ಹೊಸಪೇಟೆ :
ಇಲ್ಲಿನ ಸಹಕಾರಿ ಗೃಹ ನಿರ್ಮಾಣ ಮೈದಾನದಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಹೊಸಪೇಟೆ ಪತಂಜಲಿ ಯೋಗ ಸಮಿತಿಯ ದಶಮಾನೋತ್ಸವ ಸಮಾರಂಭದ ನಿಮಿತ್ತ ಬೃಹತ್ ವಿರಾಟ ಯೋಗ ಶಿಬಿರ ನಡೆಯಿತು.ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್, ಮಹಿಳಾ ಪತಂಜಲಿ ಯೋಗ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಯೋಗ ಶಿಬಿರವು ಬೆಳಿಗ್ಗೆ 5.30ಕ್ಕೆ ಪ್ರಾರಂಭವಾಗಿ 7ಗಂಟೆಯ ವರೆಗೆ ನಡೆಯಿತು.
ಶಿಬಿರವನ್ನು ಹಂಸಾಂಬ ಶಾರದಾಶ್ರಮದ ಮಠದ ಪ್ರಭೋದಾಬಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪತಂಜಲಿ ಯೋಗ ಸಮಿತಿಯ ದಶಮಾನೋತ್ಸವ ಸಮಾರಂಭವು ಶತಮಾನೋತ್ಸವ ಸಮಾರಂಭವಾಗಿ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಹೀಗಾಗಿ ನಾವು ಸ್ವಲ್ಪ ಯೋಗ ಕಡೆ ಗಮನ ಹರಿಸಿದರೆ ಒತ್ತಡವನ್ನು ನಿವಾರಿಸುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ತಿಳಿಸಿದರು.
ಯೋಗ ಶಿಬಿರದಲ್ಲಿ ಸುಮಾರು 800 ಜನ ಭಾಗವಹಿಸಿದ್ದರು.
ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ರಾಜ್ಯ ಮಹಿಳಾ ಪ್ರಭಾರಿ ದ್ರಾಕ್ಷಾಯಣಮ್ಮ, ರಾಜ್ಯ ಯುವ ಪ್ರಭಾರಿ ಕಿರಣಕುಮಾರ್, ಪತಂಜಲಿ ಕಿಸಾನ್ ಸೇವಾ ಸಮಿತಿ ಕೃಷ್ಣನಾಯಕ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ