ತುಮಕೂರು:
ಬಹಿರಂಗದಿಂದ ಅಂತರಂಗದ ಕಡೆಗೆ ಮಾನವ ಜೀವನವನ್ನು ತಿರುಗಿಸಲು ಕಾರಣವಾದುದೇ ಶರಣ ಧರ್ಮ ಎಂಬುದು ಜಾತಿ ಸೂಚಕದಲ್ಲಿ ಜ್ಞಾನಿಗಿಂತ ಹೆಚ್ಚಿನ ಅರ್ಥವಿದೆ ಎಂದು ನಿವೃತ್ತ ಉಪನ್ಯಾಸಕಿ ಉಮಾ ರಾಜೇಂದ್ರ ತಿಳಿಸಿದರು.
ಕದಳಿ ಮಹಿಳಾ ವೇದಿಕೆಯಿಂದ ಏರ್ಪಡಿಸಲಾಗಿದ್ದ `ವಚನ ದಿನ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ 2000 ವರ್ಷಗಳಿಂದೀಚೆಗೆ ಹುಟ್ಟಿದ ಧರ್ಮಗಳ ಸಾರವನ್ನು ವಚನಗಳಿಂದ ತಿಳಿಯಬಹುದು. ಬಸವನಣ್ಣನವರಿಂದ ರಚಿಸಲ್ಪಟ್ಟ ಕಳಬೇಡ, ಕೊಲಬೇಡ ಎಂಬ ವಚನ ಸಂವಿಧಾನದ ಸಾರವನ್ನೇ ಹೊತ್ತು ನಿಂತಿದೆ. ಸೌಭಾಗ್ಯ ಮತ್ತು ಸಂಪತ್ತು ಒಂದೆಡೆ ಇರಲು ಸಾಧ್ಯವಿಲ್ಲ. ದುಡಿಮೆಯ ಒಂದಂಶವನ್ನು ದಾನಕ್ಕೆ ಬಳಸಬೇಕು. ವಿಜ್ಞಾನದಲ್ಲಿ ಹುಡುಕಿ ಕಾಣದ ಉತ್ತರಗಳನ್ನು ಆಧ್ಯಾತ್ಮದಲ್ಲಿ ಕಂಡುಕೊಂಡವರು ಶರಣರು ಎಂದರು.
ಹೆಣ್ಣು ಮಕ್ಕಳು ಅಶಕ್ತರು, ದುರ್ಬಲರು ಎಂದು ನಡೆಯುತ್ತಿದ್ದ ಶೋಷಣೆಯನ್ನು ಖಂಡಿಸಿದ್ದು ವಚನ ಧರ್ಮ. ವೇದಶಾಸ್ತ್ರಗಳನ್ನು ಒಗೆದು ಎಲ್ಲರನ್ನೂ ಅಪ್ಪಿಕೊಂಡಿದ್ದು ವಚನಕಾರರು. ವಚನ ಧರ್ಮ, ವಿಶ್ವಧರ್ಮವನ್ನು ಸಮನ್ವಯಿಸಿಕೊಂಡು ಬದುಕುವ ಅವಕಾಶ ನಮ್ಮಲ್ಲರಿಗಿದೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಶರಣೆ ಲೋಕೇಶ್ವರಿ ಪ್ರಭು ಸಮಾಜವನ್ನು, ವ್ಯಕ್ತಿಯನ್ನು ಸುಶಿಕ್ಷಿರನ್ನಾಗಿಸುವ ಸಾಮಥ್ರ್ಯ ವಚನ ಧರ್ಮಕ್ಕಿದೆ. ವಚನಕಾರರಲ್ಲಿ ಈ ಧರ್ಮವನ್ನು ಹುಟ್ಟಿಕೊಂಡು, ಅಪ್ಪಿಕೊಂಡು ಬದುಕಿದವರು ಎಂದರು.
ವಚನ ದಿನದ ಅಂಗವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಂಗಳ ಮಹೇಶ್ ನಿರೂಪಿಸಿದರೆ, ಸುಮಾಪ್ರಸನ್ನ ಸ್ವಾಗತಿಸಿದರು. ಜ್ಯೋತಿ ಆನಂದ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ