ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳಲ್ಲಿ ಗೋಲಮಾಲ್

ಬ್ಯಾಡಗಿ:

           ತಾಲೂಕಿನ ಬುಡುಪನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪಂಚಾಯತ್‍ರಾಜ್ ತಾಂತ್ರಿಕ ಉಪವಿಭಾಗ, ಸಾಮಾಜಿಕ ಅರಣ್ಯ ಹಾಗೂ ರೇಷ್ಮೆ ಇಲಾಖೆಯವರು ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳಲ್ಲಿ ಗೋಲಮಾಲ್ ನಡೆಸಿರುವುದು ಕಂಡುಬಂದಿದ್ದು ಇದಕ್ಕೆ ಸಂಬಂಧಿಸಿದಂತೆ 6.48.ಲಕ್ಷ ರೂ ಗಳನ್ನು ಸದರಿ ಇಲಾಖೆಯವರಿಂದ ವಸೂಲಾತಿ ಮಾಡಲು ಕ್ರಮ ವಹಿಸಿದ ಘಟನೆ ಗ್ರಾಮ ಸಭೆಯಲ್ಲಿ ಜರುಗಿದೆ.
            ತಾಲೂಕಿನ ಬುಡುಪನಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜರುಗಿದ ನರೇಗಾ ಯೋಜನೆಯ ಗ್ರಾಮ ಸಭೆಯಲ್ಲಿ ಗ್ರಾ.ಪಂ ಸೇರಿದಂತೆ ವಿವಿಧ ಇಲಾಖೆಯವರು ಕಳೆದ ಆರು ತಿಂಗಳಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋದನೆಯ ತಂಡ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಅನುದಾನ ದುರುಪಯೋಗವಾದ ಬಗ್ಗೆ ಬೆಳಕಿಗೆ ಬಂದಿದೆ ಸದರಿ ಇಲಾಖೆಗಳ ಪೈಕಿ ಪಂಚಾಯತ್‍ರಾಜ್ ತಾಂತ್ರಿಕ ಉಪವಿಭಾಗ ನಡೆಸಿರುವ ಕಾಮಗಾರಿಗಳಲ್ಲಿ ಅಳತೆ ವ್ಯತ್ಯಾಸ, ಎನ್.ಎಂ.ಆರ್ ಇಲ್ಲದಿರುವುದು ಕಂಡುಬಂದಿದ್ದು ಇದಕ್ಕೆ 1.60 ಲಕ್ಷ ರೂ, ಸಾಮಾಜಿಕ ಅರಣ್ಯ ಇಲಾಖೆಯವರು 4 ಕಾಮಾಗಾರಿಗಳಿಗೆ ಕಾಮಗಾರಿ ಆದೇಶ ಪತ್ರ ಇಲ್ಲದೆ ಹಾಗೂ ಬಿಲ್ಲು ಇಲ್ಲದೆ ಇರುವುದು ಕಂಡು ಬಂದಿದ್ದು ಇದಕ್ಕೆ 3.07 ಲಕ್ಷ ರೂ, ರೇಷ್ಮೆ ಇಲಾಖೆಯವರು 4 ಕಾಮಗಾರಿಗಳಲ್ಲಿ ಅಳತೆ ದಾಖಲಿಸದೆ ಇರುವುದು ಕಂಡುಬಂದಿದ್ದು ಇದಕ್ಕೆ 1.70 ಲಕ್ಷ ರೂ, ಹಾಗೂ ತೋಟಗಾರಿಕಾ ಇಲಾಖೆಯವರು ಅನುಷ್ಠಾನಗೊಳಿಸಿದ 10 ಕಾಮಗಾರಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ಪಾವತಿಸಿದ್ದು ಇದಕ್ಕಾಗಿ 9302 ರೂ ಸೇರಿದಂತೆ ಒಟ್ಟಾರೆ 6.48.ಲಕ್ಷ ರೂ ಗಳನ್ನು ಸದರಿ ಇಲಾಖೆಯವರಿಂದ ವಸೂಲಾತಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

              ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕಾ ಸಂಯೋಜಕ ಬಸವರಾಜ ಅಮಾತಿ ಮಾತನಾಡಿ ಕಳೆದ ಆರು ತಿಂಗಳಲ್ಲಿ ಬುಡುಪನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 75 ಕಾಮಗಾರಿಗಳು ಅನುಷ್ಠಾನಗೊಂಡಿದ್ದು ಇದಕ್ಕಾಗಿ 93.23 ಲಕ್ಷ ರೂ ವೆಚ್ಚ ಮಾಡಲಾಗಿದೆ. ಗ್ರಾ.ಪಂ ಸೇರಿದಂತೆ ವಿವಿದ ಇಲಾಖೆಯವರು ಅನುಷ್ಠಾನಗೊಳಿಸಿರುವ ಕೆಲವೊಂದು ಕಾಮಗಾರಿಗಳಲ್ಲಿ ಲೋಪದೋಷಗಳು ಕಂಡುಬಂದಿದ್ದು ಇದಕ್ಕಾಗಿ 22.78 ಲಕ್ಷ ರೂ ಆಕ್ಷೇಪಣೆಯಲ್ಲಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ತಿಳಿಸಿದರು.
                 ಸಭೆಯ ಅಧ್ಯಕ್ಷತೆಯನ್ನು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ: ಗೋಪಿನಾಥ ವಹಿಸಿದ್ದರು ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ದಿಳ್ಳೇಪ್ಪ ಮೇಡ್ಲೆರಿ, ಉಪಾಧ್ಯಕ್ಷೆ ನೀಲವ್ವ ಕಿತ್ತೂರ, ಸದಸ್ಯರಾದ ಮಾಳವ್ವ ಹಾದಿಮನಿ, ಈರಣ್ಣ ಮರಬಸಣ್ಣನವರ, ಪರಶುರಾಮ ಓಲೇಕಾರ, ರೇಣುಕ ಮೋಟೆಬೆನ್ನೂರ, ಪುಟ್ಟವ್ವ ಹರಿಜನ, ಗ್ರಾ.ಪಂ ಅಭಿವೃದ್ದಿ ಅದಿಕಾರಿ ಶಾರದಾ ಕುದರಿ, ಕಾರ್ಯದರ್ಶಿ ಪ್ರಕಾಶ ಹುಣಸಿಕಟ್ಟಿ, ತೋಟಗಾರಿಕ ಇಲಾಖೆಯ ಕೃಷಿ ಅಧಿಕಾರಿ ಎಚ್.ಕೆ. ಹೊಟ್ಟೆಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link