ನಾಗರಘಟ್ಟ ಗ್ರಾಮಪಂಚಾಯಿತಿಯಲ್ಲಿ ಅಕ್ರಮ : ರಾಷ್ಟ್ರೀಯ ಕಿಸಾನ್ ಸಂಘ

ತಿಪಟೂರು

              ಇಂದು ನಗರದ ಪ್ರವಾಸಿಮಂದಿರದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೊಂಚೆ ಶಿವರುದ್ರಪ್ಪ ಇಂದು ಅಧಿಕಾರಿಗಳು ಸರ್ಕಾರ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸದೆ ಹಳ್ಳಿಹಿಡಿಸಿದ್ದಾರೆ. ನಾವೀಗ ತಾಲ್ಲೂಕಿನಲ್ಲಿ ಒಂದಾದ ನಾಗರಘಟ್ಟವನ್ನು ತೆಗೆದುಕೊಂಡರೆ 2017 ರಲ್ಲಿ 197 ಶೌಚಾಲಯಗಳು ನಿರ್ಮಾಣವಾಗಿದ್ದು ಯಾರ ಖಾತೆಗೂ ಹಣ ಬಂದಿಲ್ಲ. ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸತ್ತವರು, ನೌಕರರು ಮತ್ತು ಶಾಲಾಮಕ್ಕಳ ಹೆಸರಿನಲ್ಲಿ ಉದ್ಯೋಗಕಾರ್ಡ್ ಮಾಡಿಸಿ ಕೇವಲ ಜೆ.ಸಿ.ಬಿ ಯಿಂದ ಕೆಲಸಮಾಡಿಸಿರುವುದನ್ನು ನಾವೇ ನೋಡಿದ್ದು ಇದರಬಗ್ಗೆ ನಾವು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರುಸಲ್ಲಿಸಿದ್ದರು ಇದುವರೆಗೂ ಯಾರ ಮೇಲೆ ಕ್ರಮಕೈಗೊಂಡಿಲ್ಲದಿರುವುದು ಅವರೂ ಸಹ ಇದಲ್ಲಿ ಶಾಮೀಲಾಗಿರಬಹುದೆಂಬ ಶಂಕೆಇದೆ ಎಂದರು.

             ನಾಗರಘಟ್ಟ ಗ್ರಾಮಪಂಚಾಯಿತಿಯ ಪಿ.ಡಿ.ಓ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ದಿನಾಂಕ:03-08-2018ರಂದು ಜಲಜಾಕ್ಷಿ, ಎನ್.ಜಿ.ವರ್ಷಿಣಿ, ಪ್ರಸಾದ್, ಲೋಕೇಶ್, ಪುಷ್ಪಲತಾ.ಎಂ. ಕೆ.ಬಿ.ಬೆಟ್ಟಾಚಾರಿ ಕವಿತ ಇನ್ನೂ ಮುಂತಾದವರು ಬರಗಾಲವಿದೆ, ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ ಆದ್ರಿಮದ ನಮಗೆ ಉದ್ಯೋಗಖಾತ್ರಿ ಯೋನೆಯಡಿ ಕೆಲಸಕೊಡಿ ಎಂದು ಖುದ್ದಾಗಿ ಕಛೇರಿಗೆ ಹೋಗಿ ಅರ್ಜಿಸಲ್ಲಿಸಿರುತ್ತಾರೆ. ಆದರೆ ಇವರ ಅರ್ಜಿಗಳನ್ನು ನಿರ್ಲಕ್ಷಿಸಿ ಇಲ್ಲದ ಸಬೂಬು ಹೇಳಿ ದಿನಾಂಕ:06-09-2018ರಂದು ಅರ್ಜಿಯನ್ನು ತಿರಸ್ಕರಿಸಿರುತ್ತಾರೆ

           ಇನ್ನು ಶೌಚಲಯದ ಬಿಲ್, ಮನೆ ನಿರ್ಮಾಣಕ್ಕೆ ಪತ್ರಿಯೊಂದಕ್ಕೂ ಬಿಲ್‍ಮಾಡಲು ರೂ 10000 ರಿಂದ 25000ರೂಗಳ ವರೆಗೂ ಲಂಚವನ್ನು ಕೇಳುತ್ತಿದ್ದಾರೆ ಎಂದು ಸಾವಿತ್ರಿಯವರು ತಿಳಿಸಿದರು.

            ರಾಷ್ಟ್ರೀಯ ಕಿಸಾನ್ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳ ಡಾ.ಸ್ವಾಮಿ ಮಾತನಾಡಿ ತಿಪಟೂರು ತಾಲೂಕನ್ನು ಬರಪೀಡಿತ ತಾಲ್ಲೂಕೆಂದು ಘೋಷಿಸಿ ಆಂದ್ರ ಮಾದರಿಯಲ್ಲಿ ಪಹಣೀದಾರರ ರೈತರ ಖಾತೆಗೆ ನೇರವಾಗಿ ಪ್ರತಿ ಎಕರೆಗೆ 12000/-ರೂಗಳನ್ನು ಮತ್ತು ಕೊಬ್ಬರಿಗೆ ಕನಿಷ್ಠ 20000/-ರೂಗಳನ್ನು ಕೊಡಬೇಕೆಂದು ಒತ್ತಾಯಿಸಿದರು.

             ಇವುಗಳ ಬಗ್ಗೆ ಇನ್ನೊಂದು ವಾರದಲ್ಲಿ ನಮ್ಮ ನೇಡಿಕೆಗಳು ಈಡೇರದೇ ಹೋದಲ್ಲಿ ತಿಪಟೂರು ತಾಲ್ಲೂಕು ಕಛೇರಿಯ ಮುಂಭಾಗ ಅಧಿಕಾರಿಗಳಿಗೆ ಗೆರಾವ್ ಹಾಕಲಾಗುವುದು ಎಂದು ತಿಳಿಸಿದರು.ಸುದ್ಧಿಘೋಷ್ಠಿಯಲ್ಲಿ ರಾ.ಕಿ.ಸ ತಿಪಟೂರು ಅಧ್ಯಕ್ಷ ನೀಲಕಂಠಸ್ವಾಮಿ, ಜಿಲ್ಲಾ ಸಂಚಾಲಕಿ ಚಂದ್ರಕಲಾ, ನೊಣವಿನಕೆರೆ ಹೋಬಳಿ ಸಮಿತಿಯ ನೀಲಾಂಭಿಕೆ, ಪ್ರಶಾಂತ್, ಹೇಮಂತ್‍ಕುಮಾರ್ ಮುಂತಾದವರಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap