ಹಿರಿಯೂರು :
ಹಿರಿಯೂರಿನ ಶಂಕರ್ ಸ್ಟುಡಿಯೋ ಮಾಲೀಕರಾದ ಹೆಚ್.ಜಿ.ಈಶ್ವರಪ್ಪ (84) ರವರು ಅನಾರೋಗ್ಯದಿಂದ ನಿಧನರಾಗಿರುತ್ತಾರೆ. ಇವರು ಹಿರಿಯೂರಿನಲ್ಲಿ ಹಿರಿಯ ಛಾಯಾಗ್ರಾಹಕರಾಗಿದ್ದರು. ಪತ್ನಿ ಹಾಗೂ ಐದು ಜನ ಪುತ್ರಿಯರು ಒಬ್ಬ ಮಗ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ 17ರ ಸೋಮವಾರ ಮದ್ಯಾಹ್ನ 3 ಗಂಟೆಗೆ ಚಳ್ಳಕೆರೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಇವರು ಪದ್ಮಶಾಲಿ ಸಮಾಜದ ಗೌರವ ಅಧ್ಯಕ್ಷರು ನೇಕಾರ ಒಕ್ಕೂಟ ವೇದಾಂತ ವಿಜ್ಞಾನ ಪರಿಷತ್‍ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಹಿರಿಯೂರು ಛಾಯಾಗ್ರಾಹಕರ ಸಂಘದ ವತಿಯಿಂದ ಸಂತಾಪ ವ್ಯಕ್ತಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
