ನಾಯಿ ದಾಳಿಗೆ ತುತ್ತಾದ ಬಾಲಕಿಯ ಪೋಷಕರ ಭೇಟಿ, ಪರಿಹಾರದ ಭರವಸೆ

ಕುಣಿಗಲ್
            ನಾಯಿ ದಾಳಿಗೆ ತುತ್ತಾದ ಬಾಲಕಿಯ ಪೋಷಕರ ಮನೆಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
            ಕೊತ್ತಗೆರೆ ಹೋಬಳಿಯ ಮಾವಿನಕಟ್ಟೆ-ನಿಂಗಯ್ಯನಪಾಳ್ಯ ಗ್ರಾಮದ 12 ವರ್ಷದ ತೇಜಸ್ವಿನಿ ಎಂಬ 6ನೇ ತರಗತಿ ಬಾಲಕಿಯ ಮೇಲೆ  ದೊಡ್ಡಕೆರೆಯ ಹಿನ್ನೀರಿನ ಕೆರೆಯ ಹಂಚಿನಲ್ಲಿ ನಾಯಿಗಳ ದಾಳಿಯಿಂದ ಬಾಲಕಿ ಮೃತಪಟ್ಟಿದ್ದಳು.
          ಈ ವಿಚಾರವಾಗಿ ಸಂಬಂಧಪಟ್ಟ ಪೋಷಕರನ್ನ ಭೇಟಿ ಮಾಡಲು ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಮತ್ತು ಶಾಸಕ ಡಾ.ರಂಗನಾಥ್ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತಳ ಮನೆಯ ಬಳಿ ತೆರಳಿ ಮಗಳನ್ನು ಕಳೆದುಕೊಂಡ ಗಂಗಾಧರಯ್ಯ ಗಂಗಮ್ಮ ದಂಪತಿಗಳಿಗೆ ಸಾಂತ್ವಾನ ತಿಳಿಸಿ ಸರ್ಕಾರದಿಂದ ಬರುವಂತಹ ಪರಿಹಾರವನ್ನು ಶೀಘ್ರವಾಗಿ ಮಂಜೂರು ಮಾಡಿಸುತ್ತೇವೆಂದು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
          ಈ ಸಂದರ್ಭದಲ್ಲಿ ಶಾಸಕರು ಮೃತಳ ತಂದೆ ತಾಯಿಗೆ 25 ಸಾವಿರ ರೂಗಳ ತಮ್ಮ ವೇತನದ ಹಣವನ್ನು ಪರಿಹಾರವಾಗಿ ನೀಡಿದರು.
          ಮಾಂಸ ಮಾರಾಟ ಹಾಗೂ ಕೋಳಿ ಅಂಗಡಿಯವರು ಬೇಕಾಬಿಟ್ಟಿ ತ್ಯಾಜ್ಯ ಹಾಕುತ್ತಿದ್ದಾರೆ. ಬಂದಂತಹ ತ್ಯಾಜ್ಯವನ್ನೆಲ್ಲ ಹಳ್ಳಿಗಳಲ್ಲಿ ತಂದು ಸುರಿಯುತ್ತಾರೆ ಎಂದಾಗ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಮತ್ತು ಜನಪ್ರತಿನಿದಿಗಳಿದ್ದರು.

Recent Articles

spot_img

Related Stories

Share via
Copy link