ಹಂದ್ವಾರ ಎನ್ ಕೌಂಟರ್ : ಇಬ್ಬರು ಉಗ್ರರ ಹತ್ಯೆ!

ಕಾಶ್ಮೀರ:

      ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.

      ಹಂದ್ವಾರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಕ್ತಾಯವಾಗಿದ್ದು, ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿದೆ. ಶುಕ್ರವಾರದಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ನ ಮೂವರು ಯೋಧರು ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಹುತಾತ್ಮರಾಗಿದ್ದಾರೆ.

      ಈ ಬಗ್ಗೆ ಮಾತನಾಡಿದ ಕಾಶ್ಮೀರದ ಐಜಿಪಿ ಎಸ್.ಪಿ.ಪನಿ ಅವರು, ಕಾರ್ಯಾಚರಣೆ ಬಹುತೇಕ ಮುಗಿದಿದೆ. ಕೊನೆಯ ಹಂತದ ಹುಡುಕಾಟ ಚಾಲ್ತಿಯಲ್ಲಿದೆ. ಹತರಾದ ಇಬ್ಬರು ಉಗ್ರರ ದೇಹಗಳನ್ನು ಗುರುತಿಸಲಾಗಿದೆ. ಇಲ್ಲಿ ನಡೆದ ಘಟನೆಯಲ್ಲಿ ಸಿಆರ್‌ಪಿಎಫ್‌ನ ಮೂವರು ಯೋಧರು ಹಾಗೂ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.

      ಕಠಿಣ ಭೂಪ್ರದೇಶ ಮತ್ತು ಜನ ಸಂಖ್ಯಾ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ತಡವಾಯಿತು ಎಂದರು. ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಅವಿತಿದ್ದ ಉಗ್ರರನ್ನು ಕೊಲ್ಲಲು ಸುಮಾರು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap