ನಮ್ಮ ಕಾರ್ಯಕರ್ತರು ಏಸಿ ರೂಂ ಅಲ್ಲಿ ರಾಜನೀತಿ ನಡೆಸುವವರಲ್ಲ : ಮೋದಿ

ನವದೆಹಲಿ:

    ಎಸಿ ರೂಮ್ ನಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ ನಮ್ಮ ಕಾರ್ಯಕರ್ತರು. ದೇಶದ ಹಳ್ಳಿ, ಗುಡ್ಡ ಗಾಡುಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವವರು. ದೇಶದ ಸಂಕಲ್ಪ ಸಿದ್ಧಿಗೆ ಹಗಲಿರುಳು ಶ್ರಮಿಸುವ ಸಿಪಾಯಿಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.

    ಕೇಂದ್ರದ ಬಿಜೆಪಿ ಸರ್ಕಾರಕ್ಕೆ 9 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷವು ನಡೆಸುತ್ತಿರುವ ಜನಸಂಪರ್ಕ ಅಭಿಯಾನದ ಅಂಗವಾಗಿ ಮೇರಾ ಬೂತ್, ಸಬ್ಸೆ ಮಜಬೂತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

   ಇದರಂತೆ ಪ್ರಧಾನಿ ಮೋದಿ ಅವರು, ರಾಜ್ಯದ 1918 ಸಂಘಟನಾ ಮಂಡಳಿಗಳು ಮತ್ತು ಬೂತ್‌ಗಳಲ್ಲಿ ಹಾಜರಿರುವ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಕೊಂಡಾಡಿದರು.

    ‘ಬಿಜೆಪಿ ಕಾರ್ಯಕರ್ತರು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ. ದೇಶದ ಹಳ್ಳಿ, ಗುಡ್ಡ ಗಾಡುಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವವರು ಬಿಜೆಪಿಯವರು. ಹೀಗಾದಲ್ಲಿ ಮಾತ್ರ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ’ ಎಂದು ತಿಳಿಸಿದರು.
   ‘ಗ್ರಾಮ ಮಟ್ಟದ ಗೃಹಿಣಿಯರ ಸಮಸ್ಯೆಯನ್ನು ಕಾರ್ಯಕರ್ತರು ತಿಳಿಸಿದ್ದರಿಂದಲೇ ಉಜ್ವಲ ಯೋಜನೆ ನೀತಿರೂಪ ಪಡೆಯಿತು. ಅದು ಇಂದು ಜನಪ್ರಿಯ ಯೋಜನೆಯಲ್ಲಿ ಒಂದಾಗಿದೆ. ಜನರಿಗೆ ಅತಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಅದನ್ನು ಪರಿಹರಿಸುವಲ್ಲಿ ಕಾರ್ಯಕರ್ತರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap