ತುರುವೇಕೆರೆ :
ತಾಲೂಕಿನ 27 ಗ್ರಾಮ ಪಂಚಾಯಿತಿಗಳ ಚುನಾವಣೆ ಮತ ಎಣಿಕೆ ವಿಳಂಬವಾಗಿದ್ದಕ್ಕೆ ಮತ ಎಣಿಕೆ ಕೇಂದ್ರದ ಬಳಿ ಇದ್ದ ಅಭ್ಯರ್ಥಿಗಳ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ನೀರುಗುಂದ ಕ್ಷೇತ್ರದಿಂದ ಅಭ್ಯರ್ಥಿ ಛಾಯಾ 258 ಮತ ಪಡೆದು ಗೆಲುವು ಸಾಧಿಸಿದರು. ಕಣತೂರು ಪಂಚಾಯಿತಿಯ ಮೋಹನ್ ಮತ್ತು ಎ.ಬಿ.ತ್ಯಾಗರಾಜು ಇಬ್ಬರೂ ತಲಾ 133 ಮತಗಳನ್ನು ಪಡೆದ ಹಿನ್ನಲೆಯಲ್ಲಿ ಆಲದಹಳ್ಳಿ ಕ್ಷೇತ್ರದ ಎ.ಬಿ.ತ್ಯಾಗರಾಜು ಲಾಟರಿಯ ಮೂಲಕ ಅದೃಷ್ಟದ ಗೆಲುವು ಪಡೆದರು. ಹುಲ್ಲೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚೇನಹಳ್ಳಿ ಬ್ಲಾಕ್‍ನಿಂದ ಸ್ಪರ್ಧಿಸಿದ್ದ ವಿನಯ್ 2 ಮತಗಳ ಅಂತರದಿಂದ ಗೆಲವು ಗಳಿಸಿದರು. ಮುನಿಯೂರು ಗ್ರಾಮ ಪಂಚಾಯಿತಿ ಗೊಟ್ಟಿಕೆರೆ ಬ್ಲಾಕ್‍ನಿಂದ ಪಿಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ 150 ಮತಗಳ ಅತಂರದಿಂದ ಗೆಲವು ಸಾಧಿಸಿದ್ದಾರೆ. ಕಾಳಂಜಿಹಳ್ಳಿ ಬ್ಲಾಕ್‍ನಿಂದ ಸೋಮಶೇಖರ್ 80 ಮತಗಳ ಅಂತರದಿಂದ ಜಯಪಡೆದರು. ದಂಡಿನಶಿವರ ಗ್ರಾ,ಪಂ.ಯ ದುಂಡ ಬ್ಲಾಕ್‍ನಿಂದ ನವೀನ್ 136 ಮತಗಳ ಅಂತರದಿಂದ, ಕೋಡಿಹಳ್ಳಿ ಬ್ಲಾಕ್‍ನಿಂದ ಶಿವಕುಮಾರ್ ಹಾಗೂ ಆನೆಕೆರೆ ಗ್ರಾಮ ಪಂಚಾಯಿತಿ ಭುವನಹಳ್ಳಿ ಬ್ಲಾಕ್‍ನಿಂದ ಪುನೀತ್ ಚುನಾಯಿತರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
