ತುಮಕೂರು :
ಬೋಯಿಂಗ್ 787-8 ಡ್ರೀಮ್‌ಲೈನರ್ ಅತ್ಯಾಧುನಿಕ, ದೀರ್ಘ ಪ್ರಯಾಣಕ್ಕೆ ಉಪಯುಕ್ತವಾದ, ಇಂಧನ ಉಳಿತಾಯಕ್ಕೆ ಹೆಸರುವಾಸಿ ಯಾದ ವಿಮಾನವಾಗಿದೆ. 2009ರಲ್ಲಿ ಇದನ್ನು ಮೊದಲ ಬಾರಿಗೆ ಹಾರಿಸಿ, 2011ರಲ್ಲಿ ಇದರ ಮೊದಲ ವಾಣಿಜ್ಯ ಹಾರಾಟ ಆರಂಭವಾಯಿತು.
ಸುಮಾರು 13530 ಕಿ.ಮೀ. ದೂರ ಕ್ರಮಿಸಬಲ್ಲ 242 ಜನ ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಆಸನ ಹೊಂದಿರುವ ಈ ವಿಮಾನದ ಮುಖ್ಯ ವೈಶಿಷ್ಟ್ಯವೆಂದರೆ ಇದರ ನಿರ್ಮಾಣದಲ್ಲಿ ಅತ್ಯಾಧುನಿಕ ಸಂಯೋಜಿತ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿರುವುದು.
ಈ ವಿಮಾನದಲ್ಲಿ ಸುಮಾರು ಶೇ.50ರಷ್ಟು ಕಾರ್ಬನ್-ಫೈಬರ್ ಕಾಂಪೋಸಿಟ್‌ಗಳು, ಶೇ.20 ರಷ್ಟು ಅಲ್ಯೂಮಿನಿಯಂ, ಶೇ.15ರಷ್ಟು ಟೈಟಾನಿಯಂ, ಶೇ.10ರಷ್ಟು ಉಕ್ಕು ಮತ್ತು ಶೇ.5ರಷ್ಟು ಇತರ ವಸ್ತುಗಳನ್ನು ಬಳಸಲಾಗಿದೆ. ಇದರಿಂದಾಗಿ ವಿಮಾನ ಹೆಚ್ಚು ಹಗುರವಾಗಿದ್ದು, ಇಂಧನದ ಬಳಕೆ ಯನ್ನು ತಗ್ಗಿಸುತ್ತದೆ. ಈ ವಿಮಾನ ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ಪ್ರಯಾಣಿಕ ರಿಗೆ ಒದಗಿಸುವ ಅತ್ಯುತ್ತಮ ಅನುಭವದಿಂದಾಗಿ ‘ಡ್ರೀಮ್‌ಲೈನರ್’ ಎಂಬ ಹೆಸರಿಗೆ ತಕ್ಕಂತಿದೆ.
ಈ ವಿಮಾನವು ಏರ್‌ಲೈನ್‌ಗಳಿಗೆ ಆರ್ಥಿಕ ಲಾಭವನ್ನು ನೀಡುವುದರ ಜತೆಗೆ ಪ್ರಯಾಣಿಕರಿಗೆ ಸೌಕರ್ಯದಾಯಕ ಮತ್ತು ಆನಂದದಾಯಕ ಯಾತ್ರೆಯನ್ನು ಒದಗಿಸುತ್ತದೆ. ಇದು ಪರಿಸರ ಸ್ನೇಹಿ ವಿಮಾನವಾಗಿದ್ದು ವಿಮಾನಯಾನ ಉದ್ಯಮದಲ್ಲಿ ಕಾರ್ಬನ್ ಫೂಟ್‌ಪ್ರಿಂಟ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡ್ರೀಮ್‌ಲೈನರ್‌ನ ಕಿಟಕಿಗಳು ಇತರ ವಿಮಾನಗಳಿಗಿಂತ ಶೇ.30ರಷ್ಟು ದೊಡ್ಡ ದಾಗಿದ್ದು, ಇದು ಪ್ರಾಕೃತಿಕ ಬೆಳಕು ಹೆಚ್ಚು ಒಳಬರುವಂತೆ ಮಾಡುತ್ತದೆ.
ತಮಗೆ ಬೇಕಾದಂತೆ ಕಿಟಕಿಗಳ ಗಾಜಿನ ತೀವ್ರತೆಯನ್ನು ಎಲೆಕ್ಟ್ರೋಕ್ರೋಮಿಕ್ ಡಿಮ್ಮಿಂಗ್ ತಂತ್ರಜ್ಞಾನದಿಂದ ನಿಯಂತ್ರಿಸಬಹುದು. ಇದರಿಂದ ಸಾಂಪ್ರದಾಯಿಕ ಕಿಟಕಿಯ ಶೇಡ್‌ಗಳ ಅಗತ್ಯವಿಲ್ಲ. 787-8ರ ಕ್ಯಾಬಿನ್ ಒತ್ತಡವನ್ನು 6000 ಅಡಿ ಎತ್ತರದ ಒತ್ತಡಕ್ಕೆ ಸಮಾನವಾಗಿರುವಂತೆ ಹೊಂದಿಸಲಾಗಿದೆ .
ಇದರಿಂದ ಪ್ರಯಾಣಿಕರಿಗೆ ಆಮ್ಲಜನಕ ಹೆಚ್ಚಾಗಿ ಲಭ್ಯವಾಗುತ್ತದೆ, ಇದು ದೀರ್ಘ-ದೂರದ ಯಾತ್ರೆಯಲ್ಲಿ ಆಯಾಸ ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ. ಡ್ರೀಮ್‌ಲೈನರ್‌ನ ಕ್ಯಾಬಿನ್ ನಲ್ಲಿ ತೇವಾಂಶ ಅಥವಾ ಆರ್ದ್ರತೆಯ ಮಟ್ಟ ಶೇ.15ರಷ್ಟು ಇರಿಸಬಹುದು. ಇದು ಸಾಮಾನ್ಯ ವಿಮಾನಗಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು. ಇದರಿಂದ ಒಣಗಿದ ಗಾಳಿಯಿಂದ ಉಂಟಾ ಗುವ ಒಣಚರ್ಮ, ಕಣ್ಣಿನ ಕಿರಿಕಿರಿ ಮತ್ತು ಗಂಟಲಿನ ಒಣಗುವಿಕೆ ಕಡಿಮೆಯಾಗುತ್ತವೆ.
ಎಂಜಿನ್‌ಗಳು ಮತ್ತು ಏರೋಡೈನಮಿಕ್ ವಿನ್ಯಾಸದಿಂದಾಗಿ ಕ್ಯಾಬಿನ್‌ನ ಶಬ್ದದ ಮಟ್ಟವು ಸಾಂಪ್ರದಾಯಿಕ ವಿಮಾನಗಳಿಗಿಂತ ಶೇ.60ರಷ್ಟು ಕಡಿಮೆಯಾಗಿದೆ. ಇದು ಪ್ರಯಾಣಿಕರಿಗೆ ಶಾಂತ ವಾದ ವಾತಾವರಣವನ್ನು ಒದಗಿಸುತ್ತದೆ. 787-8ರಲ್ಲಿ ಸಂಪೂರ್ಣ ಫ್ಲೈ-ಬೈ-ವೈರ್ ತಂತ್ರಜ್ಞಾನ ವನ್ನು ಬಳಸಲಾಗಿದೆ, ಇದರಲ್ಲಿ ಯಾಂತ್ರಿಕ ಕೇಬಲ್‌ಗಳ ಬದಲಿಗೆ ಲೆಕ್ಟ್ರಾನಿಕ್ ಸಿಗ್ನಲ್‌ಗಳು ವಿಮಾನದ ಎಲ್ಲ ಭಾಗಗಳನ್ನು ನಿಯಂತ್ರಿಸುತ್ತವೆ.
ಇದು ನಿಖರವಾದ ನಿಯಂತ್ರಣವನ್ನು ಒದಗಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. 2011ರಲ್ಲಿ, ಈ ವಿಮಾನ 19835 ಕಿ.ಮೀ. ದೂರವನ್ನು 22 ಗಂಟೆ 48 ನಿಮಿಷಗಳಲ್ಲಿ ಕ್ರಮಿಸಿ, ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತು. ಡ್ರೀಮ್‌ಲೈನರ್‌ನ ಯಶಸ್ಸಿನ ಹೊರತಾಗಿಯೂ, ಇದರ ಅಭಿವೃದ್ಧಿ ಮತ್ತು ಆರಂಭಿಕ ದಿನಗಳಲ್ಲಿ ಕೆಲವು ಸವಾಲುಗಳನ್ನು ಎದುರಿಸಿತು.
2013 ರಲ್ಲಿ, ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಉಂಟಾದ ಒಂದೆರಡು ಘಟನೆಗಳಿಂದಾಗಿ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ಗ್ರೌಂಡ್ ಮಾಡಲಾಯಿತು. ಆದರೆ, ಬೋಯಿಂಗ್ ಈ ಸಮಸ್ಯೆ ಯನ್ನು ಶೀಘ್ರವಾಗಿ ಪರಿಹರಿಸಿತು. ಈಗ 787-8 ಒಂದು ವಿಶ್ವಾಸಾರ್ಹ ವಿಮಾನ ಎಂದು ಪರಿಗಣಿತ ವಾಗಿದೆ. ಆದರೂ ಈ ವಿಮಾನ ಅಹಮದಾಬಾದಿನಲ್ಲಿಅಪಘಾತಕ್ಕೀಡಾಗಿರುವುದು ಮತ್ತೆ ಹತ್ತಾರು ಸಂದೇಹಗಳನ್ನು ಮೂಡಿಸಿದೆ.
