ನಗರಸಭೆಯ ಆಡಳಿತ ಚುಕ್ಕಾಣೆಯ ಬಿಜೆಪಿ ಪಕ್ಷ ಹಿಡಿಯಲಿದೆ:ನೆಹರೂ ಓಲೇಕಾರ

ಹಾವೇರಿ :

           ಶಾಸಕ ನೆಹರೂ ಓಲೇಕಾರ ನಗರಸಭೆ ಆಡಳಿತ ಕಛೇರಿಯ 31 ನೇ ನಾರ್ಡಿನಲ್ಲಿ ಸದರಿ ಸಾಲಿನಲ್ಲಿ ನಿಂತು ತಮ್ಮ ಪತ ಚಲಾಯಿಸಿದರು. ಈ ಸಂದರ್ಭದಲ್ಲಿ ಸುದ್ಧಿಗಾರೊಂದಿಗೆ ಮಾತನಾಡಿದ ಅವರು ನಗರಸಭೆಯ 31 ವಾರ್ಡಗಳಲ್ಲಿಯೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಎಲ್ಲ ವಾರ್ಡಗಳ ಚುನಾವಣೆಯ ಮಾಹಿತಿ ಪಡೆದುಕೊಂಡಿದ್ದೇನೆ. ನಗರದ ಮತದಾರರು ಬಿಜೆಪಿ ಪಕ್ಷದ ಕಡೆ ಒಲವು ತೊರುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೇಸ್ ಪಕ್ಷ ನಗರಸಭೆ ಆಡಳಿತದ ಚುಕ್ಕಾಣೆ ಹಿಡಿದು ಅವರ ಆಡಳಿತದ ವೈಖರಿಯನ್ನು ನೋಡಿ ಬೇಸತ್ತು ಹೋಗಿದ್ದಾರೆ. ನಗರದ ಸರ್ವಾಂಗಿಣ ಅಭಿವೃದ್ಧಿಗಾಗಿ ಜನತೆ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ. ರಾಜಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ನಾಯಕತ್ವವನ್ನು ಜನರು ಮೆಚ್ಚಿದ್ದಾರೆ. ಕೇಂದ್ರ ಸರ್ಕಾರ ಯೋಜನೆಗಳು ಜನರಿಗೆ ಅನುಕೂಲಕರವಾಗಿವೆ. ಹಾಗಾಗಿ ನಗರದ ಜನತೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸುವ ವಾತಾವರಣವಿದೆ. ನಗರಸಭೆಯ ಆಡಳಿತ ಚುಕ್ಕಾಣೆಯ ಬಿಜೆಪಿ ಪಕ್ಷ ಹಿಡಿಯಲಿದೆ. ಪಕ್ಷದ ಅಭ್ಯರ್ಥಿಗಳ ಪರ ಶ್ರಮವಹಿಸಿ ದುಡಿದ ಮುಖಂಡರಿಗೂ ಹಾಗೂಕಾರ್ಯಕರ್ತರಿಗೂ ಶಾಸಕ ನೆಹರೂ ಓಲೇಕಾರ ಕೃತಜ್ಞತೆ ಸಲ್ಲಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link