ನವಿಲುಧಾಮಕ್ಕೆ ಆಹಾರ-ನೀರು ವ್ಯವಸ್ಥೆ ಮಾಡಿದ ಜಪಾನಂದಜಿ..!

ಪಾವಗಡ

        ಸ್ವಯಂಸೇವಕರೊಂದಿಗೆ ಜಪಾನಂದ ಸ್ವಾಮಿರವರು ಮಂಗಳವಾರ ಹನುಮನ ಬೆಟ್ಟ ನವಿಲುಧಾಮಕ್ಕೆ ಭೇಟಿ ನೀಡಿ, ಅಲ್ಲಿಯ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳ ನಡುವೆ ಹೊಂದಿಕೊಂಡಿದ್ದ ಕಲ್ಯಾಣಿಯನ್ನು ಶುದ್ಧಿಗೊಳಿಸುವ ಕಾರ್ಯವನ್ನು ಕೈಗೊಂಡರು. ಇನ್ಫೋಸಿಸ್‍ನ ಸಮರ್ಪಣಾ ಸ್ವಯಂಸೇವಕರು ಹಾಗೂ ಆಶ್ರಮದ ಸ್ವಯಂಸೇವಕರೊಂದಿಗೆ ಈ ಮಹತ್ಕಾರ್ಯವನ್ನು ಕೈಗೊಂಡು ಸ್ವಾಮೀಜಿ ಕಲ್ಯಾಣಿಯನ್ನು ಶುದ್ಧಿಗೊಳಿಸಿದರು. ಕಲ್ಯಾಣಿಯ ಕಲ್ಲುಬಂಡೆಗಳು ಮತ್ತು ಮೆಟ್ಟಿಲುಗಳನ್ನು ಸ್ಥಳೀಯರ ಸಹಕಾರದಿಂದ ಪುನರ್‍ಜೋಡಿಸಿ ಕಲ್ಯಾಣಿಗೆ ನೀರನ್ನು ತುಂಬುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

         ನವಿಲುಗಳಿಗೆ ಕಾಡಿನ ಮಧ್ಯಭಾಗದ ಬೆಟ್ಟಗಳ ಮಧ್ಯೆ ಹಾಗೂ ಬಂಡೆಗಳ ಸ್ಥಳಗಳಲ್ಲಿ ಸ್ಥಳೀಯರ ಸಹಾಯದಿಂದ ಜೋಳವನ್ನು ಹಾಗೂ ಮೆಕ್ಕೆ ಜೋಳವನ್ನು ಹರಡಲಾಗಿದೆ. ಒಟ್ಟಿನಲ್ಲಿ ನವಿಲುಧಾಮದ ಸಂರಕ್ಷಣೆಯ ಕಾರ್ಯಕ್ರಮ ಹಂತಹಂತವಾಗಿ ಮುಂದುವರೆಯುತ್ತಿದ್ದು, ಶ್ರೀರಾಮಕೃಷ್ಣ ಸೇವಾಶ್ರಮದ ಒಂದು ಮಹತ್ತರ ಯೋಜನೆಯಾಗಿ ಈ ನವಿಲುಧಾಮ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಪೂಜ್ಯ ಸ್ವಾಮೀಜಿಯವರು ಸ್ವತಃ ಕಲ್ಯಾಣಿಯ ಶುದ್ಧೀಕರಣ ಕೆಲಸದಲ್ಲಿ ಭಾಗಿಯಾಗಿದ್ದುದಲ್ಲದೆ ಎಲ್ಲ ಸ್ವಯಂಸೇವಕರಿಗೆ ಉತ್ತೇಜನ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap