ದಾವಣಗೆರೆ :
ನಗರದ ರೇಣುಕಾ ಮಂದಿರದಲ್ಲಿ ಇಂದು (ಜ.13ರಂದು) ಹಾಗೂ ನಾಳೆ (ಜ.14 ರಂದು) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳದ ಪ್ರಯುಕ್ತ “ನಮ್ಮ ನಡೆ ಸಿರಿ ಧಾನ್ಯದ ಕಡೆ” ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ನಡೆದ ಸಿರಿ ಧಾನ್ಯ ನಡಿಗೆಯ ಜನಜಾಗೃತಿ ಮೂಡಿಸಲಾಯಿತು.
ಇಲ್ಲಿನ ವಿದ್ಯಾನಗರ 2ನೇ ಬಸ್‍ನಿಲ್ದಾಣ ಬಳಿಯ ಶಿವ ಪಾರ್ವತಿ ದೇವಸ್ಥಾನದ ಆರವಣದಿಂದ ಆರಂಭವಾದ ನಡಿಗೆಯು ಕುವೆಂಪು ಕನ್ನಡ ಭವನ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಗುಂಡಿ ವೃತ್ತ, ಲಕ್ಷ್ಮೀ ಫ್ಲೋರ್ ಮಿಲ್ ರಸ್ತೆ ಮುಖಾಂತರ ರಿಂಗ್ ರಸ್ತೆಯಲ್ಲಿರುವ ಕ್ಲಾಕ್ ಟವರ್‍ವರೆಗೂ ನಡೆಯಿತು.
ಕೃಷಿ ಅಧಿಕಾರಿಗಳು, 6 ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು, ಸಂಘ – ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಈ ನಡಿಗೆಯಲ್ಲಿ ಪಾಲ್ಗೊಂಡು ಸಿರಿಧಾನ್ಯಗಳ ಮೇಳದ ಬಗ್ಗೆ ಹಾಗೂ ಸಿರಿಧಾನ್ಯಗಳ ಬಳಸುವಂತೆ ಜನಜಾಗೃತಿ ಮೂಡಿಸಿದರು.
ಈ ನಡಿಗೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಉಪ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಹಂಸವೇಣಿ, ಸ್ಫೂರ್ತಿ, ಕೃಷಿ ಅಧಿಕಾರಿಗಳಾದ ಡಾ.ಟಿ.ಎನ್.ದೇವರಾಜ್, ರೇವಣಸಿದ್ದನಗೌಡ, ತಿಪ್ಪೇಸ್ವಾಮಿ, ಗೋವರ್ಧನ್, ಶಿವಕುಮಾರ್, ರಮೇಶ್‍ನಾಯ್ಕ, ಡಾ.ಬಸವನಗೌಡ, ಡಾ.ಮಲ್ಲಿಕಾರ್ಜುನ್, ಎಸ್.ಬಿ.ರಾಜಶೇಖರಪ್ಪ, ಟಿ.ಸುರೇಶ್, ಶ್ರೀಧರಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ