ನಮ್ಮ ಕಣ್ಣುಗಳು ಮಣ್ಣು ಪಾಲಾಗುವ ಮುನ್ನಾ ಕಣ್ಣು ಕಾಣದ ಅಂದರ ಬಾಳಿಗೆ ಬೆಳಕಾಗುವ ಮೂಲಕ ನೇತ್ರದಾನಕ್ಕೆ ಮುಂದಾಗಿ

ಹರಪನಹಳ್ಳಿ,

   ನಮ್ಮ ಕಣ್ಣುಗಳು ಮಣ್ಣು ಪಾಲಾಗುವ ಮುನ್ನಾ ಕಣ್ಣು ಕಾಣದ ಅಂದರ ಬಾಳಿಗೆ ಬೆಳಕಾಗುವ ಮೂಲಕ ನೇತ್ರದಾನಕ್ಕೆ ಮುಂದಾಗಿ ಎಂದು ಸರಕಾರಿ ಆಸ್ಪತ್ರೆಯ ನೇತ್ರತಜ್ಞೆ ಡಾ.ಸಂಗೀತಾ ಕೊಲ್ಲಾಪುರಿ ಹೇಳಿದರು.
ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಶನಿವಾರ 33ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದರು.

   ಕುಟುಂಬದಲ್ಲಿ ತಂದೆ, ತಾಯಿ ಹಾಗೂ ನೇರೆ ಹೊರೆಯವರಿಗೆ ಕಣ್ಣುದಾನ ಮಾಡುವುದರ ಬಗ್ಗೆ ಅದರ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ವ್ಯಕ್ತಿಗೆ ಕಣ್ಣು ಇಲ್ಲದೇ ಹೊದರೆ ಜೀವನನೇ ಇಲ್ಲದಂತಾಗುತ್ತದೆ ಎಂದ ಅವರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹಲವರು ಮರಣಹೊಂದುತ್ತಾರೆ ಅವರೆಲ್ಲ ನೇತ್ರದಾನ ಮಾಡುವುದಿಲ್ಲ ಪ್ರಸ್ತುತ ವರ್ಷಕ್ಕೆ 2.5ಲಕ್ಷ ಕಣ್ಣುಗಳ ಬೇಡಿಕೆಗೆ ಇದೆ ಆದರೆ ಕೇವಲ 35 ಸಾವಿರ ಕಣ್ಣುಗಳು ಮಾತ್ರ ದಾನದಿಂದ ಸಿಗುತ್ತಿದ್ದು ಸಾಲುವುದಿಲ್ಲ, ಆದ್ದರಿಂದ ಕಣ್ಣುಗಳ ದಾನ ಶ್ರೇಷ್ಟವಾಗಿದ್ದು ಪ್ರತಿಯೊಬ್ಬರು ತಮ್ಮ ನೇತ್ರಗಳನ್ನು ದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

  ನಂತರ ಮಕ್ಕಳಿಗೆ ಕಣ್ಣುಗಳಿಂದಾಗಿ ರೋಗ, ತಡೆಗಟ್ಟುವುದು ಕುರಿತು ಪ್ರಾತೀಕ್ಷೆಯನ್ನು ನಡೆಸಿದರು. ದಾನ ಮಾಡಿದ ವ್ಯಕ್ತಿಗಳು ಮೃತಪಟ್ಟ ಕೂಡಲೇ ಕಣ್ಣುಗಳನ್ನು ಸಂರಕ್ಷಣೆ ಮಾಡಿ ವೈದ್ಯರಿಗೆ ದೂರವಾಣಿ ಮೂಲಕ ಪಡೆಯಲು ತಿಳಿಸಬೇಕು ಎಂದ ಅವರು ಕಣ್ಣುಗಳನ್ನು ದಾನ ಮಾಡಲು ಯಾವುದೇ ಜಾತಿ, ಬೇದ, ಲಿಂಗ ಇಲ್ಲ. ಸಣ್ಣ ಮಕ್ಕಳಿಂದ ವಯಸ್ಸಾದವರ ವರೆಗೂ ದಾನ ಮಾಡಬಹುದು ಎಂದರು.
ಕಾಲೇಜಿನ ಉಪಪ್ರಾಚಾರ್ಯ ಕುಬೇಂದ್ರನಾಯ್ಕ ಮಾತನಾಡಿ ಕಣ್ಣುಗಳನ್ನು ಸಂರಕ್ಷಣೆ ಮಾಡಿಕೊಳ್ಳಿ, ಶಾಸ್ವತವಾಗಿ ಅಂದತ್ವದಿಂದ ದೂರವಿರಿ ಈ ನಿಟ್ಟಿನಲ್ಲಿ ತಮ್ಮ ಆರೋಗ್ಯ ಸಂರಕ್ಷಣೆ ಮಾಡಿಕೊಂಡಲ್ಲಿ ಸಾಧನೆಗೆ ಯಾವುದೇ ತೊಡಕು ಆಗದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಸತತವಾಗಿ ಮಾಡಿಕೊಂಡು ಬರಲಾಗುತ್ತಿದ್ದು ವೈದ್ಯರು ಮಕ್ಕಳಿಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದ್ದದು ಎಂದರು.\

  ನಂತರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೇಕ್‍ನ್ನು ಹಿರಿಯ ನಿವೃತ್ತ ಶಿಕ್ಷಕಿ ಸಿದ್ದಮ್ಮ ಕತ್ತರಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಇದೇ ಮಕ್ಕಳಿಗೂ ಸಿಹಿಯನ್ನು ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಸಿದ್ದಮ್ಮ, ಶಿಕ್ಷಕರಾದ ಲತಾ ರಾಥೋಡ, ವಿಜಯಲಕ್ಷ್ಮಿ, ಮಮತಾಜ್, ಪಂಪನಾಯ್ಕ, ವಿನೋದ ಪೂಜಾರ, ಶಿಲ್ಪಾ, ಎಸ್.ಎಂ.ಬಸವರಾಜ, ಚಂದ್ರಮುಖಿ, ಜಯ್ಯಪ್ಪ, ಮೋಹನ್, ಚನ್ನವೀರಸ್ವಾಮಿ ಇತರರು ಇದ್ದರು.

Recent Articles

spot_img

Related Stories

Share via
Copy link