ಬೆಂಗಳೂರು
2020-2021 ರ ವೇಳೆಗೆ ಬೆಳಕಿಗೆ ಬಂದ ಬಿಟ್ ಜಾಯಿನ್.. ಎಂಬ ಪದ ರಾಜಕೀಯ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಇದೀಗ ತನಿಖೆ ಎಲ್ಲರನ್ನು ಬೆಚ್ಚಿ ಬೀಳಿಸುವ ಸಾಧ್ಯತೆಗಳಿವೆ.
ಲಕ್ಷ ಕೋಟಿಯಲ್ಲ.. ಅದಕ್ಕೂ ಮೀರಿದ ಹಣ ವ್ಯವಹಾರದ ದಂಧೆಯೊAದು ಡಿಜಿಟಲ್ ಒಳಗೆ ಹೊಕ್ಕಿದೆ ಎಂಬುದನ್ನ ಕಂಡು ಅಧಿಕಾರಿಗಳೇ ದಂಗಾಗಿ ಹೋಗಿದ್ದರು. ಹ್ಯಾಕರ್ ಶ್ರೀ ಕೃಷ್ಣನನ್ನ ವಶಕ್ಕೆ ಪಡೆದ ಅಧಿಕಾರಿಗಳಿಗೆ ಆತನನ್ನು ಯಾವ ರೀತಿ ಪ್ರಶ್ನೆ ಮಾಡುವುದು ಎಂಬುದೇ ಯಕ್ಷ ಪ್ರಶ್ನೆಯಾಗಿತ್ತು. ಸರ್ಕಾರದ ಚೌಕಟ್ಟು ಮೀರಿ ಗುಪ್ತಲೋಕವೊಂದರ ವ್ಯವಹಾರದ ದಾಖಲೆ ಕಂಡು ದಂಗಾಗಿ ಬಿಟ್ಟಿದ್ದರು. ಯಾವ ಮಾಹಿತಿಯೂ ಸರಿಯಾಗಿ ಪಡೆಯಲಾಗದೇ ಚಾರ್ಜ್ ಶೀಟ್ ಹಾಕಿ ಪ್ರಕರಣವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಮರು ತನಿಖೆಗೆ ಆದೇಶ ಕೊಟ್ಟ ಬೆನ್ನಲ್ಲೇ ಘಟಾನುಘಟಿಗಳಿಗೆ ಪುಕಪುಕ ಶುರುವಾಗಿದೆ.
ಹ್ಯಾಕರ್ ಶ್ರೀ ಕೃಷ್ಣನನ್ನು ವಶಕ್ಕೆ ಪಡೆದಿದ್ದ ಸಿಸಿಬಿಗೆ ಆತನ ಐಷಾರಾಮಿ ಬದುಕಿನ ದಾಖಲೆ ಸಿಕ್ಕಿದ್ವು. ಐಷಾರಾಮಿ ಹೋಟೆಲ್ ನಲ್ಲೇ ತಂಗುವುದು, ಭಿನ್ನ ವಿಭಿನ್ನ ಹೋಟಲ್ ನಲ್ಲಿ ಊಟ, ಮಸಾಜ್ ಸೇರಿದಂತೆ ಮೂರು ವರ್ಷಕ್ಕೆ ಬರೋಬ್ಬರಿ 7 ಕೋಟಿ ರೂಪಾಯಿ ವೆಚ್ಚ ಮಾಡಿದ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದ ಅಧಿಕಾರಿಗಳಿಗೆ ನಿಜಕ್ಕೂ ಶಾಕ್ ಆಗಿತ್ತು.. ತನಿಖೆ ವೇಳೆ ಈತನ ಖಾತೆಗೆ ತಿಂಗಳಿಗೆ ಇಂತಿಷ್ಟು ಹಣ ಬಂದು ಬೀಳುತ್ತಿದ್ದ ವಿಷಯ ಪತ್ತೆಯಾದ್ರೂ ಅದನ್ನ ಯಾರು ಹಾಕ್ತಿದ್ದಾರೆ ಎಂಬ ವಿಚಾರ ಮಾತ್ರ ಬೆಳಕಿಗೆ ಬಂದಿರಲಿಲ್ಲ. ಇದೀಗ ಅದರ ಜಾಡು ಹಿಡಿದು ಎಸ್ ಐಟಿ ಹೊರಟಿದ್ದು, ಘಟಾನುಘಟಿಗಳಿಗೆ ನಡುಕ ಶುರುವಿಟ್ಟಿದೆ.
ಬಿಟ್ ಕಾಯಿನ್ ಒಂದು ಗಂಭೀರ ಪ್ರಕರಣವಾಗಿದ್ದು, ಸರ್ಕಾರದ ಹಣ ಲೂಟಿ ಮಾಡಿದ್ರೂ ಅದು ಪೂರ್ಣ ಪ್ರಮಾಣದ ಹಣ ವಾಪಸ್ ಕೂಡ ಆಗಿಲ್ಲದ ಕಾರಣ ಎಸ್ ಐಟಿ ತಂಡ ಚುರುಕಿನ ತನಿಖೆಗೆ ಮುಂದಾಗಿದೆ. ಜೊತೆಗೆ ಶ್ರೀ ಕೃಷ್ಣನ ಲೀಲೆ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿಯ ಜಾಡಿನ ಹಿಂದೆ ಬಿದ್ದಿದೆ. ಬಿಟ್ ಕಾಯಿನ್ ಬಿಲದಲ್ಲಿ ಅದೆಷ್ಟು ತಿಮಿಂಗಲಗಳು ಸಿಗುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ