ಕೊರಟಗೆರೆ:
ತುಮಕೂರು ಲೋಕಸಭಾ ಚುನಾವಣೆಯ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆ.ಡಿ ದೇವೇಗೌಡರವರ ಪರ ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಹಲವು ದಲಿತ ಕಾಲೋನಿಗಳಲ್ಲಿ ಮಾಜಿ ನಗರಸಭಾ ಸದಸ್ಯ ವಾಲೆಚಂದ್ರಯ್ಯ ನೂರಾರು ಬೆಂಬಲಿಗರೊಂದಿಗೆ ಮನೆಮನೆ ಭೇಟಿ ನೀಡಿ ಮತಯಾಚನೆನಡೆಸಿದರು.
ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ನೂರಕ್ಕೂ ಹೆಚ್ಚು ದಲಿತ ಕಾಲೋನಿಗಳಲ್ಲಿ ವಾಲೆಚಂದ್ರಯ್ಯತಮ್ಮಬೆಂಬಲಿಗರು ಹಾಗೂ ಜನಾಂಗದವರನ್ನುಒಗ್ಗೂಡಿಸಿಕೊಂಡು ದಲಿತರಮತಚದುರದಂತೆಸಂಘಟನೆ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ.
2018 ರ ವಿಧಾನಸಭಾಚುನಾವಣೆಯಲ್ಲಿ ಬಿಜೆಪಿಯಿಂದಕಾಂಗ್ರೇಸ್‍ಗೆ ಬಂದ ವಾಲೆ ಚಂದ್ರಯ್ಯ ಪರಮೇಶ್ವರ್‍ರವರ ಗೆಲುವಿಗೆ ಹಗಲು ರಾತ್ರಿ ಶ್ರಮಿಸಿ ಒಳಮೀಸಲಾತಿ ಹಾಗೂ ಎಜೆ ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸುವಂತೆ ಎದ್ದಿದಂತ ದಲಿತರಕೂಗನ್ನು ಕ್ಷೇತ್ರದ ಮಟ್ಟಕ್ಕೆ ಶಾಂತಗೊಳಿಸಿ ದಲಿತಮತ ಚಳುವಲಿಯಲ್ಲಿ ಪ್ರಮುಕ ಪಾತ್ರ ವಹಿಸಿದ ಮಾದರಿಯಲ್ಲಿ ಈ ಭಾರಿಯೂ ಲೋಕಸಭಾ ಚುನಾವಣೆಯಲ್ಲಿ ಪರಮೇಶ್ವರ್‍ರವರ ಮಾರ್ಗದರ್ಶಣದಂತೆದೇವೇಗೌಡರ ಗೆಲುವಿಗೆ ದಲಿತರ ಮತ ಸೆಲೆಯಲು ಸಂಘಟನೆ ಮೂಲಕ ಮನೆ ಮನೆ ಭೇಟಿ ನೀಡಿ ಮತಯಾಚನೆಗಿಳಿದಿದ್ದಾರೆ.
ಕೊರಟಗೆರೆ ವಿಧಾಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಪರಮೇಶ್ವರ್ ಪರವಾಗಿದಲಿತ ನಾಯಕರಾಗಿಹೊಳವನಹಳ್ಳಿ ಜಿಲ್ಲಾ ಸದಸ್ಯನಾರಾಯಣಮೂರ್ತಿ ಹಾಗೂ ವಾಲೆಚಂದ್ರಯ್ಯ 2018 ರ ವಿಧಾನಸಭಾಚುನಾವಣೆಯಲ್ಲಿ ಜೋಡಿಎತ್ತುಗಳ ರೀತಿಯಲ್ಲಿ ಮತಯಾಚನೆ ನಡೆಸಿ ದಲಿತ ಮತಚದುರದಂತೆ ನೋಡಿಕೊಂಡು ಡಿಸಿಎಂ ಗೆಲುವಿಗೆ ಕಾರಣರಾದರೀತಿಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿದಲಿತ ಮತಗಳನ್ನ ಮೈತ್ರಿಅಭ್ಯರ್ಥಿಯಾದ ಹೆಚ್.ಡಿದೇವೇಗೌಡರ ಪರ ಸೆಲೆಯಲು ವಾಲೆಚಂದ್ರಯ್ಯ ಪ್ರತಿದಲಿತ ಕಾಲೋನಿಗಳಿಗೂ ಭೇಟಿ ನೀಡಿ ಮತೆಯಾಚನೆ ನಡೆಸುತ್ತಿದ್ದಾರೆ.
ಲೋಕಸಭಾಚುನಾವಣೆಗೆ ಸಂಬಂಧಿಸದಂತೆಕೊರಟಗೆರೆ ವಿಧಾನಸಭಾ ವ್ಯಾಪ್ತಿಯಲ್ಲಿದಲಿತ ಕಾಲೋನಿಗಳ ಸರ್ವೋತ್ತೋಮುಖ ಅಭಿವೃದ್ದಿಗೆ ಡಿಸಿಎಂ ಪರಮೇಶ್ವರ್‍ರವರಜೊತೆಗೆ ಲೋಕಸಭಾಅಭ್ಯರ್ಥಿ ಹೆಚ್ ಡಿ ದೇವೇಗೌಡರುಗೆಲುವು ಸಾಧಿಸಿದರೆ ದಲಿತ ಪರದ್ವನಿಎತ್ತಲು ನನಗೆ ಇನ್ನಷ್ಟು ಶಕ್ತಿ ಬರುವಕಾರಣದಲಿತ ಮತದಾರರುದೊಡ್ಡಗೌಡರನ್ನು ಬೆಂಬಲಿಸುವ ಅವಶ್ಯಕತೆಇದ್ದುಇವರ ಗೆಲುವಿಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದುಇದೇ ಸಂದರ್ಭದಲ್ಲಿ ವಾಲೆಚಂದ್ರಯ್ಯಅಭಿಪ್ರಾಯಪಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
