ನಗರದ ನೀರಿನ ಘಟಕಗಳ ಅಕ್ರಮ ಬಗ್ಗೆ ದೂರು: ಕ್ರಮಕ್ಕೆ ಪಾಲಿಕೆ ಆಯುಕ್ತರಿಗೆ ಸಿ.ಎಂ. ಸೂಚನೆ

ತುಮಕೂರು:

      ತುಮಕೂರು ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿನ ಅಕ್ರಮಗಳ ಬಗ್ಗೆ ನಗರದ ಮಾಹಿತಿ ಹಕ್ಕು ಕಾರ್ಯಕರ್ತ ಆರ್.ವಿಶ್ವನಾಥನ್ (ಸರಸ್) ಸಲ್ಲಿಸಿದ್ದ ದೂರಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳ ಸಚಿವಾಲಯವು ‘‘ಈ ಬಗ್ಗೆ ಕ್ರಮ ಕೈಗೊಳ್ಳುವಂತೆ’’ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದೆ.

      ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಅರುಣ್ ುರ್ಟಾಡೋ ಅವರು ವಿಶ್ವನಾಥನ್ ಸಲ್ಲಿಸಿದ್ದ ದೂರನ್ನು ಪಾಲಿಕೆ ಆಯುಕ್ತರಿಗೆ ರವಾನಿಸುತ್ತ ‘‘ಸೂಕ್ರ ಕ್ರಮ ತೆಗೆದುಕೊಳ್ಳುವಂತೆ’’ ಪತ್ರ (ಸಂಖ್ಯೆ ಸಿಎಂ/41042 ಆರ್.ಇ.ಪಿ-ಜಿಇಎನ್/ ದಿನಾಂಕ 07-08-2018) ಬರೆದಿದ್ದಾರೆ.

ಮನವಿಪತ್ರದ ವಿವರ:

      ತುಮಕೂರು ನಗರದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿರುವ ಅವ್ಯವಸ್ಥೆ, ಅಕ್ರಮಗಳನ್ನು ತಡೆಗಟ್ಟಿ, ಎಲ್ಲ ಘಟಕಗಳನ್ನು ನಿಯಂತ್ರಣಕ್ಕೊಳಪಡಿಸುವ ಬಗ್ಗೆ ವಿಶ್ವನಾಥನ್ ಅವರು ಸಲ್ಲಿಸಿದ್ದ ಮನವಿಯ ವಿವರ ಹೀಗಿದೆ:-
      ‘‘ತುಮಕೂರು ನಗರದಲ್ಲಿ -ಲಭ್ಯ ಮಾಹಿತಿ ಪ್ರಕಾರ- ಸಾರ್ವಜನಿಕ ಉಪಯೋಗಕ್ಕಾಗಿ ಒಟ್ಟು 23 ಶುದ್ಧ ಕುಡಿಯುವ ನೀರಿನ ಘಟಕಗಳಿವೆೆ. ಇವುಗಳಲ್ಲಿ 15 ಘಟಕಗಳು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದಾಗಿವೆ. 6 ಘಟಕಗಳು ಡಾಕ್ಟರ್ ವಾಟರ್ ಎಂಬ ಖಾಸಗಿ ಸಂಸ್ಥೆಗೆ ಸೇರಿವೆ. ಒಂದು ಘಟಕವು ‘ರ್ಮಸ್ಥಳ ಸಂಸ್ಥೆಗೆ ಸೇರಿದ್ದು, ಇನ್ನೊಂದು ಘಟಕವು ತುಮಕೂರು ಮಹಾನಗರ ಪಾಲಿಕೆಯದ್ದಾಗಿದೆ. ಈ ಎಲ್ಲ ಘಟಕಗಳಿಗೆ ತುಮಕೂರು ಮಹಾನಗರ ಪಾಲಿಕೆಯಿಂದ ಉಚಿತ ಸ್ಥಳಾವಕಾಶ ಮತ್ತು ಉಚಿತ ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಈ ಮುಖ್ಯ ಕಾರಣದಿಂದ ಸದರಿ ಘಟಕಗಳಲ್ಲಿ ಅತಿ ಕಡಿಮೆ ದರಕ್ಕೆ ಶುದ್ಧ ನೀರು ಸಾರ್ವಜನಿಕರಿಗೆ ದೊರೆಯುವುದೆಂಬ ಆಶಯ ಹೊಂದಲಾಗಿದೆ.’’

      ‘‘ಈ ಘಟಕಗಳ ಪೈಕಿ ಸರ್ಕಾರಿ ಸ್ವಾಮ್ಯದ ನೀರು ಸರಬರಾಜು ಮಂಡಲಿಯ ಘಟಕಗಳಲ್ಲಿ ಹೇಳುವವರು- ಕೇಳುವವರು ಇಲ್ಲದಂತಹ ಸ್ಥಿತಿ ತಲೆಯೆತ್ತಿದೆ. 1)ಕೇವಲ 2 ರೂ.ಗೆ 20 ಲೀಟರ್ ಶುದ್ಧ ನೀರು ಕೊಡಬೇಕೆಂಬ ನಿಯಮವೇ ಇದೆ. ಆದರೆ ಒಂದೊಂದು ಕಡೆ ಒಂದೊಂದು ದರವನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ. 2)ಪ್ರತಿ ಘಟಕದಲ್ಲಿ ಪ್ರತಿನಿತ್ಯ ಎಷ್ಟು ಲೀಟರ್ ನೀರು ವಿತರಣೆ ಆಗುತ್ತಿದೆಯೆಂಬುದು ಮತ್ತು ಸಂಗ್ರಹಗೊಳ್ಳುವ ಹಣ ದಿನವೂ ಯಾರ ಕೈಸೇರುತ್ತಿದೆ ಎಂಬುದು ನಿಗೂಢವಾಗಿದೆ. 3)ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಯಾರು? ಇವರನ್ನು ಯಾರು ನೇಮಿಸಿದ್ದಾರೆ? ಎಂಬುದು ಗೊತ್ತಿಲ್ಲ. 4) ಇವರಿಗೆ ನೀಡುವ ಮಾಸಿಕ ವೇತನ ಎಷ್ಟು? ಯಾರು ವೇತನ ಕೊಡುತ್ತಿದ್ದಾರೆ? ಮಾಸಿಕ ಉಳಿದ ಹಣವೆಷ್ಟು? ಅದು ಎಲ್ಲಿ ಹೋಗುತ್ತಿದೆ? ಎಂಬ ವಿವರವೇ ಇಲ್ಲ. 5)ಪ್ರತಿ ತಿಂಗಳೂ ವಿದ್ಯುತ್ ಬಿಲ್ ಎಷ್ಟು ಬರುತ್ತಿದೆ? ಯಾರು ಅದನ್ನು ಪಾವತಿಸುತ್ತಿದ್ದಾರೆ? ಎಂಬ ಮಾಹಿತಿ ಇಲ್ಲ. 6) ಯಾವುದೇ ಘಟಕದಲ್ಲೂ ಘಟಕದ ಬಗ್ಗೆ ಮತ್ತು ನೀರಿನ ದರದ ಬಗ್ಗೆ ಸೂಕ್ತ ನಾಮಲಕವೇ ಇಲ್ಲ. 7) ಈ ಘಟಕಗಳನ್ನು ಯಾರು ಮೇಲ್ವಿಚಾರಣೆ ಮಾಡುತ್ತಿದ್ದಾರೆ? ಇಲ್ಲಿನ ಯಂತ್ರೋಪಕರಣಗಳನ್ನು ಹಾಗೂ ನೀರಿನ ಶುದ್ಧತೆಯನ್ನು ನಿಯಮಿತವಾಗಿ ಯಾರು ಪರಿಶೀಲಿಸುತ್ತಿದ್ದಾರೆ? ಎಂಬುದೆಲ್ಲ ಗೌಪ್ಯವಾಗಿದೆ. ಒಟ್ಟಾರೆ ಮಂಡಲಿಯ ಈ ಘಟಕಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿವೆ. ಪ್ರತಿ ಘಟಕದಲ್ಲೂ ಪ್ರತಿನಿತ್ಯ ಸಾವಿರಾರು ಲೀಟರ್ ಶುದ್ಧ ನೀರು ವಿತರಣೆಯಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ರೂಗಳು ಸಂಗ್ರಹವಾಗುತ್ತಿದ್ದು, ಈ ಬಗ್ಗೆ ಯಾವುದೇ ಪಾರದರ್ಶಕತೆ ಇಲ್ಲದಿರುವುದರಿಂದ, ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಗುಮಾನಿ ಸಾರ್ವಜನಿಕರಲ್ಲಿ ಉಂಟಾಗುತ್ತಿದೆ.’’

      ‘‘ಇನ್ನು ಖಾಸಗಿ ವಲಯದ ಡಾಕ್ಟರ್ ವಾಟರ್ನಲ್ಲಿ 8 ರೂ.ಗಳಿಗೆ 20 ಲೀಟರ್ ನೀರು ಕೊಡಬೇಕೆಂಬ ಷರತ್ತನ್ನು ಮಹಾನಗರ ಪಾಲಿಕೆ ವಿಧಿಸಿದೆ. ಆದರೆ ಅಲ್ಲಿ ಸಹ ದರದಲ್ಲಿ ಏರಿಕೆ ಆಗುತ್ತಿರುವುದು ಕಂಡುಬರುತ್ತಿದೆ. ಆದಕಾರಣ ಈ ಎಲ್ಲ ಅವ್ಯವಸ್ಥೆಗಳನ್ನು, ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮತ್ತು ತುಮಕೂರು ನಗರದಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಯಾವುದಾದರೊಂದು ಇಲಾಖೆಯ ಅಧಿಕಾರಿಯ ನಿಯಂತ್ರಣಕ್ಕೆ ಒಳಪಡಿಸಬೇಕು’’ ಎಂದು ಆರ್.ವಿಶ್ವನಾಥನ್ ಮನವಿಪತ್ರದಲ್ಲಿ ವಿವರಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap