ಕೊಟ್ಟೂರು:
ದೇಶದ ಪ್ರಗತಿ ಮತ್ತು ಭಾವಕ್ಯತೆಯನ್ನು ಸಹಿಸದ ಶತ್ರು ರಾಷ್ಟ್ರಗಳ ಷಂಡ್ಯಂತ್ರ ರೂಪಿಸುತ್ತಿದ್ದು ಇದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮ ದೇಶಕ್ಕೆ ಇದೆ ಎಂದು ಶಾಸಕ ಭೀಮನಾಯ್ಕ ಹೇಳಿದರು.ಪಟ್ಟಣದಲ್ಲಿ ಬುಧವಾರ ಕೊಟ್ಟೂರು ತಾಲೂಕು ರಚನೆಯಾದ ಪ್ರಥಮ ಹಾಗೂ 72ನೇ ಸ್ವಾತಂತ್ರ್ಸೋವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಪೂರ್ವಜರು ತ್ಯಾಗ ಬಲಿದಾನದ ಮೂಲಕ ಬ್ರಟಿಷರ ವಿರುದ್ದ ಹೋರಾಡಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಎಪ್ಪತ್ತು ದಶಕಗಳಿಂದ ದೇಶವನ್ನು ಸರ್ವಾರೀತಿಯಲ್ಲಿಯೆ ಬಲಿಷ್ಠವಾಗಿದ್ದು ವಿಶ್ವದಲ್ಲಿಯೆ ಮುಂಚೊಣಿಯ ರಾಷ್ಟ್ರವಾಗಿದೆ ಎಂದರು.
ಉಗ್ರಗಾಮಿಗಳು ನಿತ್ಯವೂ ದೇಶದಲ್ಲಿ ಒಂದಲ್ಲ ಒಂದು ಅತಂಕಕಾರಿ ಸನ್ನಿವೇಶಗಳನ್ನು ಸೃಷ್ಠಿಸುತ್ತಿದ್ದಾರೆ ಇದಕ್ಕೆ ನಾವ್ಯಾರು ಭಯಪಡುವ ಅಗತ್ಯವಿಲ್ಲ ನಮ್ಮ ಬಲಿಷ್ಠ ಸೈನ್ಯ ಇದಕ್ಕೆ ತಕ್ಕ ಉತ್ತರ ನೀಡುತ್ತ ಉಗ್ರಗಾಮಿಗಳನ್ನು ಮಟ್ಟ ಹಾಕುತ್ತಿದೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಕೆ. ಮಂಜುನಾಥ ಸ್ವಾತಂತ್ಯ್ರ ಹೋರಾಟದಲ್ಲಿ ಕೊಟ್ಟೂರು ಹೋರಾಟಗಾರರ ಪಾತ್ರ ಬಹು ದೊಡ್ಡದಿದೆ ಎಂದು ಇಲ್ಲಿನ ಹಲವು ಹೋರಾಟಗಾರರನ್ನು ಸ್ಮರಿಸಿ ಕೊಟ್ಟೂರು ತಾಲೂಕನ್ನು ಮಾದರಿ ತಾಲುಕನ್ನಾಗಿ ಮಾಡುವ ನನ್ನ ಆಸೆಗೆ ಎಲ್ಲಾರು ಬೆಂಬಲಿಸಬೇಕೆಂದು ಕೊರಿದರು.
ವೇದಿಕೆಯಲ್ಲಿ ಉಜ್ಜಯಿನಿ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷವರ್ಧನ, ಚಿರಿಬಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಮಾದೇವಿ, ಕೊಗಳಿ ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ, ರಾಂಪುರ ಜಿಲ್ಲಾ ಪಂಚಾಯಿತಿ ಸದಸ್ಯರಾz ಗುರುಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನೀಲ್ ಹೊಸಮನಿ ಮತ್ತಿತರರು ಇದ್ದರು.
ಸ್ವಾಗತವನ್ನು ಸರಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸವರಾಜ ಮಾಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸ್ವಾತಂತ್ರ್ಯೋತ್ಸವ ಕುರಿತು ಪ್ರದರ್ಶಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಶಕವಾಗಿದ್ದವು. ಸ್ವಾತಂತ್ರ್ಯೊತ್ಸವದ ಅಂಗವಾಗಿ ಪ್ರಬಂಧ ಸ್ಪರ್ಧೆ ಸೇರಿದಂತೆ ಹಲವು ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾ