ಹಗರಿಬೊಮ್ಮನಹಳ್ಳಿ
ದೇಶದ ಭದ್ರತೆ ಮತ್ತು ಹಿತದೃಷ್ಠಿಯಿಂದ ಬಿಜೆಪಿಗೆ ಮತನೀಡಿ ಮತ್ತು ಮತಹಾಕಿಸಿ ಎಂದು ಹರಪನಹಳ್ಳಿಯ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ಹಾಲೇಶ್ ಕರೆ ನೀಡಿದರು.
ಪಟ್ಟಣದ ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರ ಪರ ಮತಯಾಚಿಸಿ ವಕೀಲರನ್ನುದ್ದೇಶಿಸಿ ಮಾತನಾಡಿದರು. ಇಲ್ಲಿ ದೇವೇಂದ್ರಪ್ಪನವರು ಅಭ್ಯರ್ಥಿ ಎನ್ನುವುದಕ್ಕಿಂತ, ಸಮರ್ಥ ಆಡಳಿತಗಾರ, ದೇಶದ ಅಭಿವೃದ್ಧಿಯ ಸಾರಥಿಯಾದ ನರೇಂದ್ರ ಮೋದಿಯವರೇ ಅಭ್ಯರ್ಥಿ ಎಂದುಕೊಂಡು ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿಗೆ ಮತನೀಡಿ ಎಂದು ಮನವಿಮಾಡಿಕೊಂಡರು.
ನಂತರ ಬಿಜೆಪಿ ಮಂಡಲ ಅಧ್ಯಕ್ಷ ನರೆಗಲ್ ಕೊಟ್ರೇಶ್, ವಕೀಲರಾದ ಬಾವಿ ಪ್ರಕಾಶ್, ಶಿವಪ್ರಕಾಶ್, ಕಾಗಿ ಪ್ರಹ್ಲಾದ್, ಎಸ್.ಎಂ.ಶ್ರೀನಿವಾಸ್ ಮತ್ತಿತರರು ಮಾತನಾಡಿ ನರೇಂದ್ರ ಮೋದಿಯವರ ಯೋಜನೆಗಳು ಸಾರ್ವಜನಿಕರ ಮನೆಬಾಗಿಲಿಗೆ ತಲುಪುವಲ್ಲಿ ಯಶಸ್ವಿ ಆಡಳಿತ ನೀಡಿದ್ದಾರೆ ಎಂದು ತಿಳಿಸಿಕೊಟ್ಟರು. ವಕೀಲರಾದ ಹುಲುಗಪ್ಪ, ಮಹಾಲಿಂಗಪ್ಪ, ಹಾಲೇಶ್ ಮತ್ತಿತರರು ಇದ್ದರು. ಎ.ಚಂದ್ರಶೇಖರ್ ನಿರ್ವಹಿಸಿದರು.