ತುಮಕೂರು
ಶಿರಾ ನಗರದ ಬೈಪಾಸ್ ರಸ್ತೆಯ ಕಂಡಗದ್ಯ ಕರಿಯಮ್ಮ ದೇವಸ್ಥಾನದ ಬಳಿ ಬೆಂಗಳೂರಿನಿಂದ ಬಾಗಲಕೋಟೆಗೆ ಹೋಗುತ್ತಿದ್ದ ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮಹಾಂತೇಶ್ ಆಲಗುಂಡಿ(41) ಮತ್ತು ಅವರ ಪತ್ನಿ ಭಾಗ್ಯವತಿ(28) ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಮಕ್ಕಳಾದ ಪ್ರಗತಿ ಮತ್ತು ಪ್ರಾಣ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಬಸವರಾಜು ಮತ್ತು ಗಿರೀಶ್‍ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
