತರು ಬೆಳೆದ ಈರುಳ್ಳಿ ಬೆಳೆಯ ಪರಿಶೀಲನೆ ನಡೆಸಿ, ರೈತರೊಂದಿಗೆ ಚರ್ಚಿಸಿ, ತಾಂತ್ರಿಕ ಸಲಹೆಗಳನ್ನು ನೀಡಿದರು. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ಸೂಚಿಸಿದರು.
ಕಾಕುಬಾಳು ಗ್ರಾಮದ ರೈತ ಹೊಳೆಯಾಚಿ ಮಲ್ಲಿಕಾರ್ಜುನ ಸೇರಿದಂತೆ ಇತರೆ ರೈತರು ಬಾಗಲಕೋಟೆಯ ಬೀಜ ಘಟಕದಿಂದ (ಅರ್ಕಾ ಕಲ್ಯಾಣ) ಬೀಜ ಖರೀದಿಸಿ ನಾಟಿ ಮಾಡಿದ್ದರು. ಎಲ್ಲಾ ರೈತರ ಈರುಳ್ಳಿ ಫಸಲು ಉತ್ತಮವಾಗಿ ಬಂದಿತ್ತು. ಆದರೆ ಮಲ್ಲಿಕಾರ್ಜುನ ಎಂಬ ರೈತನ ಈರುಳ್ಳಿ ಬೆಳೆ ಮೊಳಕೆ ಹೊಡೆದಿರಲಿಲ್ಲ. ಈ ಹಿನ್ನಲೆಯಲ್ಲಿ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
