
ಗುಬ್ಬಿ: ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಇತರೆ ಕಾಮಗಾರಿಗಳ ನೆಪವೊಡ್ಡಿ ಬೇಕಾಬಿಟ್ಟಿ ಮರಗಳನ್ನು ಕಡಿಯಲಾಗುತ್ತಿದ್ದು, ಮರಗಳ್ಳರೊಂದಿಗೆ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಬಿಜೆಪಿ ಮುಖಂಡ ಜಿ.ಆರ್. ರಮೇಶ್ ಗಂಭೀರವಾಗಿ ಆರೋಪಿಸಿದ್ದಾರೆ. ತಕ್ಷಣವೇ ಮರಗಳ್ಳರನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಮನೆ ಪಕ್ಕದಲ್ಲೇ ಮರ ಕಡಿತ: ಸಾರ್ವಜನಿಕರ ಆಕ್ರೋಶ
ಗುಬ್ಬಿ ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಹೆಸರಿನಲ್ಲಿ ಹಸಿರು ನಾಶವಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಗುಬ್ಬಿ ತಹಶೀಲ್ದಾರ್ ನಿವಾಸದ ಪಕ್ಕದಲ್ಲಿರುವ ಪಾರ್ಕ್‌ನಲ್ಲಿದ್ದ ಮರವೊಂದನ್ನು ಕಡಿದಿರುವುದನ್ನು ಖಂಡಿಸಿ, ಸಾರ್ವಜನಿಕರು ಹಾಗೂ ಬಿಜೆಪಿ ಮುಖಂಡರು ಸ್ಥಳದಲ್ಲೇ ದಿಢೀರ್ ಮುಷ್ಕರ ನಡೆಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಬಿ. ಚಂದ್ರಶೇಖರ್ ಬಾಬು , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್. ಟಿ. ಬೈರಪ್ಪ, ಸಾಗರನಹಳ್ಳಿ ವಿಜಯ ಕುಮಾರ್, ಬಿ. ಎಸ್. ಪಂಚಾಕ್ಷರಿ, ಯತೀಶ್, ಸಲೀಂ ಪಾಷಾ, ಲೋಕೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.
ಸಿ.ಆರ್. ಶಂಕರ್ ಕುಮಾರ್ ಆಗ್ರಹ: “ಅಭಿವೃದ್ಧಿಯ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ತಹಶೀಲ್ದಾರ್ ಮನೆ ಪಕ್ಕದಲ್ಲೇ ಮರ ಕಡಿಯುವ ಧೈರ್ಯ ಮರಗಳ್ಳರಿಗೆ ಬಂದಿದೆ ಎಂದರೆ ಅಧಿಕಾರಿಗಳ ಕುಮ್ಮಕ್ಕು ಎಷ್ಟಿರಬಹುದು? ಕಾನೂನುಬಾಹಿರವಾಗಿ ಮರ ಕಡಿದವರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು.”








