ತುರುವೇಕೆರೆ:
ತಾಲೂಕಿನ ಅತ್ಯಂತ ಬರಡು ಪ್ರದೇಶವೆಂದೇ ಗುರ್ತಿಸಿರುವ ದಬ್ಬೇಘಟ್ಟ ಹೋಬಳಿಯ ದಬ್ಬೇಘಟ್ಟ ಮತ್ತು ಗೊಟ್ಟೀಕೆರೆಯ ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸಬೇಕೆಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಮಾವತಿ ಇಲಾಖಾ ಇಂಜಿನಿಯರ್ ಗಳನ್ನು ಒತ್ತಾಯಿಸಿದರು.
ತಾಲೂಕಿನ ಹೇಮಾವತಿ ಇಲಾಖಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಛೇರಿಗೆ ದಬ್ಬೇಘಟ್ಟ ಹೋಬಳಿಯ ಅನೇಕ ರೈತರುಗಳೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ ಅವರು ತಾಲ್ಲೂಕಿನ ರೈತರ ಸ್ಥಿತಿ ಬಹಳ ಗಂಭೀರವಾಗಿದೆ. ಈ ಭಾಗದಿಂದಲೇ ಬೇರೆಡೆಗೆ ಹೇಮಾವತಿ ನದಿ ನೀರನ್ನು ಸಾಗಿಸಲಾಗುತ್ತದೆ. ಆದರೆ ಕಳೆದ ಒಂದು ತಿಂಗಳಿನಿಂದಲೂ ಹೊರ ಜಿಲ್ಲೆಗಳಿಗೂ ನೀರು ಹಾದು ಹೋಗುತ್ತಿದ್ದರೂ ಸಹ ಇಲ್ಲಿಯ ಕೆರೆ ಕಟ್ಟೆಗಳಿಗೆ ನೀರಿಲ್ಲದಂತಾಗಿದೆ. ಅಂತರ್ಜಲ ಕುಸಿತದಿಂದಾಗಿ ನೂರಾರು ಅಡಿ ಕೊಳವೆಬಾವಿ ಕೊರೆಸಿದರೂ ಸಹ ನೀರಿಲ್ಲದೆ ರೈತರು ಹೈರಾಣಾಗಿದ್ದಾರೆ. ಈ ಭಾಗದಲ್ಲಿ ಏತ ನೀರಾವರಿ ಇದೆ. ಪ್ರಸ್ತುತ ಸಾಲಿನಲ್ಲಿ ಡ್ಯಾಂಗಳು ತುಂಬಿ ಅಧಿಕ ನೀರು ನಾಲೆ ಮೂಲಕ ಬೇರೆಡೆಗೆ ಹರಿದು ಹೋಗುತ್ತಿದೆ. ಕಳೆದ 1 ತಿಂಗಳಿಂದ ದಬ್ಬೇಘಟ್ಟ ಹಾಗೂ ಗೊಟ್ಟಿಕೆರೆ ಕೆರೆಗಳಿಗೆ ನೀರು ಹರಿದಿಲ್ಲ. ಅಧಿಕಾರಿಗಳು ನೀರು ನಿಲ್ಲುವ ಮುನ್ನಾ ಜಾಗೃತರಾಗಿ ಕೆರೆಗಳನ್ನು ತುಂಬಿಸಬೇಕು ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರೇಶ್ ಆಗ್ರಹಹಿಸಿದರು.
ಪಟ್ಟಣದ ಹೇಮಾವತಿ ಕಛೇರಿಯಲ್ಲಿ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕೆರೆ ಕಟ್ಟೆಗಳಿಗೆ ಹೇಮಾವತಿ ನದಿ ನೀರನ್ನು ಹರಿಸಬೇಕೆಂದು ಆಗ್ರಹಿಸಿ ಮನವಿ ಪತ್ರ ನೀಡಿದ ಅವರು ಕಳೆದ ಒಂದು ತಿಂಗಳಿಂದ ಈ ವ್ಯಾಪ್ತಿಯಲ್ಲಿ ನೀರು ಹರಿಸುತ್ತಿದ್ದರೂ ಕೆರೆಗಳಿಗೆ ನಿರೀಕ್ಷಿತ ವiಟ್ಟದಲ್ಲಿ ನೀರು ಹರಿದೇ ಇಲ್ಲಾ. ಈ ಆಮೆಗತಿ ರೀತಿಯಲ್ಲಿ ನೀರು ಹರಿಸಿದರೆ ವರ್ಷವಿಡೀ ಹರಿದರೂ ಕೆರೆ ತುಂಬುವುದಿಲ್ಲ. ಈ ಭಾಗದ ರೈತರ ಬವಣೆಯೂ ನೀಗುವುದಿಲ್ಲ. ಏತ ನೀರಾವರಿಗೆ ಪಿವಿಪಿ ಪೈಪ್‍ಗಳನ್ನು ಬಳಸಲಾಗಿದೆ. ಅದು ಕೆರೆಗೆ ನೀರು ಹರಿಯುವ ಮುನ್ನವೇ ಹಲವೆಡೆ ಸೋರಿ ಹೋಗುತ್ತಿದೆ. ಮತ್ತೊಂದೆಡೆ ಗೊಟ್ಟಿಕೆರೆ ಪ್ರಾಕೃತಿಕವಾಗಿ ಭೂ ಮೇಲ್ಮೈನಿಂದ ಎತ್ತರ ಪ್ರದೇಶದಲ್ಲಿದೆ. ಅದಕ್ಕೆ ಅನುಗುಣವಾಗಿ ಪೈಪ್‍ಲೈನ್ ಅಳವಡಿಸಿಲ್ಲ. ಈ ಎಲ್ಲಾ ತಾಂತ್ರಿಕ ದೋಷಗಳನ್ನು ಪೂರೈಸಿ ಆ ಭಾಗದ ಎರಡೂ ಕೆರೆಗಳನ್ನು ತುಂಬಿಸಿ ರೈತರ ಬವಣೆ ನೀಗಿಸಬೇಕೆಂದು ಒತ್ತಾಯಿಸಿದರು. ನಾಲಾ ಇಂಜಿನಿಯರ್ ರವರ ಪರವಾಗಿ ತಾಂತ್ರಿಕ ಅಧಿಕಾರಿ ಕುಮಾರಸ್ವಾಮಿ ರವರಿಗೆ ಮನವಿ ಪತ್ರ ನೀಡಿದರು.
ಮನವಿ ಸ್ವೀಕರಿಸಿದ ತಾಂತ್ರಿಕ ಅಧಿಕಾರಿ ಕುಮಾರಸ್ವಾಮಿ ಗ್ರಾಮಸ್ಥರು ನೀಡಿರುವ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯವಿರುವ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಾಂಕೇತಿಕ ಮುಷ್ಕರದಲ್ಲಿ ಧರೀಶ್, ಶ್ರೀನಿವಾಸ್, ಕುಮಾರ್, ಕಾಳಂಜಿಹಳ್ಳಿ ವೀರಣ್ಣ, ಚಂದ್ರೇಶ್ ಸೇವಾ ಟ್ರಸ್ಟ್‍ನ ಪದಾಧಿಕಾರಿಗಳು, ದಬ್ಬೇಘಟ್ಟ ಗ್ರಾಮದ ಮುಖಂಡ ಬೋರೇಗೌಡ ಸೇರಿದಂತೆ ದೆಬ್ಬೇಘಟ್ಟ ಗ್ರಾಮದ ಆಜುಬಾಜು ರೈತರು ಪಾಲ್ಗೊಂಡಿದ್ದರು.