ದೇವೇಗೌಡರ ಕುಟುಂಬ ರಾಜಕಾರಣದಿಂದ ರಾಜ್ಯದ ಜನತೆ ಬೆಸತ್ತು ಹೋಗಿದ್ದಾರೆ : ಮಸಾಲ ಜಯರಾಮ್

ತುರುವೇಕೆರೆ:

      ಹೇಮಾವತಿ ನಾಲಾ ನೀರಿನ ವಿಚಾರದಲ್ಲಿ ಎಚ್.ಡಿ.ದೇವೇಗೌಡರು ತುಮಕೂರು ಜಿಲ್ಲೆಯ ರೈತರಿಗೆ ಮಾಡಿರುವ ಅನ್ಯಾಯದಲ್ಲಿ ಯಾವ ಮುಖವೊತ್ತು ಜಿಲ್ಲೆಯ ಜನರಿಂದ ವೋಟು ಕೇಳುತ್ತಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿದರು.

      ತಾಲ್ಲೂಕಿನ ಬಿಜೆಪಿ ಮುಖಂಡರು ಶಾಸಕ ಮಸಾಲಜಯರಾಮ್ ನೇತೃತ್ವದಲ್ಲಿ ಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಮತ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಜನರಿಂದ ಮತಯಾಚಿಸಿ ಮಾತನಾಡಿದರು.

       ದೇವೇಗೌಡರು ತುಮಕೂರಿಗೆ ನೀರು ಬಿಡಕೂಡದೆಂದು ಪ್ರತಿಭಟನೆಗಿಳಿದು, ಹೋರಾಟಮಾಡಿ ಜಿಲ್ಲೆಯ ರೈತರ ಕಣ್ಣಲ್ಲಿ ರಕ್ತ ಸುರಿಸುವಂತೆ ಮಾಡಿದವರು. ಈಗ ವೋಟು ಕೊಡಿ ಎಂದು ಕೇಳುತ್ತಾರಲ್ಲ ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ವಿಚಾರದಲ್ಲಿ ರಾಹುಲ್ ಅಪ್ರಬುದ್ಧರಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸ ಬೇಕು.

        ಮೋದಿಯವರು ಐದು ವರ್ಷಗಳ ಅಧಿಕಾರಾವಧಿಯಲ್ಲಿ ಇಡೀ ಜಗತ್ತನೇ ಭಾರತದತ್ತ ವಾರೆಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಜೊತೆಗೆ ರಾಷ್ಟ್ರಪರಿವರ್ತನೆಗೆ, ಸಾಮಾಜಿಕ ನ್ಯಾಯಕ್ಕಾಗಿ ಹಾಗು ದೇಶದ ಅಭಿವೃದ್ದಿಗಾಗಿ ನಾವೆಲ್ಲೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಸಂಕಲ್ಪ ಮಾಡೋಣ.

       ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣದಿಂದ ರಾಜ್ಯದ ಜನತೆ ಬೆಸತ್ತು ಬಿಜೆಪಿಯತ್ತ ವಾಲುತ್ತಿದ್ದಾರೆ. ನೀವು ಅಪ್ಪಿತಪ್ಪಿ ದೇವೇಗೌಡರಿಗೆ ಮತಹಾಕಿ ಗೆಲ್ಲಿಸಿದ್ದೇ ಆದಲ್ಲಿ ಜಿಲ್ಲೆಯ ಜನತೆಯ ಅಸ್ಥಿತ್ವವೇ ಇಲ್ಲದಂತೆ ಮಾಡುತ್ತಾರೆ ಗೌಡರು. ಜಿಲ್ಲೆಯ ಹೊರಗಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡದೆ ನಿಮ್ಮ ಜಿಲ್ಲೆಯ ಮಗನಿಗೆ ವೋಟು ಕೊಡಿ. ನಾನು ಗೆದ್ದರೆ ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಆಧ್ಯತೆ ನೀಡುವೆ ಎಂದ ಭರವಸೆ ವ್ಯಕ್ತಪಡಿಸಿದರು.

       ಮಾಯಸಂದ್ರದ ಟಿ.ಬಿ.ಕ್ರಾಸ್ ಬಳಿ ಮಾಜಿ ಸಂಸದ ಜಿ.ಎಸ್.ಬಸವರಾಜ್ ರೋಡ್ ಶೋ ನಡೆಸಿ ಮಾತನಾಡುತ್ತಿರುವಾಗ, ವಡವನಘಟ್ಟದಿಂದ ಜೆಡಿಎಸ್-ಕಾಂಗ್ರೆಸ್‍ಮೈತ್ರಿ ಸರ್ಕಾರದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುತ್ತಾ ಟಿ.ಬಿ.ಕ್ರಾಸ್ ಬಳಿ ದೇವೇಗೌಡರ ಘೋಷಣೆ ಕೂಗುತ್ತಾ ಬಂದಾಗ ಶಾಸಕ ಮಸಾಲಾಜಯರಾಮ್‍ರವರು ಮಾತನಾಡುತ್ತಿದ್ದ ಜಿ.ಎಸ್.ಬಸವರಾಜ್ ಅವರಿಂದ ಮೈಕ್ ಪಡೆದು ಏರುದ್ವನಿಯಲ್ಲಿ ಮೋದಿ ಪರ ಪ್ರತಿ ಘೋಷಣೆ ಕೂಗುತ್ತಾ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಬಿದ್ದವರಂತೆ ಘೋಷಣೆ ಕೂಗಿದುದು ಇದರಿಂದ ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿತು.

         ಇದಕ್ಕೂ ಮುನ್ನಾ ಪಟ್ಟಣದ ಗಣಪತಿ ಪೆಂಡಾಲ್‍ನಿಂದ ಶಾಸಕ ಮಸಾಲಜಯರಾಮ್ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿಯೊಂದಿಗೆ ಪ್ರಚಾರ ನಡೆಸಿದರು.

         ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ದುಂಡಾರೇಣುಕಪ್ಪ, ಪ.ಪಂ.ಅಧ್ಯಕ್ಷ ಲಚ್ಚಿಬಾಬು, ಎಪಿಎಂಸಿ ನಿರ್ದೇಶಕ. ವಿ.ಟಿ.ವೆಂಕಟರಾಮ್, ಓಬಿಸಿ ಮುಖಂಡ ಸೂರ್ಯಪ್ರಕಾಶ್, ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ಹೆಲಿಕಾಪ್ಟರ್ ರಾಜಶೇಖರ್, ವಕೀಲ ಮುದ್ದೇಗೌಡ, ಹಾವಾಳರಾಮೇಗೌಡ, ಆಯರಹಳ್ಳಿಪಾಂಡು, ನವೀನ್ ಬಾಬು, ಚಿದಾನಂದ್ ಸೇರಿದಂತೆ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link