ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿರಾ ವಕೀಲರ ಪ್ರತಿಭಟನೆ

0
12

ಶಿರಾ

     ಭಾರತೀಯ ವಕೀಲರ ಪರಿಷತ್ ವತಿಯಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕು ವಕೀಲರ ಸಂಘದಿಂದ ಮಂಗಳವಾರ ಒಂದು ದಿನದ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

     ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಹೊರಟ ವಕೀಲರು ತಹಸೀಲ್ದಾರ್ ಕಚೇರಿಗೆ ತೆರಳಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಸಂಘದ ಅಧ್ಯಕ್ಷ ಸಿ.ಹೆಚ್.ಜಗದೀಶ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವಕೀಲರಿಗೆ ರಕ್ಷಣೆಯ ಅಗತ್ಯವಿದ್ದು ರಾಷ್ಟ್ರಮಟ್ಟದಲ್ಲಿ ಜಾರಿಗೆ ಬರುವಂತೆ ವಕೀಲರ ರಕ್ಷಣಾ ಕಾಯಿದೆಯನ್ನು ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿದರು.

       ಕರ್ನಾಟಕ ರಾಜ್ಯ ಸರ್ಕಾರವು ಈ ಸಾಲಿನ ಬಜೆಟ್‍ನಲ್ಲಿ ವಕೀಲರ ಸಮುದಾಯವನ್ನು ಕಡೆಗಣಿಸಿದ್ದು ವಕೀಲರಿಗಾದ ಈ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಜಗದೀಶ್ ಒತ್ತಾಯಿಸಿದರು. ಗ್ರೇಡ್-2 ತಹಸೀಲ್ದಾರ್ ಕಮಲಮ್ಮನವರಿಗೆ ದಂಡಾಧಿಕಾರಿಗಳ ಕಚೇರಿಯ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಯಿತು.

      ಸಂಘದ ಉಪಾಧ್ಯಕ್ಷ ಎಸ್.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಣ್ಣ ಕರೇಗೌಡ, ಜೆಂಟಿ ಕಾರ್ಯದರ್ಶಿ ಜಿ.ಹೆಚ್.ಸಣ್ಣೀರಪ್ಪ, ಖಜಾಂಚಿ ದೊಡ್ಡಕಾಮಣ್ಣ, ಹಿರಿಯ ವಕೀಲರಾದ ವಾಜಿದ್ ಅಹಮದ್, ಅಚ್ಯುತರಾವ್, ಜವನಯ್ಯ, ಸರ್ವೇಶ್, ಮಂಜುನಾಥ್ ಸಿ, ರಾಘವೇಂದ್ರ, ರಮೇಶ್, ಎಂ.ಎಸ್.ಜಗದೀಶ್, ನಾಗರಾಜು, ಈರಣ್ಣ, ವೀರಣ್ಣ, ಉಮೇಶ್, ಸಿದ್ಧರಾಜು, ಪುರುಷೋತ್ತಮ್, ಮಂಜುನಾಥಯ್ಯ, ಕಂಬದರಂಗಪ್ಪ ಮುಂತಾದ ವಕೀಲರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here