ನಗರಸಭೆ ಚುನಾವಣೆಯ ಮತದಾನ ಬಹುತೇಕ ಶಾಂತ

ಚಳ್ಳಕೆರೆ

              ನಗರಸಭೆಯ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ನಗರದ ಕೆಲವೊಂದು ವಾರ್ಡ್‍ಗಳಲ್ಲಿ ಮಾತ್ರ ಅತಿ ಉತ್ಸಾಹದಿಂದ ಮತದಾರರು ಮತದಾನ ಮಾಡಿದ್ದು, ಇನ್ನೂ ಕೆಲವು ವಾರ್ಡ್‍ಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದ್ದು, ಫಲಿತಾಂಶದ ಮೇಲೆ ಯಾವ ಪರಿಣಮ ಬೀರುತ್ತದೆ ಎಂಬುವುದುನ್ನು ಕಾದು ನೋಡಬೇಕಿದೆ.
               ನಗರದಲ್ಲಿ ಇಂದು ನಡೆದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಲು ಜಿಲ್ಲಾ ಚುನಾವಣಾ ವೀಕ್ಷಕರಾದ ಶಿವಯ್ಯ, ನೋಡಲ್ ಅಧಿಕಾರಿ ಎ.ಆನಂದ, ಉಪವಿಭಾಗಾಧಿಕಾರಿ ವಿಜಯಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಲಕ್ಷ್ಮಣ್ ವರಸಿದ್ದಿ ಮುಂತಾದವರು ಆಗಮಿಸಿದ್ದರು.
               ನಗರದ 31 ವಾರ್ಡ್‍ಗಳ ಪೈಕಿ ವಾರ್ಡ್ 19ರಲ್ಲಿ ಕವಿತಾ ಎಂಬ ಮಹಿಳೆ ಅವಿರೋಧ ಆಯ್ಕೆಯಾಗಿದ್ದು ಉಳಿದಂತೆ 30 ವಾರ್ಡ್‍ಗಳಲ್ಲಿ ಚುನಾವಣೆ ನಡೆದಿದೆ. ಈ ಬಾರಿಯ ಮತದಾನದ ಶೇ. 77.40 ಎನ್ನಲಾಗಿದೆ. ಇದು ಕಳೆದ ಬಾರಿಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ. ನಗರಸಭೆಯ 31 ವಾರ್ಡ್‍ಗಳ ಪೈಕಿ ವಾರ್ಡ್ ಸಂಖ್ಯೆ 7ರ ಚಿತ್ರಯ್ಯನಹಟ್ಟಿಯಲ್ಲಿ ಮತಗಟ್ಟೆ ಸಂಖ್ಯೆ 11ರಲ್ಲಿ ಶೇ.91.36 ಮತದಾನವಾಗಿದ್ದು, ಇದು ಅತಿ ಹೆಚ್ಚು ಮತದಾನವಾದ ಕೇಂದ್ರವಾಗಿದೆ. ಈ ವಾರ್ಡ್‍ನಲ್ಲಿ ಒಟ್ಟು 1053 ಮತದಾರರಿದ್ದು, 962 ಮತದಾನವಾಗಿದೆ. ಅತಿ ಕಡಿಮೆ ಮತದಾನ ವಾರ್ಡ್ 10 ವಾಲ್ಮೀಕಿ ನಗರದ ಹೊಸಬೇಡರಹಟ್ಟಿ ವ್ಯಾಪ್ತಿಯಲ್ಲಿ ನಡೆದಿದ್ದು, ಮತಗಟ್ಟೆ ಸಂಖ್ಯೆ 15ರಲ್ಲಿ ಶೇ.51 ಮತದಾನವಾಗಿದ್ದು, ಇದು ಅತಿ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ. ಇಲ್ಲಿ ಇಟ್ಟು 751 ಮತಗಳಿದ್ದು, 383 ಮತದಾರರು ಮಾತ್ರ ಮತಚಲಾಯಿಸಿದ್ದಾರೆ. 

               ನಗರದ 1ನೇ ವಾರ್ಡ್‍ನ ಮೈರಾಡ ಕಾಲೋನಿ ಮತ್ತು ಕಾಟಪ್ಪನಹಟ್ಟಿ ವ್ಯಾಪ್ತಿಯಲ್ಲಿ ಒಟ್ಟು 1811 ಮತದಾರರಿದ್ದು, 1525 ಮತದಾರರು ತಮ್ಮ ಮತ ಚಲಾಯಿಸಿದ್ಧಾರೆ. ವಾರ್ಡ್ 2 ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ, ಬೋವಿ ಕಾಲೋನಿಯಲ್ಲಿ 1864 ಮತದಾರರಿದ್ದು, 1583 ಮತದಾರರು ಮತ ಚಲಾಯಿಸಿದ್ದಾರೆ. ವಾರ್ಡ್ 3ರ ಪಾದಗಟ್ಟೆ ಮತ್ತು ಹಳೇಟೌನ್ ವ್ಯಾಪ್ತಿಯಲ್ಲಿ 1076 ಮತದಾರರಿದ್ದು 919 ಮತದಾರರು ತಮ್ಮ ಮತ ಚಲಾಯಿಸಿದ್ಧಾರೆ. ವಾರ್ಡ್ 4 ಹಳೇಟೌನ್ ಹಾಗೂ ತೇರು ಬೀದಿ ವ್ಯಾಪ್ತಿಯಲ್ಲಿ 1725 ಮತದಾರರಿದ್ದು, 1363 ಜನ ಮತಚಲಾಯಿಸಿದ್ದಾರೆ. ವಾರ್ಡ್ 5 ವೆಂಕಟೇಶ್ವರ ನಗರ, ಸುಧಾಕರ ನಗರ ವ್ಯಾಪ್ತಿಯಲ್ಲಿ 1912 ಮತದಾರರಿದ್ದು, 1502 ಮತದಾರರು ತಮ್ಮ ಮತ ಚಲಾಯಿಸಿದ್ಧಾರೆ. ವಾರ್ಡ್ 6 ಚಿತ್ರಯ್ಯನಹಟ್ಟಿಯಲ್ಲಿ 1006 ಮತದಾರರಿದ್ದು 890 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 7 ಚಿತ್ರಯ್ಯನಹಟ್ಟಿಯಲ್ಲಿ 1053 ಮತದಾರರಿದ್ದು 962 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 8 ಶಾಂತಿ ನಗರ ರಹೀಂನಗರ ವ್ಯಾಪ್ತಿಯಲ್ಲಿ 2586 ಮತದಾರರಿದ್ದು, 1954 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 9 ಆಸರ್ ಮೊಹಲ್ಲಾ, ಉಡಿಸಲಮ್ಮ ಬಿಕೆಟಿ ಮೀಲ್ ಕಾಂಪೌಂಡ್ ವ್ಯಾಪ್ತಿಯಲ್ಲಿ 1207 ಮತದಾರರಿದ್ದು, 1012 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 10 ವಾಲ್ಮೀಕಿ ನಗರ ಮತ್ತು ಹೊಸಬೇಡರಹಟ್ಟಿ 1868 ಮತದಾರರಿದ್ದು, 1033 ಮತದಾರರು ತಮ್ಮ ಚಲಾಯಿಸಿದ್ದಾರೆ.

                 ವಾರ್ಡ್ 11ರಲ್ಲಿ 1442 ಮತದಾರರಿದ್ದು, 1048 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 12ರಲ್ಲಿ 974 ಮತದಾರರಿದ್ದು, 652 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 13ರಲ್ಲಿ 1125 ಮತದಾರರಿದ್ದು 773 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 14ರಲ್ಲಿ 1068 ಮತದಾರರಿದ್ದು, 872 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 15ರಲ್ಲಿ 798 ಮತದಾರರಿದ್ದು, 668 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 16ರಲ್ಲಿ ಗುಮಸ್ತರ ಬೀದಿ, ಅಂಬೇಡ್ಕರ್‍ನಗರ, ಜನತಾಕಾಲೋನಿ ವ್ಯಾಪ್ತಿಯಲ್ಲಿ 2361 ಮತದಾರರಿದ್ದು, 2059 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 17 ಜನತಾ ಕಾಲೋನಿ,ಅ ಂಬೇಡ್ಕರ್ ಭವನ ವ್ಯಾಪ್ತಿಯಲ್ಲಿ 1521 ಮತದಾರರಿದ್ದು, 1153 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 18ರಲ್ಲಿ 1026 ಮತದಾರರಿದ್ದು 906 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 20ರ ಕೊರಚರಹಟ್ಟಿ, ಇಂದಿರಾನಗರ 1014ಮತದಾರರಿದ್ದು, 824 ಮತದಾರರು ತಮ್ಮ ಚಲಾಯಿಸಿದ್ದಾರೆ. 21ರ ಕುಬೇರನಗರ, 1679 ಮತದಾರರಿದ್ದು, 1258 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 22ರಗಾಂಧಿನಗರ 1469 ಮತದಾರರಿದ್ದು, 1020 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 23ರ ಗಾಂಧಿನಗರ 1305 ಮತದಾರರಿದ್ದು, 998 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 24ರ ಹಳೇಟೌನ್ ಹಾಗೂ ಜಗಜೀವನರಾಮ್ ಕಾಲೋನಿ 1467 ಮತದಾರರಿದ್ದು, 1137 ಮತದಾರರು ತಮ್ಮ ಚಲಾಯಿಸಿದ್ದಾರೆ.

                    ವಾರ್ಡ್ 25ರ ಮದಕರಿ ನಗರ 1276 ಮತದಾರರಿದ್ದು, 863 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 26ರ 907 ಮತದಾರರಿದ್ದು, 740 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 27ರ ಮದಕರಿನಗರ, ವಾಸವಿ ಕಾಲೋನಿಯಲ್ಲಿ 1319 ಮತದಾರರಿದ್ದು 1122 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 28ರಲ್ಲಿ 1064 ಮತದಾರರಿದ್ದು, 778 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 29ರ ಅಂಬೇಡ್ಕರ್ ನಗರ, ವಿಠಲನಗರ ವ್ಯಾಪ್ತಿಯಲ್ಲಿ 1004 ಮತದಾರರಿದ್ದು, 789 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 30 ತ್ಯಾಗರಾಜನಗರ ವ್ಯಾಪ್ತಿಯಲ್ಲಿ 1412 ಮತದಾರರಿದ್ದು, 1062 ಮತದಾರರು ತಮ್ಮ ಚಲಾಯಿಸಿದ್ದಾರೆ. ವಾರ್ಡ್ 31ರ ಸೂಜಿಮಲ್ಲೇಶ್ವರ ನಗರ ವ್ಯಾಪ್ತಿಯಲ್ಲಿ 1010 ಮತದಾರರಿದ್ದು 910 ಮತದಾರರು ತಮ್ಮ ಚಲಾಯಿಸಿದ್ದಾರೆ.
ಚಳ್ಳಕೆರೆ ನಗರದ ಒಟ್ಟು 30 ವಾರ್ಡ್‍ಗಳಲ್ಲಿ ಮಾತ್ರ ಚುನಾವಣೆ ನಡೆದಿದ್ದು, 41349 ಮತದಾರರಲ್ಲಿ 32004 ಮತದಾರರು ತಮ್ಮ ಚಲಾಯಿಸಿದ್ದು, ಶೇಕಡವಾರು ಮತದಾನ 77.40 ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ಧಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link